Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಭವಿಷ್ಯದ ಪೀಳಿಗೆ ರಕ್ಷಣೆಗೆ ಗಿಡ ಮರಗಳು ಅಗತ್ಯ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

Facebook
Twitter
Telegram
WhatsApp

ಚಿತ್ರದುರ್ಗ, ಜೂ.05: ಪರಿಸರ ದಿನಾಚರಣೆ ದಿನ ಗಿಡಗಳನ್ನು ನೆಡುವುದಕ್ಕೆ ಬಹಳ ಮಹತ್ವವಿದೆ. ಭವಿಷ್ಯದ ಪೀಳಿಗೆ ರಕ್ಷಣೆಗೆ ಗಿಡ ಮರಗಳ ಅಗತ್ಯವಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಸರ್ಕಾರಿ ಮೆಟ್ರಿಕ್ ನಂತರದ ಪರಿಶಿಷ್ಟ ಜಾತಿ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ, ನಗರಸಭೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.

ಇತ್ತೀಚಿನ ದಿನದಲ್ಲಿ ಕಾಡು, ಮರಗಿಡಗಳ ನಾಶದಿಂದ ಪರಿಸರ ಅಸಮತೋಲವಾಗಿದೆ. ಜಾಗತಿಕ ಉಷ್ಣಾಂಶ ಏರಿಕೆಯಾಗಿದೆ.‌ ಭೂಮಿಯ ಮೇಲೆ ಜೀವ ಸಂಕುಲ ಉಳಿಯಲು ನಿರ್ದಿಷ್ಟ ಪ್ರಮಾಣದ ಅರಣ್ಯ ಇರಬೇಕಾದುದು ನಿಯಮ. ಈ ಪರಿಸರ ಸಮತೋಲ ಕಾಪಡದಿದ್ದರೆ, ಏರು ಪೇರು ಆಗುತ್ತಿದೆ. ಪರಿಸರ ಮಲಿನವಾಗಿ ಅನೇಕ ಖಾಯಿಲೆ, ರೋಗ ರುಜಿನ, ಸಾಂಕ್ರಾಮಿಕಗಳು ಹರಡುತ್ತವೆ. ನಾನು ಚಿಕ್ಕವರಿದ್ದಾಗ ಜೂನ್ ತಿಂಗಳಲ್ಲಿ ಸಸಿ ನೆಟ್ಟು, ರಕ್ತದಾನ ಮಾಡುತ್ತಿದ್ದೆವೆ. 1975 ರಲ್ಲಿ ಕಲಾ ಕಾಲೇಜು ಆವರಣದಲ್ಲಿ ನೆಟ್ಟ ಗಿಡಗಳು ಇಂದು ಮರಗಳಾಗಿ ಬೆಳೆದು ನೆರಳು ನೀಡುತ್ತಿವೆ‌ ಎಂದರು.

ಜೂನ್ 05 ರಂದು ನೆಡುವ ಗಿಡಗಳು ಪೂರ್ಣ ಪ್ರಮಾಣದಲ್ಲಿ ಮರಗಳಾದರೆ ಸಾಕಷ್ಟು ಪ್ರಮಾಣ ಅರಣ್ಯ ಅಭಿವೃದ್ಧಿ ಆಗಿರುತ್ತಿತ್ತು. ಆದರೆ ಹಾಗೆ ಆಗುವುದಿಲ್ಲ. ಸರಿಯಾದ ಕಾಳಜಿ ಹಾಗೂ ಪೋಷಣೆ ಇರದೆ ಗಿಡಗಳು ನಶಿಸುತ್ತವೆ. ಮಕ್ಕಳು ತಾವು ನೇಡುವ ಗಿಡಗಳು, ಮನೆಯ ಸುತ್ತಲಿನ ಗಿಡಮರಗಳ ಕಾಳಜಿ ವಹಿಸಬೇಕು. ನಗರದಲ್ಲಿ ಸಾಕಷ್ಟು ಮರಗಳನ್ನು ಕಡಿಯುತ್ತಿರುವುದು ನೋವಿನ ಸಂಗತಿ. ನಗರ ಅಭಿವೃದ್ಧಿಗೆ ಮರ ಕಡೆಯುವುದು ಅನಿವಾರ್ಯವಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಗಿಡ ಮರಗಳನ್ನು ಬೆಳೆಸಲಾಗುವುದು. ಕಡಿದ ಮರಗಳಿಗೆ‌ ಮೂರರಷ್ಟು ಗಿಡಗಳನ್ನು ಬೆಳಸಲಾಗುತ್ತಿದೆ. ಇದನ್ನು ರಸ್ತೆ ಬದಿಗಳಲ್ಲಿ ಸಾರ್ವಜನಿಕರು ಗಮನಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಮಾತನಾಡಿ ವಿಶ್ವದಲ್ಲೇ ಜೀವಿ ವೈವಿದ್ಯ ಹೊಂದಿರುವ ಏಕೈಕ ಗ್ರಹ ಭೂಮಿ. ಇಲ್ಲ ಮಾತ್ರ ಜೀವರಾಶಿ ಇದೆ. ಭೂಮಿಯನ್ನು ಕಾಪಾಡಲು ಶೇ.33 ರಷ್ಟು ಅರಣ್ಯ ಇರುವುದು ಅವಶ್ಯಕ. ಅಭಿವೃದ್ಧಿ ಪಥದಲ್ಲಿ ಇದರ ಪ್ರಮಾಣ ಕಡಿಮೆ ಆಗುತ್ತಿದೆ. ನಾವು ವಾಸಿಸುವ ಜಾಗದಲ್ಲಿ ಗಿಡ ಮರ ನೆಟ್ಟು ಪರಿಸರ ಸಮತೋಲ ಕಾಪಾಡಬೇಕು. ಇಂದು ಸರ್ಕಾರ, ಚುನಾವಣಾ ಆಯೋಗದ‌ ಸೂಚನೆ ಮೇರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಸರ ರಕ್ಷಣೆಗೆ ಮಹತ್ವ ನೀಡಿದಷ್ಟೇ ಪ್ರಾಮುಖ್ಯತೆ ನೀಡಿ ಚುನಾವಣೆಯಲ್ಲಿ ಮತದಾನ ಮಾಡಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕು. ಯುವ ಮತದಾರರು ಮರೆಯದೆ ಮತದಾನ ಮಾಡಬೇಕು ಎಂದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿತ್ರದುರ್ಗ ನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಸಾಮಾಜಿಕ ಅರಣ್ಯ ಚಟುವಟಿಕೆ ಅಡಿ ರೈತರಿಗೆ ಸಸಿ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಬೋಧಿಸಲಾಯಿತು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ತಹಶೀಲ್ದಾರ್ ಸತ್ಯನಾರಾಯಣ, ಚುನಾವಣಾ ತಹಶೀಲ್ದಾರ್ ಕೃಷ್ಣ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪಿ.ಮಮತಾ, ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಪ್ರಾದೇಶಿಕ ಅರಣ್ಯ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ, ವಿದ್ಯಾರ್ಥಿ ನಿಲಯದ ನಿಲಯ ಪಾಲಕರು, ವಿದ್ಯಾರ್ಥಿನಿಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!