Phone addiction : ಮಕ್ಕಳು ಫೋನ್ ನೋಡುತ್ತಾ ಊಟ ಮಾಡಿದರೆ ಇಷ್ಟೆಲ್ಲಾ ಸಮಸ್ಯೆಯಾಗುತ್ತಾ ?

suddionenews
2 Min Read

ಸುದ್ದಿಒನ್ : ಸ್ಮಾರ್ಟ್ ಫೋನ್ ಬರುವ ಮೊದಲು ಚಂದಮಾಮನನ್ನು ತೋರಿಸಿ ಅಥವಾ ಕಥೆಯನ್ನು ಹೇಳುತ್ತಾ ತಾಯಿ ತನ್ನ ಮಕ್ಕಳಿಗೆ ಊಟ ಮಾಡಿಸುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಮೊಬೈಲ್ ತೋರಿಸಿ ಮಕ್ಕಳಿಗೆ ಊಟ ಮಾಡಿಸುವ ಕಾಲ ಬಂದಿದೆ. ಆದರೆ ಕ್ರಮೇಣ ಇದು ಮಕ್ಕಳಿಗೆ ಅಭ್ಯಾಸವಾಗುತ್ತದೆ. ಈ ಅಭ್ಯಾಸದಿಂದಾಗಿ ಮಕ್ಕಳು ಫೋನ್ ನೋಡದೆ ಊಟವನ್ನೇ ಮಾಡುವುದಿಲ್ಲ. ಇದಲ್ಲದೆ, ಈ ಅಭ್ಯಾಸದಿಂದ ಮಕ್ಕಳ ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಮಗುವಿಗೆ ಫೋನ್ ತೋರಿಸುವುದರಿಂದ ಅನೇಕ ರೋಗಗಳು ಬರಬಹುದು. ಎಷ್ಟೇ ಕಷ್ಟವಾದರೂ ಸರಿ ಮಕ್ಕಳು ಊಟ ಮಾಡುವಾಗ ಮೊಬೈಲ್ ಫೋನ್ ಕೊಡುವ ಅಭ್ಯಾಸವನ್ನು ತಪ್ಪಿಸುವುದು ಉತ್ತಮ.

 

ಜೀರ್ಣಕ್ರಿಯೆ ದುರ್ಬಲ :

ಮಕ್ಕಳು ಮೊಬೈಲ್ ಫೋನ್ ನೋಡುತ್ತಾ ಊಟ ಮಾಡುವಾಗ ಅವರ ಗಮನವೆಲ್ಲಾ ಮೊಬೈಲ್ ಫೋನ್ ಮೇಲೆ ಇರುತ್ತದೆ. ಆದ್ದರಿಂದ ಅವರಿಗೆ ಊಟದ ಕಡೆಗೆ ಗಮನ ಕಡಿಮೆಯಾಗಿ ಅತಿಯಾಗಿ ತಿನ್ನುತ್ತಾರೆ ಅಥವಾ ಕಡಿಮೆ ತಿನ್ನುತ್ತಾರೆ. ಅಂದರೆ ಅವರು ಹಸಿದಿದ್ದಕ್ಕಿಂತ ಕಡಿಮೆ ತಿನ್ನುತ್ತಾರೆ. ಕೆಲವೊಮ್ಮೆ ಅವರು ಊಟದ ಮೇಲೆ ತಿನ್ನುವ ಆಹಾರದ ಮೇಲೆ ಗಮನ ಕಡಿಮೆಯಾಗುತ್ತದೆ. ಅತಿಯಾಗಿ ತಿನ್ನುವುದರಿಂದ ಬೊಜ್ಜು ಬರುತ್ತದೆ ಮತ್ತು ಕಡಿಮೆ ತಿನ್ನುವುದರಿಂದ ಅಪೌಷ್ಟಿಕತೆಗೆ ಕಾರಣವಾಗಬಹುದು. ಇದಲ್ಲದೆ, ಮಕ್ಕಳು ಫೋನ್ ನೋಡುತ್ತಾ ಅಗಿಯದೆ ಆಹಾರವನ್ನು ನುಂಗುತ್ತಾರೆ. ಇದು ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸುತ್ತದೆ. ಇದರಿಂದಾಗಿ ಅನೇಕ ರೋಗಗಳ ಬರುವ ಸಾಧ್ಯತೆ ಇದೆ.

