Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಮ್ಮ ಪಕ್ಷ ಯಾದವ ಸಮಾಜದ ಪರವಾಗಿದೆ : ಸಚಿವ ಡಿ.ಸುಧಾಕರ್

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ
                        ಸುರೇಶ್ ಪಟ್ಟಣ್,                         
ಮೊ : 98862 95817

ಚಿತ್ರದುರ್ಗ ಫೆ. 10 :  ನೂರಕ್ಕೆ ನೂರರಷ್ಟು ನಮ್ಮ ಪಕ್ಷ ಈ ಯಾದವ ಸಮಾಜದ ಪರವಾಗಿ ಇದೆ. ನಾನು ಸಹಾ ನೂರಕ್ಕೆ ನೂರರಷ್ಟು ಸ್ವಾಮೀಜಿಯವರ ಜೊತೆಗೆ ಈ ಸಮಾಜಕ್ಕೆ ಅಗತ್ಯವಾಗಿ ಬೇಕಾದಂತಹ ಸೌಲಭ್ಯಗಳನ್ನು ಕೊಡಿಸಲು ಜಿಲ್ಲಾ ಸಚಿವನಾಗಿ ಈ ಸಮಾಜಕ್ಕೆ ಬೆಂಬಲವನ್ನು ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಭರವಸೆಯನ್ನು ನೀಡಿದರು.

ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಶ್ರೀ ಕ್ಷೇತ್ರ ಗೊಲ್ಲಗಿರಿಯಲ್ಲಿ ಶನಿವಾರ ಶ್ರೀ ಕೃಷ್ಣಯಾದವಾನಂದ ಶ್ರೀಗಳ ಗುರುವಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಚಿತ್ರದುರ್ಗ ಜಿಲ್ಲೆಯಲ್ಲಿ ಯಾದವರು ಮತ್ತು ಕಾಡು ಗೊಲ್ಲರು ಅಧಿಕ ಸಂಖ್ಯೆಯಲ್ಲಿದ್ದಾರೆ. 1978ರಲ್ಲಿ ದೇವರಾಜು ಅರಸುರವರು ಬಿ.ಎಲ್.ಗೌಡರು ಚಳ್ಳಕೆರೆ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಫರ್ದಿಸಿದ್ದರೆ ನಮ್ಮ ಚಿಕ್ಕಪ್ಪರವರಿಗೆ ಬಲವಂತವಾಗಿ ಚುನಾವಣೆಗೆ ಟಿಕೇಟ್‍ನ್ನು ನೀಡುವುದರ ಮೂಲಕ ಚುನಾವಣೆಗೆ ನಿಲ್ಲಿಸಿದರು. ನಮ್ಮ ಮನೆತನ ರಾಜಕಾರಣಕ್ಕೆ ದೇವರಾಜು ಅರಸುರವರು ಮೂಲ ಕಾರಣಕರ್ತರಾಗಿದ್ದಾರೆ. ದೇವರಾಜು ಅರಸು ರವರು ನೀಡಿದ ಕೊಡುಗೆಯಿಂದ ಇಂದು ನಾವೆಲ್ಲರೂ ಸಹಾ ಸರ್ಕಾರದ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳುತ್ತಿದ್ದೇವೆ ಎಂದರು.


ದೇವರಾಜು ಅರಸುರವರು ಮೀಸಲಾತಿಯನ್ನು ನೀಡುವುದರ ಮೂಲಕ ಸಣ್ಣ-ಪುಟ್ಟ ಸಮಾಜಗಳನ್ನು ಗುರುತಿಸಿ ಅವರಿಗೆ ಮೀಸಲಾತಿಯನ್ನು ನೀಡಿದು ಅರಸುರವರು. ಶೋಷಿತ ವರ್ಗದವರನ್ನು ಗುರುತಿಸಿ ಅವರನ್ನು ಸಹಾ ಮುಖ್ಯವಾಹಿನಿಗೆ ತರುವಂತ ಕೆಲಸವನ್ನು ಆರಸುರವರು ನಂ1 ಆಗಿ ಕೆಲಸವನ್ನು ಮಾಡಿದ್ದಾರೆ. ಈಗ ಸಿದ್ದರಾಮಯ್ಯರವರು ಈ ರೀತಿಯ ಕೆಲಸವನ್ನು ಮಾಡುತ್ತಿದ್ದಾರೆ. ರಾಜ್ಯವನ್ನು ಕಾಂಗ್ರೆಸ್ ಪಕ್ಷದ ಬುನಾದಿಯ ಮೇಲೆ ನಡೆಸುತ್ತಿದ್ದಾರೆ ಎಂದರು.

