Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗದ ಅಳಗವಾಡಿ ಗ್ರಾಮ ದರ್ಶನ

---Advertisement---

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

 

ಅಳಗವಾಡಿ ಗ್ರಾಮವು ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು, ಚಿತ್ರದುರ್ಗದಿಂದ 31
ಕಿಲೋಮೀಟರ್ ದೂರ ವಾಯುವ್ಯಕ್ಕೆ ,
ಚಿತ್ರದುರ್ಗ- ಸಿರಿಗೆರೆ-ಅಳಗವಾಡಿ ಮಾರ್ಗದಲ್ಲಿದೆ.
ಗ್ರಾಮದ ಹಳೆಗ್ರಾಮ ನಿವೇಶನವು ಕೆಂಚಮಾರನಹಳ್ಳಿಯಾಗಿದ್ದು,
ಇದು ಗ್ರಾಮದ ಪಶ್ಚಿಮ ದಿಕ್ಕಿನಲ್ಲಿದೆ. ಈಗ ಕೆಂಚಮಾರನಹಳ್ಳಿ ಗ್ರಾಮವು ಬೇಚರಾಕ್ ಆಗಿದೆ.

ಹೆಸರಿನ ಮೂಲ :
ಅಳಗ ಎಂದರೆ ಹುಲ್ಲನ್ನು ಕಟ್ಟುವ ಹಗ್ಗ /ಮಡಕೆ ಮಾಡುವ ಸ್ಥಳ ಮತ್ತು ವಾಡಿ/ವಾಡೆ ಎಂದರೆ ಜನ ವಸತಿ ಪ್ರದೇಶ ಎಂಬ ಅರ್ಥವಿದೆ. ಹಾಗಾಗಿ ಅಳಗವಾಡಿ ಎಂದರೆ ಹಗ್ಗಗಳನ್ನು /ಮಡಿಕೆಗಳನ್ನು ಮಾಡುವ ಊರು ಎಂದು ಅರ್ಥೈಸಬಹುದು.
ಇದೇ ಹೆಸರಿನ ಊರುಗಳು ಕರ್ನಾಟಕದಲ್ಲಿ ಇಪ್ಪತ್ತಕ್ಕೂ ಅಧಿಕವಾಗಿವೆ.

ಭೌಗೋಳಿಕ ಲಕ್ಷಣ
ಭೌಗೋಳಿಕವಾಗಿ ಗ್ರಾಮದ
ಸುತ್ತಮುತ್ತಲಿನ ಪ್ರದೇಶವು ಬಯಲು ಸೀಮೆಯ ವಿಶಾಲ ಮೈದಾನವಾಗಿದ್ದು, ಅಲ್ಲಲ್ಲಿ ಸಮತಟ್ಟಲ್ಲದ ಏರು – ಇಳಿಜಾರು ಪ್ರದೇಶ ಕೂಡಾ ಕಂಡುಬರುತ್ತದೆ. ಗ್ರಾಮದ ಪಶ್ಚಿಮ ಭಾಗಕ್ಕೆ ಅಳಗವಾಡಿ ಗುಡ್ಡ ಸಾಲುಗಳು ಕಂಡುಬರುತ್ತದೆ.
ಇವು ದಕ್ಷಿಣದಿಂದ ಉತ್ತರಕ್ಕೆ ಹಬ್ಬಿದ್ದು ಇದು ಮುಂದೆ ಹಾಲೇಕಲ್ ಗುಡ್ಡದೊಂದಿಗೆ ಸೇರಿ ಮುಂದುವರೆಯುತ್ತದೆ. ಗ್ರಾಮದ ಸುತ್ತಲಿನ ಗುಡ್ಡಗಳಲ್ಲಿ ಹುಟ್ಟುವ ಹಳ್ಳಗಳು
ಹಲವು ಭಾಗಗಳಲ್ಲಿ ಹರಿದು ಮುಂದೆ ಭರಮಸಾಗರ ಕೆರೆಗೆ ತಲುಪುತ್ತವೆ.

ವೀರಗಲ್ಲುಗಳು :
ಗ್ರಾಮದ ಆಂಜನೇಯ ದೇವಾಲಯದ ಬಳಿಯಲ್ಲಿ 1 ವೀರಮಾಸ್ತಿಗಲ್ಲು ಮತ್ತು 1 ಮಾಸ್ತಿಗಲ್ಲು ಇದ್ದು, ಸಂರಕ್ಷಣೆ ಮಾಡಲಾಗಿರುತ್ತದೆ.
ಇವು 14-15 ನೇ ಶತಮಾನದ ವಿಜಯನಗರ ಕಾಲಕ್ಕೆ ಸೇರಿದೆ ಎಂದು ಸಂಶೋಧಕರಾದ ಮಹೇಶ್ ಕುಂಚಿಗನಾಳ ಹೇಳುತ್ತಾರೆ.

