ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಜನ ಆರೋಪಿಗಳು ಜೈಲು ಪಾಲಾಗಿದ್ದಾರೆ. ಜೈಲಿಗೆ ಸೇರಿದ ಪ್ರತಿಯೊಬ್ಬ ಆರೋಪಿಯ ಫೋಟೋಗಳನ್ನು ಅಲ್ಲಿನ ಜೈಲು ಅಧಿಕಾರಿಗಳು ತೆಗೆದು ದಾಖಲೆಗಳ ಜೊತೆಗೆ ಸೇರಿಸುತ್ತಾರೆ. ಕಳೆದ ಬಾರಿ ಜೈಲಿಗೆ ಹೋದಾಗಲೂ ದರ್ಶನ್ ಹಾಗೂ ಪವಿತ್ರಾ ಗೌಡ ಫೋಟೋ ತೆಗೆದಿದ್ದರು. ಈ ಬಾರಿಯೂ ಇಬ್ಬರ ಫೋಟೋವನ್ನು ಪೊಲೀಸರು ತೆಗೆದಿದ್ದಾರೆ.
ಇಬ್ಬರ ಫೋಟೋ ಕೂಡ ವೈರಲ್ ಆಗಿದ್ದು, ದರ್ಶನ್ ಬೋಳು ತಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ್ರೆ ಈ ಫೋಟೋ ನೋಡಿದರೆ ದೇವರಿಗೆ ಮುಡಿ ಕೊಟ್ಟು ಜೈಲಿಗೆ ಬಂದಿರುವುದು ಅರ್ಥವಾಗುತ್ತಿದೆ. ಪವಿತ್ರಾ ಗೌಡ ಈ ಫೋಟೋಗೆ ನಗುತ್ತಾ ಪೋಸ್ ಕೊಟ್ಟಿದ್ದಾರೆ. ಯಾಕೆ ಆ ನಗು ಅನ್ನೋದು ಅರ್ಥವಾದಂತೆ ಇಲ್ಲ. ಪವಿತ್ರಾ ಗೌಡ ಅವರ ಎರಡು ಫೋಟೋಗಳನ್ನು ತೆಗೆದಿದ್ದಾರೆ. ಒಂದರಲ್ಲಿ ನಾರ್ಮಲ್ ಆಗಿ ಕಾಣಿಸಿಕೊಂಡರೆ, ಮತ್ತೊಂದು ಫೋಟೋದಲ್ಲಿ ನಗು ಬೀರಿದ್ದಾರೆ. ಅದು ಜೈಲು ಸೇರಿದರು ನಕ್ಕಿದ್ದು ಯಾಕೆ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
ಇನ್ನು ನಟ ದರ್ಶನ್ ದೇವಸ್ಥಾನಕ್ಕೆ ಮುಡಿಕೊಟ್ಟಿದ್ದು, ತಮಿಳುನಾಡಿನ ದೇವಸ್ಥಾನ ಒಂದಕ್ಕೆ ಮುಡಿ ಕೊಟ್ಟಿದ್ದಾರೆ ಎನ್ನಲಾಗಿದೆ. ತಮಿಳುನಾಡಿನ ಈರೋಡ್ ಜಿಲ್ಲೆಯ ಬಣ್ಣಾರಿಯಮ್ಮ ದೇವಾಲಯಕ್ಕೆ ತೆರಳಿ ತಲೆ ಮುಡಿಕೊಟ್ಟಿದ್ದಾರೆ. ಅದಾದ ಬಳಿಕ ಕೊಡಗಿಗೆ ಬಂದು ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ. ಅಲ್ಲಿಂದ ನೇರವಾಗಿ ಕೋರ್ಟ್ ಗೆ ಹಾಜರಾಗಿದ್ದರು. ಕೋರ್ಟ್ ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಡೆಯ ತನಕ ದರ್ಶನ್ ಜೊತೆಗೆ ಧನ್ವೀರ್ ಅವರು ಇದ್ದರು.