ಈ ಯಾದವ ಸಮಾಜಕ್ಕೆ ಹಲವಾರು ಬೇಡಿಕೆ ಇದೆ. ಸಿದ್ದರಾಮಯ್ಯರವರ ಹಿಂದಿನ ಸರ್ಕಾರದಲ್ಲಿ ಹೆಚ್.ಅಂಜನೇಯ ಮತ್ತು ಜಯಚಂದ್ರರವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ನೂರಕ್ಕೆ ನೂರರಷ್ಟು ನಮ್ಮ ಪಕ್ಷ ಈ ಯಾದವ ಸಮಾಜದ ಪರವಾಗಿ ಇದೆ. ನಾನು ಸಹಾ ನೂರಕ್ಕೆ ನೂರರಷ್ಟು ಸ್ವಾಮೀಜಿಯವರ ಜೊತೆಗೆ ಈ ಸಮಾಜಕ್ಕೆ ಅಗತ್ಯವಾಗಿ ಬೇಕಾದಂತಹ ಜಿಲ್ಲಾ ಸಚಿವನಾಗಿ ಈ ಸಮಾಜಕ್ಕೆ ಬೆಂಬಲವನ್ನು ನೀಡುವುದಾಗಿ ಭರವಸೆಯನ್ನು ನೀಡಿ, ಯಾರು ದರ್ಮವನ್ನು ಕಾಪಾಡುತ್ತಾರೆ ಆವರನ್ನು ಧರ್ಮ ಕಾಪಾಡುತ್ತದೆ ಎಂದು ಕೃಷ್ಣ ಹೇಳಿದ್ದಾನೆ ಅದರಂತೆ ನಾವು ನಡೆಯಬೇಕಿದೆ ಎಂದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವರಾದ ಹೆಚ್.ಅಂಜನೇಯ ಮಾತನಾಡಿ, ಚಿತ್ರದುರ್ಗದಲ್ಲಿ ಶ್ರೀಮಠ ನಿರ್ಮಾಣವಾಗಲು ಕೃಷ್ಣಪ್ಪರವರ ಪಾತ್ರ ಅಧಿಕವಾಗಿದೆ. ಮುಂದಿನ ದಿನದಲ್ಲಿ ಕ್ಷೇತ್ರ ಪುನರ್ ವಿಗಂಡನೆಯಾಗಲಿದೆ ಆಗ ನಡೆಯುವ ಚುನಾವಣೆಯಲ್ಲಿ ಯಾದವ ಸಮಾಜದಿಂದ ಒಬ್ಬರು ಆಯ್ಕೆಯಾಗಬೇಕಿದೆ ಇದಕ್ಕೆ ಈ(ಗಿನಿಂದಲೇ ತಯಾರಿಯನ್ನು ಮಾಡಬೇಕಿದೆ. ಇಂದಿನ  ದಿನಮಾನದಲ್ಲಿ ಸರ್ಕಾರ ಮಾಡುವ ಕೆಲಸವನ್ನು ಮಠಗಳು ಮಾಡುತ್ತಿವೆ ಮಕ್ಕಳಿಗೆ ಶಿಕ್ಷಣವನ್ನು ಕೂಡುವುದರ ಮೂಲಕ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಮಾಜದಲ್ಲಿ ಒಗ್ಗಟು ಕಡಿಮೆ ಇದೆ ಮುಂದಿನ ದಿನದಲ್ಲಿ ಸಮಾಜವನ್ನು ಬಲಪಡಿಸಬೇಕಿದೆ, ಸಮಾಜದಲ್ಲಿ ಒಗ್ಗಟಿನ ಕೊರತೆ ಇದೆ ಅದನ್ನು ಸರಿಪಡಿಸಿಕೊಳ್ಳಿ ಇಲ್ಲವಾದರೆ ಮುಂದಿನ ದಿನದಲ್ಲಿ ಸರ್ಕಾರದ ಸೌಲಭ್ಯವನ್ನು ಪಡೆಯಲು ಕಷ್ಠವಾಗಬಹುದೆಂದು ಎಂದು ಕಿವಿ ಮಾತು ಹೇಳಿದರು.

