Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಜಗಲೂರು: ಕಲ್ಲೇದೇವರಪುರದಲ್ಲಿ ಮರುಜೀವ ಪಡೆದ 12ನೇ ಶತಮಾನದ ಹೊಯ್ಸಳ ಶೈಲಿಯ ತ್ರಿಕೂಟೇಶ್ವರ ದೇವಾಲಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ.
ಮೊ : 93424 66936

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 18 : ತ್ರಿಕೂಟೇಶ್ವರ ದೇವಾಲಯವು ಗ್ರಾಮದ ಮಧ್ಯಭಾಗದಲ್ಲಿದ್ದು, ಕಲ್ಲೇಶ್ವರ ದೇವಾಲಯದ ಆವರಣದ ದಕ್ಷಿಣ ಭಾಗದಲ್ಲಿದೆ.
ದೇವಾಲಯವು ಉತ್ತರಾಭಿಮುಖವಾಗಿದ್ದು 12 ನೇ ಶತಮಾನದಲ್ಲಿ ಹೊಯ್ಸಳ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.


ಮೂರು ಗರ್ಭಗೃಹಗಳನ್ನು ಒಳಗೊಂಡ ತ್ರಿಕೂಟಾಚಲ ದೇವಾಲಯವಿದು. ಶಾಸನದಲ್ಲಿ ಈ ದೇವಾಲಯವನ್ನು ಸ್ವಯಂಭು ಮಣಲೇಶ್ವರ ದೇವರು ಎಂದು ಕರೆದಿದೆ.
ಈ ದೇವಾಲಯದಲ್ಲಿ ಮೂರು ಗರ್ಭಗೃಹ ಹಾಗೂ ಅರ್ಧಮಂಟಪಗಳನ್ನು ಒಳಗೊಂಡ ನವರಂಗವಿದೆ.
ದೇವಾಲಯದಲ್ಲಿ ಉತ್ತರಾಭಿಮುಖವಾಗಿ ಗರ್ಭಗೃಹದಲ್ಲಿ ಶಿವಲಿಂಗವಿದ್ದು ಇದನ್ನು ಬ್ರಹ್ಮಲಿಂಗವೆಂದು, ಪಶ್ಚಿಮಾಭಿಮುಖವಾಗಿ ಗರ್ಭಗೃಹದಲ್ಲಿರುವ ಶಿವಲಿಂಗವನ್ನು ವಿಷ್ಣು ಎಂದು, ಪೂರ್ವಾಭಿಮುಖವಾಗಿರುವ ಶಿವಲಿಂಗವನ್ನು ಮಹೇಶ್ವರ ಲಿಂಗವೆಂದು ಕರೆಯುತ್ತಾರೆ.
ಕಪ್ಪುಶಿಲೆಯಲ್ಲಿ ಕಡೆಯಲಾದ ಲಿಂಗಗಳು ಸುಮಾರು ಎರಡೂವರೆ ಅಡಿಗಳಷ್ಟು ಎತ್ತರವಾಗಿದೆ.
ಇದರ ಮೂರೂ ಗರ್ಭಗೃಹಗಳು ಒಂದೇ ತೆರನಾಗಿದ್ದು, ಇಕ್ಕೆಲಗಳಲ್ಲಿ ಅರೆಗಂಬ ಮತ್ತು ಕೆಳಗೆ ಪೂರ್ಣಕುಂಭಗಳನ್ನು ಕಡೆದಿರುವರು. ದೇವಾಲಯದ ಗರ್ಭಗೃಹದ ಮೇಲೆ ಯಾವುದೇ ಶಿಖರ ಇರುವುದಿಲ್ಲ.

ಮೊದಲು ಈ ತ್ರಿಕೂಟೇಶ್ವರ ದೇವಾಲಯವು ಹೆಚ್ಚು ಬೆಳಕಿಲ್ಲದೆ ಕತ್ತಲೆಯಿಂದ ಕೂಡಿತ್ತು ಹಾಗೂ ಜೀರ್ಣಾವಸ್ಥೆಯಲ್ಲಿದ್ದುದರಿಂದ ಸುಮಾರು
ವರ್ಷಗಳಿಂದ ದೇವಾಲಯದೊಳಗೆ ಯಾರೂ ಹೋಗುತ್ತಿರಲಿಲ್ಲ. ಕೆಲ ವರ್ಷಗಳ ನಂತರ ಇದನ್ನು ಮುಜರಾಯಿ ಇಲಾಖೆಯಿಂದ ಜೀರ್ಣೋದ್ಧಾರ ಗೊಳಿಸಲಾಯಿತು.ಇದೀಗ ನಿತ್ಯ ಪೂಜೆ ನಡೆಯುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now