Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಬೆಂಗಳೂರಿನ ಕಾವಲು ಗೋಪುರಗಳು

---Advertisement---

 

 

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಬೆಂಗಳೂರಿನ 4 ದಿಕ್ಕಿನ ಗಡಿಗಳಲ್ಲಿ 4 ಕಾವಲು ಗೋಪುರಗಳನ್ನು ನಿರ್ಮಿಸಲಾಗಿದೆ. ಇದು ಪಟ್ಟಣವನ್ನು ವಿಸ್ತರಿಸುವ ಮಿತಿಗಳನ್ನು ಸೂಚಿಸುತ್ತದೆ. ಆದರೆ ಈಗ ಬೆಂಗಳೂರು ಎಲ್ಲಾ ಕಡೆಯಿಂದ ವಿಸ್ತರಿಸಿದೆ.
ಗೋಪುರಗಳು ಸರಳವಾದ ವಿಜಯನಗರ ಕಾಲದ ನಿರ್ಮಾಣಗಳಾಗಿವೆ. ಇವುಗಳ ಮೇಲೆ ಸಣ್ಣ ಗೋಪುರವನ್ನು ನಿರ್ಮಿಸಲಾಗಿದೆ.4 ಕಂಬಗಳ ಆಧಾರದ ಮೇಲೆ ಸಣ್ಣ ಮಂಟಪವನ್ನು ರಚಿಸಲಾಗಿದೆ.
ಇವು ಬೆಂಗಳೂರಿನ ಗಡಿಗಳನ್ನು ಗುರುತಿಸಲು ಮತ್ತು ನಗರದ ರಕ್ಷಣೆಗಾಗಿ ಕಟ್ಟಲಾಗಿತ್ತು.16ನೇ ಶತಮಾನದಲ್ಲಿ ಯಲಹಂಕ ನಾಡಪ್ರಭು ಹಿರಿಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಬೆಂಗಳೂರನ್ನು ಕಟ್ಟಿದರು.ಬೆಂಗಳೂರು ಇಲ್ಲಿಯವರೆಗೆ ಬೆಳೆಯಲಿ ಎಂದು ಅವರು ಗಡಿ ಗುರುತಿಸಲು ಈ ಗೋಪುರಗಳನ್ನು ನಿರ್ಮಿಸಿದರು ಎಂಬ ನಂಬಿಕೆ ಇದೆ.

1. ಲಾಲ್‌ಬಾಗ್ ಗೋಪುರ*
ಲಾಲ್‌ಬಾಗ್ ಸಸ್ಯೋದ್ಯಾನದ ಒಳಗೆ ಇರುವ ಬಂಡೆಯ ಮೇಲೆ. ಇರುವ ಗೋಪುರವು ದಕ್ಷಿಣದ ಗಡಿಯಾಗಿ ಗುರುತಿಸುತ್ತಿತ್ತು.

2. ಕೆಂಪಾಂಬುಧಿ ಕೆರೆ ಬಳಿಯ ಗೋಪುರ* ಗವಿಪುರಂ ಗುಟ್ಟಹಳ್ಳಿ ಬಳಿ ಇರುವ ಇದು ನೈಋತ್ಯ ದಿಕ್ಕಿನ ಗಡಿ ಗುರುತಿಸುತ್ತಿತ್ತು.

3. ಹಲಸೂರು ಕೆರೆ ಬಳಿಯ ಗೋಪುರ* – ಹಲಸೂರು ಕೆರೆಯ ಈಶಾನ್ಯ ದಿಕ್ಕಿನಲ್ಲಿ ಇರುವ ಇದು ಪೂರ್ವದ ಗಡಿ ಗೋಪುರವಾಗಿದೆ.

4. ಮೇಕ್ರಿ ವೃತ್ತದ ಬಳಿಯ ಗೋಪುರ*
ರಮಣ ಮಹರ್ಷಿ ರಸ್ತೆ ಬಳಿ ಇರುವ ಇದು ಉತ್ತರದ ಗಡಿ ಗೋಪುರ ಮಂಟಪವಾಗಿದೆ.

ಗೋಪುರಗಳ ಉದ್ದೇಶ:
ಇವೆಲ್ಲವೂ ಎತ್ತರವಾದ ಪ್ರದೇಶಗಳಲ್ಲಿ, ಆಗಿನ ನಿರ್ಜನ ಪ್ರದೇಶವಾದ ಈ ಜಾಗಗಳಲ್ಲಿ ಕಟ್ಟಲಾಗಿದ್ದು, ದೂರದಿಂದಲೇ ಗಮನಿಸಿದಾಗ ಇದು ನಗರದ ಸರಹದ್ದು ಹಾಗೂ ಗಡಿ ಪ್ರಾರಂಭ ಎಂಬುದನ್ನು ತಿಳಿಯಲು ಹಾಗೂ ಶತ್ರುಗಳ ದಾಳಿಯಿಂದ ನಗರವನ್ನು ರಕ್ಷಿಸಲು ಬಳಸುತ್ತಿದ್ದರು.ಜೊತೆಗೆ ಸದಾ ಕಾವಲುಗಾರರು ಇಲ್ಲಿ ಬೀಡುಬಿಟ್ಟು, ಶತ್ರುಗಳ ಚಲನವಲನಗಳ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತಿದ್ದರು. ಗೋಪುರಗಳು ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಇವೆ. ಈ ಗೋಪುರಗಳ ಬಗ್ಗೆ ತಿಳಿಸಲು ಯಾವುದೇ ನಿರ್ದಿಷ್ಟ ಶಾಸನಗಳು ಲಭ್ಯವಿಲ್ಲ. ಈ ಗೋಪುರಗಳು ಇಂದು ಬೆಂಗಳೂರಿನ ಪರಂಪರೆ ಯಾಕ ಹಾಗೂ ಸಂಸ್ಕೃತಿಯ ಸಂಕೇತಗಳಾಗಿವೆ. ನಗರಪಾಲಿಕೆಯ ಪ್ರಮುಖ ಲಾಂಛನ ಇದೇ ಗೋಪುರವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now