Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಲಾಲ್ ಬಾಗ್ ನ ಪೆನೆನ್ಸೂಲಾರ್ ನೈಸ್

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್

ಬೆಂಗಳೂರಿನ ಲಾಲ್ ಬಾಗ್ ಉದ್ಯಾನವನವು ವಿಶ್ವವಿಖ್ಯಾತವಾದ ಒಂದು ಪರಿಸರ ತಾಣವಾಗಿದೆ. 240ಕ್ಕೂ ಅಧಿಕ ಎಕರೆಗಳಲ್ಲಿ ಈ ಉದ್ಯಾನವನವು ಚಾಚಿಕೊಂಡಿದೆ.

 

ಈ ಹೂತೋಟದಲ್ಲಿ ನೂರಾರು ವಿವಿಧ ಜಾತಿಯ ಮರಗಳನ್ನು, ವಿವಿಧ ಪ್ರಭೇದಗಳ ಸಸ್ಯ ಸಂಕುಲಗಳನ್ನು ಇಲ್ಲಿ ಕಾಣಬಹುದು.
ಹೂತೋಟದಷ್ಟೇ ಅತ್ಯಂತ ಪ್ರಾಮುಖ್ಯ ಪಡೆದಿರುವುದು ಇಲ್ಲಿನ ಗಾಜಿನ ಮನೆ ಹಾಗೂ ಇಲ್ಲಿರುವ ನೈಸರ್ಗಿಕ ಬಂಡೆ ಹಾಗೂ ಕೆಂಪೇಗೌಡರ ಕಾಲದ ಗಡಿ ಗೋಪುರ.

ಇಲ್ಲಿರುವ ನೈಸರ್ಗಿಕ ಬಂಡೆಯ ಮೇಲೆ ಹಿಂದೆ ಕೆಂಪೇಗೌಡರ ಕಾಲದಲ್ಲಿ ಗಡಿ ಗೋಪುರವನ್ನು ನಿರ್ಮಾಣ ಮಾಡಲಾಗಿದ್ದು ಇಂದಿಗೂ ಇದು ಸುಸ್ಥಿತಿಯಲ್ಲಿರುವುದನ್ನು ಕಾಣಬಹುದು. ಆಂಗ್ಲ ಭಾಷೆಯಲ್ಲಿ ಇದನ್ನು ಪೆನ್ನೆನ್ಸುಲರ್ ನೈಸ್ ಎಂದು ಕರೆದರೂ ಸ್ಥಳೀಯವಾಗಿ ಇದನ್ನು ವಿಶಾಲವಾಗಿ ಹರಡಿಕೊಂಡಿರುವ ದೊಡ್ಡ ಬಂಡೆ ಎಂದು ಗುರುತಿಸಲಾಗುತ್ತದೆ. ಇದೊಂದು ರಾಷ್ಟ್ರೀಯ ಭೂ ವೈಜ್ಞಾನಿಕ ಸ್ಮಾರಕವಾಗಿದ್ದು ಭೂಮಿಯ ಅತ್ಯಂತ ಹಳೆಯ ಶಿಲೆಗಳಲ್ಲಿ ಇದು ಒಂದಾಗಿದೆ. ಭೂಮಿಯ ಹೊರಪದರದ ಅತ್ಯಂತ ಹಳೆಯ ಶಿಲೆಗಳಲ್ಲಿ ಒಂದಾಗಿರುವ ಇದರ ಪ್ರಾಮುಖ್ಯತೆಯು ಭೂ ವೈಜ್ಞಾನಿಕ ಸ್ಥಳವೆಂದು ಗುರುತಿಸಿದೆ ಮತ್ತು ಭಾರತದ ಭೂವೈಜ್ಞಾನಿಕ ಸರ್ವೇಕ್ಷಣ ಇಲಾಖೆಯು ಇದನ್ನು ರಾಷ್ಟ್ರೀಯ ಭೂ ವೈಜ್ಞಾನಿಕ ಸ್ಮಾರಕ ಹಾಗೂ ಭೂ -ಪ್ರವಾಸೋದ್ಯಮ ತಾಣ ಎಂದು ಮಾರ್ಚ್ 1975ರಲ್ಲಿ ಘೋಷಿಸಿದೆ.

