Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರಧಾನಿ ಮೋದಿ ಭೇಟಿ ಫೋಟೋ ವೈರಲ್ : ಡಿಕೆಶಿ ಮೇಲೆ ಹೈಕಮಾಂಡ್ ಬೇಸರ.. ಆರ್ ಅಶೋಕ್ ಹೇಳಿದ್ದೇನು..?

---Advertisement---

ಬೆಂಗಳೂರು: ಮೊದಲೇ ರಾಜ್ಯ ಕಾಂಗ್ರೆಸ್ ನಲ್ಲಿಹಲವು ಸಮಸ್ಯೆಗಳು ತಲೆದೂರಿವೆ. ಅತ್ತ ಮೂಡಾ ಹಗರಣ.. ಇತ್ತ ಸಿಎಂ ಬದಲಾವಣೆಯ ಚರ್ಚೆ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾದ ಫೋಟೋ ವೈರಲ್ ಆಗಿದೆ. ಇದನ್ನು ಕಂಡು ಸ್ವತಃ ಕಾಂಗ್ರೆಸ್ ಹೈಕಮಾಂಡ್ ಬೇಸರಗೊಂಡಿದೆ. ಮೋದಿಯವರನ್ನು ಭೇಟಿಯಾಗಿದ್ದ ವಿಷಯ ಹೈಕಮಾಂಡ್ ಗೂ ಗೊತ್ತಿಲ್ಲದೆ ಇರುವುದು ಆಶ್ಚರ್ಯವನ್ನುಂಟು ಮಾಡಿದೆ.

ಕಳೆದ ಬಾರಿ ದೆಹಲಿಗೆ ಹೋದಾಗ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ, ಮಾತುಕತೆ ನಡೆಸಿ ಬಂದಿದ್ದಾರೆ. ಈ ವಿಚಾರವೇ ಕಾಂಗ್ರೆಸ್ ಹೈಕಮಾಂಡ್ ಬೇಸರಕ್ಕೆ ಕಾರಣವಾಗಿದೆ. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಅವರ ಬಳಿಯೇ ನೇರವಾಗಿ ರಣದೀಪ್ ಸುರ್ಜೆವಾಲಾ, ಕೆ.ಸಿ.ವೇಣುಗೋಪಾಲ್ ಅವರು ಭೇಟಿ ಹಿಂದಿನ ಸೀಕ್ರೆಟ್ ತಿಳಿಯಲು ಒಂದಷ್ಟು ಪ್ರಶ್ನೆಗಳನ್ನು ಮಾಡಿದ್ದಾರೆ.

ಮೋದಿ ಭೇಟಿ ಸಿಎಂ ಗಳಿಗೆ ಸಿಗುವುದಿಲ್ಲ ನಿಮಗೆ ಸಿಕ್ಕಿದ್ದೇಗೆ..? ಅಷ್ಟಕ್ಕೂ ನೀವೇಕೆ ಮೋದಿಯವರನ್ನು ಭೇಟಿಯಾಗಿದ್ದು..? ಅವರನ್ನು ಭೇಟಿಯಾಗಲು ಹೇಳಿದ್ದು ಯಾರು..? ಅವರು ನಮ್ಮ ರಾಜಕೀಯ ಎದುರಾಳಿ.. ಈಗ ಅವರ ಭೇಟಿಯ ಅವಶ್ಯಕತೆ ಇತ್ತಾ..? ರಾಜ್ಯ ಸಂಘಟನೆಯಲ್ಲಿ ಉನ್ನತ ಅಧಿಕಾರದಲ್ಲಿ ಇದ್ದೀರಿ‌ ನೀವು..!, ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿ ಈ ರೀತಿ ಕೆಲಸ ಮಾಡಬಾರದಿತ್ತು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ನೇರಾ ನೇರ ಉತ್ತರ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ನಾನು ನನ್ನ ಇಲಾಖೆಯ ವಿಚಾರವಾಗಿ ಅವರನ್ನು ಭೇಟಿ ಮಾಡಿದ್ದೆ. ಯಾವುದೇ ರಾಜಕೀಯ ಉದ್ದೇಶಕ್ಕೆ ಭೇಟಿ ಮಾಡಿಲ್ಲ. ನನ್ನ ಹಾಗೂ ಪ್ರಧಾನಿ ಮೋದಿ ಭೇಟಿಯಲ್ಲಿ ರಾಜಕಾರಣವನ್ನು ಬೆರೆಸುವ ಅಗತ್ಯವಿಲ್ಲ‌. ಇಲ್ಲಿನ ರಾಜಕೀಯ ಬೆಳವಣಿಗೆಗೂ ನನ್ನ ಭೇಟಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ಇನ್ನು ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಪ್ರಧಾನಿ ಮೋದಿ ಅವರ ಭೇಟಿ ಅಷ್ಟು ಸುಲಭವಲ್ಲ. ಆದರೆ ಡಿಕೆ ಶಿವಕುಮಾರ್ ಅವರಿಗೆ ಸಿಕ್ಕಿದ್ದು ಹೇಗೆ ಎಂಬುದೇ ಕುತೂಹಲಕಾರಿ ಪ್ರಶ್ನೆಯಾಗಿದೆ. ಪ್ರಧಾನಿ ಅವರನ್ನ ಭೇಟಿಯಾಗಿದ್ದು ಯಾಕೆ ಅಂತ ಅವರ ಹೈಕಮಾಂಡ್ ಪ್ರಶ್ನೆ ಮಾಡಿದೆ. ಸಿಎಂ ರೇಸ್ ನಲ್ಲಿ ಇರೋರದ್ದು ಒಬ್ಬೊಬ್ಬರದ್ದು ಒಂದೊಂದು ಮಾರ್ಗ. ಮುಂದೆ ತೊಂದರೆ ಆಗದಂತೆ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಉತ್ತರಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...