ಜೀರ್ಣಕಾರಿ ಸಮಸ್ಯೆಗಳು :

ಊಟ ಮಾಡುವಾಗ ಫೋನ್ ನೋಡುವುದರಿಂದ ಮಕ್ಕಳ ಜೀರ್ಣಾಂಗ ವ್ಯವಸ್ಥೆ ಹಾಳಾಗುತ್ತದೆ. ಅಗತ್ಯವಿದ್ದಷ್ಟು ಆಹಾರವನ್ನು ತಿನ್ನದಿದ್ದರೆ ಅಜೀರ್ಣ, ಗ್ಯಾಸ್ಟ್ರಿಕ್‌ ನಂತಹ ಜೀರ್ಣಕ್ರಿಯೆ ಸಮಸ್ಯೆಗಳು ಬರುತ್ತವೆ. ಅಲ್ಲದೆ ಫೋನ್ ನೋಡುವುದರಿಂದ ಮಕ್ಕಳ ಕಣ್ಣಿಗೂ ಹಾನಿಯಾಗುತ್ತದೆ. ಮೊಬೈಲ್ ಪರದೆಯನ್ನು ಹೆಚ್ಚು ನೋಡಿದರೆ ಮಕ್ಕಳ ಕಣ್ಣುಗಳು ಆಯಾಸಗೊಳ್ಳುತ್ತವೆ. ಇದು ಕಣ್ಣಿನ ಸಮಸ್ಯೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಒತ್ತಡ ಮತ್ತು ಆತಂಕ :

ಊಟ ಮಾಡುವಾಗ ಫೋನ್ ನೋಡುವುದರಿಂದ ಮಕ್ಕಳ ಮಾನಸಿಕ ಆರೋಗ್ಯ ಕೆಡುತ್ತದೆ. ಏಕೆಂದರೆ ಫೋನ್ ನೋಡುತ್ತಾ ಮಗು ಸರಿಯಾಗಿ ಊಟ ಮಾಡುವುದಿಲ್ಲ. ದೇಹಕ್ಕೆ ಪೋಷಣೆ ಸಿಗುವುದಿಲ್ಲ. ಇದರಿಂದ ಮಾನಸಿಕ ಸಮಸ್ಯೆಗಳು ಎದುರಾಗುತ್ತವೆ.

ಬೆಳವಣಿಗೆಯ ಮೇಲೆ ಪರಿಣಾಮ :

ಫೋನ್ ನೋಡುವುದರಿಂದ ಮಕ್ಕಳ ಸಾಮರ್ಥ್ಯ ಕುಂಠಿತವಾಗಬಹುದು. ಇದು ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ಫೋನ್ ನೋಡುವಾಗ ಮಗುವಿಗೆ ಹಸಿವಾಗುವುದಿಲ್ಲ. ಸರಿಯಾಗಿ ತಿನ್ನುವುದಿಲ್ಲ. ಪರಿಣಾಮವಾಗಿ, ದೇಹವು ಅಪೌಷ್ಟಿಕತೆಗೆ ಒಳಗಾಗುತ್ತದೆ. ಮಕ್ಕಳ ತೂಕ ಮತ್ತು ಎತ್ತರದಲ್ಲಿ ವ್ಯತ್ಯಯವಾಗುತ್ತದೆ. ಸರಿಯಾದ ಬೆಳವಣಿಗೆಯಿಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ.

ಫೋನ್ ಕೊಡದಿರಲು ಏನು ಮಾಡಬೇಕು ?

• ಊಟದ ಸಮಯದಲ್ಲಿ ನಿಮ್ಮ ಮಗುವಿಗೆ ಫೋನ್ ನೀಡದಿರಲು ಪ್ರಯತ್ನಿಸಿ.

• ಫೋನ್ ಬಳಸುವುದು ಆರೋಗ್ಯಕ್ಕೆ ಹಾನಿಕರ ಎಂದು ಮಕ್ಕಳಿಗೆ ಪದೇ ಪದೇ ತಿಳಿ ಹೇಳಿ.

• ನಿವೇ ಹತ್ತಿರವಿದ್ದು ಮಕ್ಕಳಿಗೆ ಆಹಾರವನ್ನು ತಿನ್ನಿಸಿ. ಅವರು ಸರಿಯಾಗಿ ತಿನ್ನುತ್ತಾರೋ ಇಲ್ಲವೋ ಎಂಬುದನ್ನು ಗಮನಿಸಿ.

• ಒಳ್ಳೆಯ ಮಾತುಗಳು ಹೇಳುತ್ತಾ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀವು ಹೇಳಿದ ಮಾತುಗಳನ್ನು ಕೇಳುವಂತೆ ಪ್ರೀತಿಯಿಂದ ನಡೆದುಕೊಳ್ಳಿ.

Share This Article
Leave a Comment

Leave a Reply

Your email address will not be published. Required fields are marked *