Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಫೋಕ್ಸೋ ಕಾಯ್ದೆ : ಮಾಜಿ ಸಿಎಂ ಯಡಿಯೂರಪ್ಪರಿಗೆ ಬಿಗ್ ಶಾಕ್..!

---Advertisement---

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೇಲೆ ಫೋಕ್ಸೋ ಕಾಯ್ದೆಯಡಿ ದೂರೊಂದು ದಾಖಲಾಗಿತ್ತು. ಇದೀಗ ಆ ಕೇಸ್ ಗೆ ಬಿಗ್ ಶಾಕ್ ಎದುರಾಗಿದೆ. ಈ ಕೇಸಲ್ಲಿ ಸಮನ್ಸ್ ರದ್ದು ಪಡಿಸುವುದಕ್ಕೆ ಹೈಕೋರ್ಟ್ ನ್ಯಾಯಾಲಯ ಹಿಂಜರಿದಿದೆ. ತ್ವರಿತ ನ್ಯಾಯಾಲಯದ ಸಮನ್ಸ್ ಅನ್ನು ರದ್ದುಪಡಿಸುವುದಕ್ಕೆ ನಕಾರ ತೋರಿದೆ. ಕಾಗ್ನಿಜೆನ್ಸ್ ಪಡೆದು ಸಮನ್ಸ್ ಅನ್ನು ನೀಡಿತ್ತು. ಆ ಕ್ರಮವನ್ನು ರದ್ದುಪಡಿಸಲು ಹೈಕೋರ್ಟ್ ಹೇಳಿದೆ. ಅಗತ್ಯವಿಲ್ಲದೆ ಇದ್ದಾರ ಖುದ್ದು ಹಾಜರಿಯಿಂದ ವಿನಾಯಿತಿಯನ್ನು ಪಡೆಯಬಹುದು. ಬಿಎಸ್ ಯಡಿಯೂರಪ್ಪ ಅವರು ಖುದ್ದು ಹಾಜರಾತಿಯಿಂದ ವಿನಾಯಿತಿಯನ್ನು ಪಡೆಯಬಹುದಾಗಿದೆ.

ವಿನಾಯಿತಿ ಪಡೆಯುವುದಕ್ಕೆ ಅರ್ಜಿಯನ್ನು ಸಲ್ಲಿಸಬಹುದು, ಮನವಿಯನ್ನು ಪರಿಗಣಿಸಲು ತ್ವರಿತ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆಯನ್ನು ನೀಡಿದೆ. ಫೆಬ್ರವರಿ 28ರಂದು ತ್ವರಿತ ನ್ಯಾಯಾಲಯ ಸಮನ್ಸ್ ಅನ್ನು ಜಾರಿಗೊಳಿಸಿತ್ತು. ಈಗ ದಿನಾಂಕವನ್ನು ನಿಗದಿ ಪಡಿಸಲಿದೆ. ನ್ಯಾಯಮೂರ್ತಿ. ಎಂಐ ಅರುಣ್ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶವನ್ನು ನೀಡಿದೆ.

ಕಳೆದ ಒಂದೂವರೆ ವರ್ಷದಿಂದ ಈ ಕೇಸ್ ನಡೆಯುತ್ತಾ ಇತ್ತು. ಬಿಎಸ್ ಯಡಿಯೂರಪ್ಪ ಅವರ ಮೇಲೂ ಕೇಸ್ ದಾಖಲಾಗಿದೆ. ಈ ಕೇಸಲ್ಲಿ ಇನ್ನು ಮೂವರ ಮೇಲೂ ಕೇಸ್ ದಾಖಲಾಗಿತ್ತು. ಈ ಸಮನ್ಸ್ ಆದೇಶವನ್ನು ಪ್ರಶ್ನೆ ಮಾಡಿ ಈ ಎಲ್ಲರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಸಮನ್ಸ್ ರದ್ದು ಮಾಡುವುದಕ್ಕೆ ನಿರಾಕರಣೆ ಮಾಡಿದ್ದು, ಪೋಕ್ಸೋ ಪ್ರಕರಣದಲ್ಲಿ ಹೊರಡಿಸಿದ್ದ ದೋಷಾರೋಪ ಸೂಕ್ತವಾಗಿದೆ ಎಂಬುದನ್ನು ಅಭಿಪ್ರಾಯ ಪಟ್ಟಿದೆ. ಇನ್ಮೇಲೆ ಯಡಿಯೂರಪ್ಪ ಅವರು ಖುದ್ದಾಗಿ ವಿಚಾರಣೆಗೆ ಹಾಜರಾಗಬೇಕಾಗಿದೆ. ಈ ಮೂಲಕ ಯಡಿಯೂರಪ್ಪ ಅವರಿಗೆ ಈ ಫೋಕ್ಸೋ ಪ್ರಕರಣ ಸಂಕಷ್ಟ ತಂದೊಡ್ಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now