 

ಪೆನನ್ಸುಲರ್ ನೈಸ್ ಎಂಬ ಪದವನ್ನು ಮೈಸೂರಿನ ಹಿಂದಿನ ಭೂ ವಿಜ್ಞಾನ ಇಲಾಖೆ ಡಾ. ಸ್ಮಿತ್ ಅವರು 1916ರಲ್ಲಿ ಭಾರತದ ದಕ್ಷಿಣ ಭಾಗದಲ್ಲಿ ನೈಸ್ ಶಿಲೆಗಳ ವೈಜ್ಞಾನಿಕ ಅಧ್ಯಯನ ನಂತರ ಹೆಸರಿಸಿದರು.
ಲಾಲ್ ಬಾಗ್ನಲ್ಲಿ ಇರುವ ಸ್ಮಾರಕವು ಅತ್ಯುತ್ತಮ ಮಾನ್ಯತೆಗಳಲ್ಲಿ ಒಂದಾಗಿದೆ ಇಲ್ಲಿಗೆ ಸಾರ್ವಜನಿಕರು ಸುಲಭವಾಗಿ ತಲುಪಬಹುದು ಹಾಗೂ ಅಧ್ಯಯನ ಮಾಡಬಹುದಾಗಿದೆ.

 

ಕರ್ನಾಟಕದ ಭೂಭಾಗದ ಶೇಕಡ 35ರಷ್ಟು ಪ್ರದೇಶವನ್ನು ಇದೇ ರೀತಿಯ ಬಂಡೆ ಶಿಲಾಪದರವು ವ್ಯಾಪಿಸಿಕೊಂಡಿದೆ ಮತ್ತು ಒಟ್ಟಾರೆಯಾಗಿ ಇಂತಹ ಸಂಕೀರ್ಣ ಶಿಲಾ ಭೂಪದರ ಎಲ್ಲೆಡೆ ಇರುವುದನ್ನು ಗುರುತಿಸಬಹುದು.
ಇಲ್ಲಿರುವ ಬಂಡೆಯೂ ಸರಿ ಸುಮಾರು 3000 ಮಿಲಿಯನ್ ವರ್ಷಗಳಷ್ಟು ಹಿಂದೆ ರೂಪಗೊಂಡಿದೆ. ಇದೊಂದು ಗ್ರಾನೈಟ್ ಶಿಲಾ ಪದರವಾಗಿದೆ. ಶತಕೋಟಿ ವರ್ಷಗಳ ಹಿಂದೆ ಹೊರಪದರದ ಸಂಚಯ, ವಿನಾಶ,ಜಲಾನಯನ ಉಗಮ,ವಿಶಾಲವಾದ ಪ್ರಾಚೀನ ಸಾಗರಗಳಲ್ಲಿನ ಕೆಸರು ಶೇಖರಣೆ, ಸರಣಿ ಜ್ವಾಲಾಮುಖಿಗಳ ಸ್ಪೋಟ, ಕುಸಿತ… ಎಲ್ಲದರಿಂದ ಅಂತಿಮವಾಗಿ ಭೂಮಿಯ ಮೇಲ್ಮೈ ಸವೆತ ಸಂಕೀರ್ಣ ಇತಿಹಾಸವನ್ನು ಒಳಗೊಂಡಿರುತ್ತದೆ. ನಾವು ಕೇವಲ ಇದರ ಮೇಲ್ಭಾಗದ ಪದರವನ್ನು ಮಾತ್ರ ಗಮನಿಸುತ್ತೇವೆ. ಯು ಆರ್ಕಿಯನ್ ಯುಗದಲ್ಲಿ ರೂಪಗೊಂಡಿದ್ದು ಮುಖ್ಯವಾಗಿ ಟಿಟಿಜಿ ಎಂಬ ಮಿಶ್ರ ಲೋಹಗಳಿಂದ ರೂಪುಗೊಂಡಿರುತ್ತದೆ. ಇವೆಲ್ಲವೂ ಲಕ್ಷಾಂತರ ವರ್ಷಗಳ ಹಿಂದಿನ ಭೂ ವೈಜ್ಞಾನಿಕ ವಿಕಾಸದ ಇತಿಹಾಸವನ್ನು ತಿಳಿಸುವ ಸ್ಥಳಗಳಾಗಿವೆ. ಇಂತಹದ್ದೇ ಶಿಲಾಪದರಗಳು ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಹಾಗೂ ಕೋಲಾರದ ಚಿನ್ನದ ಗಣಿಗಳ ಮೂಲ ತಳಹದಿಯಾಗಿವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...