ದೇವಾಲಯ ಪರಿಚಯ:

1.*ಕಣಿವೆ ಮಾರಮ್ಮ ದೇವಾಲಯ:*
ಗ್ರಾಮದ ಹೊರಭಾಗದಲ್ಲಿ ಪುಡುಕಲಹಳ್ಳಿ ರಸ್ತೆಯಲ್ಲಿ ಈ ದೇವಾಲಯವಿದ್ದು, ಇದೀಗ ನೂತನವಾಗಿ ನಿರ್ಮಾಣ ಮಾಡಲಾಗುತ್ತಿದೆ. 1960 ರ ದಶಕದಲ್ಲಿ ಒಮ್ಮೆ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಗಿತ್ತು.ಮೂಲ ಮಾರಮ್ಮ ದೇವಿಯ ಶಿಲ್ಪವು 15-16 ಶತಮಾನಕ್ಕೆ ಸೇರಿದೆ ಎಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ.
ಮೂಲ ದೇವಾಲಯವು 17-18 ನೇ ಶತಮಾನದಿಂದಲೂ ಅಸ್ತಿತ್ವದಲ್ಲಿತ್ತು ಎನ್ನಲಾಗುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿಯ ಅಗತ್ಯತೆ ಇರುತ್ತದೆ.ಹಿಂದೆ 18 ನೇ ಶತಮಾನದಲ್ಲಿ ಚಿತ್ರದುರ್ಗವನ್ನು ಆಳುತ್ತಿದ್ದ ಹಿರೇಮದಕರಿನಾಯಕನು ಈ ದೇವರ ದರ್ಶನಕ್ಕೆ ಈ ಮಾರ್ಗದಲ್ಲಿ ತೆರಳುತ್ತಿದ್ದಾಗ ಬರುತ್ತಿದ್ದನೆಂಬ ಐತಿಹ್ಯವಿದೆ. ದೇವಾಲಯದ ಎದುರು ಭಾಗದಲ್ಲಿ ಪಾತಪ್ಪ ಗುಡಿ ಇದೆ.
ಯುಗಾದಿ ನಂತರದ ದಿನಗಳಲ್ಲಿ ಈ ದೇವರ ಜಾತ್ರೆಯನ್ನು ಅತ್ಯಂತ ವಿಜೃಂಭಣೆಯಿಂದ ಐದು ದಿನಗಳ ಕಾಲ ನಡೆಸಲಾಗುತ್ತದೆ.
ಜಾತ್ರೆಗೆ ಸುತ್ತಮುತ್ತಲಿನ 7 ಗ್ರಾಮದ ಜನರು ಭಾಗವಹಿಸುತ್ತಾರೆ.
ಗ್ರಾಮದ ಮಧ್ಯಭಾಗದಲ್ಲಿ ಕಣಿವೆ ಮಾರಮ್ಮ ದೇವರ
ಉತ್ಸವ ಮೂರ್ತಿ ಮಂದಿರವಿದೆ .
ಈ ದೇವರನ್ನು ಜಾತ್ರೆ,ಹಬ್ಬದ ಮೆರವಣಿಗೆಗಾಗಿ ಹೊರಡಿಸಲಾಗುತ್ತದೆ. ಸುತ್ತಮುತ್ತಲಿನ ಗ್ರಾಮದ ಭಕ್ತರ ಮನೆಗೆ ಕರೆದೊಯ್ಯಲಾಗುತ್ತದೆ.

*2. ಆಂಜನೇಯ ಸ್ವಾಮಿ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿ ದಕ್ಷಿಣಾಭಿಮುಖವಾಗಿ ನಿರ್ಮಾಣ ಮಾಡಲಾಗಿರುವ ಈ ದೇವಾಲಯದ ಗರ್ಭಗೃಹದಲ್ಲಿ ಪಾಳೆಯಗಾರರ ಕಾಲದ ಆಂಜನೇಯ ಸ್ವಾಮಿಯನ್ನು ಪೂಜಿಸಲಾಗುತ್ತದೆ.
ಗರ್ಭಗೃಹ, ಸಭಾಮಂಟಪಗಳಿರುವ ದೇವಾಲಯ ಇದಾಗಿದೆ.
ಪ್ರತಿ ವರ್ಷ ಈ ದೇವರ ಉಚ್ಚಾಯ ನಡೆಸಲಾಗುತ್ತದೆ.

*3. ಕಲ್ಲೇಶ್ವರ ಸ್ವಾಮಿ ದೇವಸ್ಥಾನ*
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ಇದನ್ನು 1997 ರಲ್ಲಿ ನಿರ್ಮಿಸಲಾಗಿದೆ. ಇದರ ಮೂಲಲಿಂಗವು ಗ್ರಾಮದ ಹತ್ತಿರ ಜಮೀನಿನಲ್ಲಿ ಇದ್ದಿತು.ನಂತರ ಅದನ್ನು ಇಲ್ಲಿಗೆ ಸ್ಥಳಾಂತರಗೊಳಿಸಿ ಈ ದೇವಾಲಯ ನಿರ್ಮಿಸಲಾಗಿದೆ.
ಪ್ರತಿ ವರ್ಷ ವಾರ್ಷಿಕ ಪರೇವು ಈ ಸ್ಥಳದಲ್ಲಿ ನಡೆಸಲಾಗುತ್ತದೆ.

ಇದರ ಜೊತೆಗೆ ಗ್ರಾಮದಲ್ಲಿ ಉಡಿಸಲಮ್ಮ, ಮೈಲೇಮಾರಮ್ಮ, ಕುಕ್ಕುವಾಡೇಶ್ವರಿ..
ದೇವಾಲಯಗಳಿವೆ.
ಇವೆಲ್ಲವೂ ಸ್ಥಳೀಯ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯಗಳಾಗಿವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...