ಮೂರನೇ ವಾರಕ್ಕೆ ದೊಡ್ಮನೆಯಿಂದ ಹೊರ ಬಂದ ಪವಿ ಪೂವಪ್ಪ..!

suddionenews
1 Min Read

 

ಬಿಗ್ ಬಾಸ್ ಮನೆಯಲ್ಲಿ ಹೋದ್ಯಾ ಪುಟ್ಟ ಬಂದ್ಯಾ ಪುಟ್ಟ ಎಂಬಂತ ಪರಿಸ್ಥಿತಿ ನಿರ್ಮಾಣ ಮಾಡಿಕೊಂಡವರು ಪವಿ ಪೂವಪ್ಪ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಕಳೆದ ಮೂರು ವಾರಗಳ ಹಿಂದೆ ಬಿಗ್ ಬಾಸ್ ಮನೆಗೆ ಹೋಗಿದ್ದರು. ಮೊದಲ ವಾರ ಹೊಸಬರು ಎಂಬ ಕಾರಣಕ್ಕೆ ನಾಮಿನೇಷನ್ ನಿಂದ ಬಿಗ್ ಬಾಸ್ ಪಾರು ಮಾಡಿತ್ತು. ಎರಡನೇ ವಾರ ಹೇಗೋ ಬಚಾವ್ ಆಗಿ ಬಿಟ್ಟರು. ಆದರೆ ಮೂರನೇ ವಾರಕ್ಕೆ ಮನೆಗೆ ವಾಪಾಸ್ ಆಗಿದ್ದಾರೆ.

ಬಿಗ್ ಬಾಸ್ ಸೀಸನ್ 10, 10 ವಾರಗಳನ್ನು ಕಳೆದಿದೆ. ಈಗಾಗಲೇ ಸ್ಪರ್ಧೆ ಕಠಿಣವಾಗುತ್ತಾ ಬರುತ್ತಿದೆ. ಯಾರು ಯಾವಾಗ ಹೊರ ಹೋಗುತ್ತಾರೋ ಎಂಬ ಕುತೂಹಲ ಇರುವಾಗಲೇ, ಆಟಕ್ಕಾಗಿ, ಗೆಲುವಿಗಾಗಿ ಎಲ್ಲರೂ ಉಲ್ಟಾ ಹೊಡೆಯುತ್ತಿದ್ದಾರೆ. ಅದರಲ್ಲೂ ಚೆಂದವಾಗಿದ್ದ ಕಾರ್ತಿಕ್ – ಸಂಗೀತಾ ನಡುವಿನ ಸ್ನೇಹದಲ್ಲಿಯೇ ಬಿಡುಕು ಮೂಡುತ್ತಿದೆ.

ಈ ವಾರ ಸಿರಿ, ಮೈಕಲ್ ಹಾಗೂ ಪವಿ ಮೂರು ಜನ ಬಾಟಮ್ ನಲ್ಲಿ ಕುಳಿತಿದ್ದಾರೆ. ಅದರಲ್ಲಿ ವೋಟ್ ಗಳ ಸಂಖ್ಯೆ, ಆಟದ ರೀತಿ ಎಲ್ಲವನ್ನು ಗಮನಿಸಿ, ಎಲಿಮಿನೇಟ್ ಮಾಡಲಾಗಿದೆ. ವೈಲ್ಡ್ ಕಾರ್ಡ್ ಮೂಲಕ ಬಂದಂತ ಪವಿ ಪೂವಪ್ಪ ಮನೆಯಿಂದ ತಮ್ಮ‌ ಜರ್ನಿಯನ್ನು ಮುಗಿಸಿ, ಬೇಗ ಹೊರಗೆ ಬಂದಿದ್ದಾರೆ. ಪವಿ ಜೊತೆಗೆ ವೈಲ್ಡ್ ಕಾರ್ಡ್ ಎಂಟ್ರಿಯಿಂದ ಬಂದಿದ್ದ ಅವಿನಾಶ್ ಶೆಟ್ಟಿ ಬಚಾವ್ ಆಗಿದ್ದಾರೆ. ಪವಿ ಪೂವಪ್ಪ ಇತ್ತಿಚೆಗೆ ವಿನಯ್ ಅಂಡ್ ಟೀಂ ಜೊತೆಗೆ ಹೆಚ್ಚು ಗುರುತಿಸಿಕೊಂಡಿದ್ದರು. ಎದುರಾಳಿ ತಂಡದೊಂದಿಗೆ ಅಗ್ರೆಸ್ಸಿವ್ ಆಗಿಯೇ ಆಟ ಆಡುತ್ತಿದ್ದರು. ಇದೀಗ ಮೂರನೇ ವಾರಕ್ಕೆ ಹೊರ ಬಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks