ಜನತಾ ಜಲಾಧಾರೆಯಾಯ್ತು.. ಇದೀಗ ಪಂಚರತ್ನ ಕಾರ್ಯಕ್ರಮಕ್ಕೆ ಜೆಡಿಎಸ್ ಸಜ್ಜು..!

ಬೆಂಗಳೂರು: ನೀರಾವರಿ ಯೋಜನೆಗಳಿಗಾಗಿ ಇತ್ತಿಚೆಗೆ ಜನತಾ ಜಲಧಾರೆ ಎಂಬ ಕಾರ್ಯಕ್ರಮ ಮಾಡಿ ಯಶಸ್ವಿಗೊಳಿಸಲಾಗಿದೆ. ಇತ್ತಿಚೆಗೆ ಅದರ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಮಾಡಿ ಮುಗಿಸಿದ್ದಾರೆ. ಇದೀಗ ಆ ಬೆನ್ನಲ್ಲೇ ಹೊಸದೊಂದು ಯೋಜನೆ ಹಾಕಿಕೊಂಡಿದೆ ಜೆಡಿಎಸ್.

ಇಂದು ದೊಡ್ಡಗೌಡರ ಹುಟ್ಟುಹಬ್ಬ. 90ನೇ ವಸಂತದಲ್ಲಿರುವ ದೇವೇಗೌಡರಿಗೆ ಆತ್ಮೀಯರು, ಹಿರಿಯರು, ಕುಟುಂಬಸ್ಥರು, ಬೆಂಬಲಿಗರು ಶುಭಕೋರಿದ್ದಾರೆ. ಅದರ ಜೊತೆಗೆ ಅವರ ಹುಟ್ಟುಹಬ್ಬದ ಪ್ರಯುಕ್ತ ಪಂಚರತ್ನ ಕಾರ್ಯಕ್ರಮದ ಸಲುವಾಗಿ, 123 ವಾಹನಗಳನ್ನು ಖರೀದಿ ಮಾಡಿದ್ದಾರೆ. 180 ಕ್ಷೇತ್ರದಲ್ಲಿ ಈ 123 ಎಲ್ಇಡಿ ಇರುವ ವಾಹನಗಳು ಸಂಚಾರ ನಡೆಸಲಿವೆ.

ಇದೇ ವೇಳೆ ಮಾತನಾಡಿದ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಜನತಾ ಜಲಧಾರೆ ಸಮಾರೋಪ ಸಮಾರಂಭದಲ್ಲಿ ಐದು ಲಕ್ಷ ಮಂದಿ ಸೇರಿಸಲಾಗಿತ್ತು. ಇದನ್ನು ಗ್ರಾಫಿಕ್ಸ್ ನಿಂದ ಸೃಷ್ಟಿಸಲಾಗಿದೆ ಎಂದು ವ್ಯಂಗ್ಯವಾಡಿದ್ದರು. ಇದೀಗ ಆ ಮಾತಿಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ನಮಗೆ ಅವರಿಂದ ಪ್ರಮಾಣ ಪತ್ರ ಬೇಕಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!