ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್,ಚಳ್ಳಕೆರೆ, ನವೆಂಬರ್. 22 : ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಶಿಥಿಲಗೊಂಡ ಓವರ್ ಹೆಡ್ ಟ್ಯಾಂಕ್ ಬೀಳುವ ಸ್ಥಿತಿಯಲ್ಲಿದ್ದು, ಇಲ್ಲಿನ ಅಕ್ಕಪಕ್ಕದಲ್ಲಿ ವಾಸ ಮಾಡುವಂತಹ ಗ್ರಾಮಸ್ಥರು ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ.
ಈ ನೀರಿನ ಓವರ್ ಟ್ಯಾಂಕ್ ತುಂಬಾ ಹಳೆಯದಾಗಿದ್ದು, ಸರಿಯಾದ ನಿರ್ವಹಣೆ ಕೊರತೆಯಿಂದಾಗಿ ಹಲವು ವರ್ಷಗಳಿಂದ ಸ್ವಚ್ಛತೆ ಇಲ್ಲದಂತಾಗಿದೆ. ಇಲ್ಲಿನ ಜನರು ಅನಿವಾರ್ಯವಾಗಿ ಇದೇ ನೀರನ್ನು ಸೋಸಿಕೊಂಡು ಬಳಸಿಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ.
ಕಂಬಗಳು ಸಿಮೆಂಟ್ ಕಳಚಿ, ಕಬ್ಬಣ ತುಕ್ಕು ಹಿಡಿದು ದೃಢತ್ವ ಕಳೆದುಕೊಂಡು ಅಸ್ತಿ ಪಂಜರದಂತೆ ಕಾಣುತ್ತಿದೆ. ಗಲೀಜು ತುಂಬಿರುವ ಟ್ಯಾಂಕ್ ಗೆ ರಾತ್ರಿ ಪೂರ ನೀರು ತುಂಬಿಸಲಾಗುತ್ತದೆ. ಟ್ಯಾಂಕ್ ತುಂಬಿ ನೀರು ವ್ಯರ್ಥವಾಗಿ ಹರಿದು ಹೋದರು ನೀರು ನಿಲ್ಲಿಸುವುದಿಲ್ಲ. ಅಕ್ಕ ಪಕ್ಕದಲ್ಲಿ ಮನೆಗಳು ಇರುವ ಕಾರಣ ನೀರುಮನೆ ಮೇಲೆ ಬೀಳುತ್ತಿವೆ.
ಅಧಿಕಾರಿಗಳು, ಜನಪ್ರತಿನಿದಿಗಳು, ಕಂಡೂ ಕಾಣದಂತ್ತಿದ್ದಾರೆ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲ. ಅಪಾಯ ತಂದೊಡ್ಡುವ ನೀರಿನ ಟ್ಯಾಂಕ್ ಯಾವಾಗ ಬಿಡುತ್ತದೋ ಎನ್ನುವ ಭಯದ ವಾತವರಣದಲ್ಲಿ ನಾವಿದ್ದೆವೆ ಎನ್ನುತ್ತಾರೆ ಟ್ಯಾಂಕಿನ ಅಕ್ಕ ಪಕ್ಕದ ಮನೆವರಾದ ಮೂರ್ತಪ್ಪ., ಪುಟ್ಟಕ್ಕ, ರಂಜನಿ, ಶಾಂತಮ್ಮ, ತಿಪ್ಪೀರಮ್ಮ.