ನಮ್ಮ ರಾಜ್ಯ ಮುಖ್ಯಮಂತ್ರಿಗಳು ಸಹಾ ನಿಮ್ಮ ಪರವಾಗಿಯೇ ಇದ್ದಾರೆ. ಈ ವರ್ಗದ ಜನರ ಹಿತವನ್ನು ಕಾಪಾಡುತ್ತಾರೆ. ಹೋರಾಟ ನಿಮ್ಮಲ್ಲಿ ಕ್ಷಿಣವಾಗುತ್ತಿದೆ ಇದನ್ನು ಮುಂಚೂಣಿಗೆ ತರಬೇಕಿದೆ. ಸಮಾಜವನ್ನು ಕಟ್ಟುವ ಕೆಲಸವನ್ನು ಎಲ್ಲರು ಸೇರಿ ಮಾಡಬೇಕಿದೆ. ಸಣ್ಣ ಸಮಾಜವನ್ನು ಸಹಾ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ನಮ್ಮ ಪಕ್ಷ ಮಾಡುತ್ತದೆ ಎಂದರು.
ಮಾಜಿ ಶಾಸಕ ಎಸ.ಕೆ.ಬಸವರಾಜನ್ ಮಾತನಾಡಿ, ನಿಮ್ಮ ಮಠಕ್ಕೆ ಶ್ರೀಮಠದಿಂದ ಭೂಮಿಯನ್ನು ಕೊಡಿಸುವಲ್ಲಿ ಮಧ್ಯಸ್ಥಿಕೆಯ ಪಾತ್ರವನ್ನು ವಹಿಸಿದ್ದು ಈಗ ಉತ್ತಮವಾದ ಮಠ ನಿರ್ಮಾಣವಾಗಿದೆ, ನಿಮಗೆ ಒಳ್ಳೇಯ ಗುರುಗಳು ಸಿಕ್ಕಿದ್ದಾರೆ ಉತ್ತಮವಾದ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ. ಬೇರೆ ಸಮಾಜದವರು ನಿಮ್ಮ ಅಭೀವೃದ್ದಿಯನ್ನು ನೋಡುವಂತಾಗಬೇಕು ಆ ರೀತಿಯಲ್ಲಿ ಅಭೀವೃದ್ದಿಯನ್ನು ಮಾಡಬೇಕಿದೆ ಯಾದವ ಸಮಾಜಕ್ಕೆ ಚಿತ್ರದುರ್ಗದ ಬೃಹನ್ಮಠಕ್ಕೂ ಆವಿನಾವ ಸಂಬಂಧ ಇದೆ, ಅದನ್ನು ಮುಂದುವರೆಸಿಕೊಂಡು ಹೋಗಿ, ಸಮಾಜ ಬಲಿಷ್ಠವಾಗಬೇಕಿದೆ, ಸಮಾಜದ ಅಭೀವೃದ್ದಿಗೆ ಸರ್ಕಾರ ಸಮಾಜದವರು ಸಹಕಾರವನ್ನು ನೀಡಲಿ ಎಂದು ಆಶಿಸಿದರು.

ಶಾಸಕ ಕೆ.ಸಿ.ವಿರೇಂದ್ರರವರು ಮಾತನಾಡಿ, ಸಮಾಜದವರು ಒಗ್ಗಟಾಗಿ ಇದ್ದಾಗ ಮಾತ್ರ ಬೇರೆಯವರು ನಿಮ್ಮನ್ನು ಕರೆದು ಮಾತನಾಡಿಸಲು ಸಾಧ್ಯವಿದೆ. ನಿಮ್ಮಲ್ಲಿನ ಉಪ ಜಾತಿಗಳು ಸಹಾ ಒಗ್ಗಟಾಗಬೇಕಿದೆ ಆಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿದೆ. ಸಮಾಜ ಒಡೆದರೆ ಯಾರೂ ಸಹಾ ಪರಿಗಣಿಸುವುದಿಲ್ಲ, ಈ ಭಾರಿ ನಿಮ್ಮ ಸಮಾಜದವರಾದ ಶ್ರೀನಿವಾಸ್ ಚುನಾವಣೆಯಲ್ಲಿ ಸ್ಪರ್ದೇ ಮಾಡುತ್ತಿದ್ದಾರೆ ಅವರನ್ನು ಗೆಲ್ಲಿಸುವಂತ ಗಮನ ನೀಡಿ, ಶ್ರೀಗಳು ಸರಳತೆ, ಸಜ್ಜನತೆಯಿಂದ ಕೂಡಿದ್ದಾರೆ. ಸಮಾಜಕ್ಕಾಗಿ ತಮ್ಮ ಜೀವನವನ್ನೆ ತ್ಯಾಗ ಮಾಡಿದ್ದಾರೆ.  ಈದು ದೇಶದಲ್ಲಿ ಇರುವ ಒಂದೇ ಒಂದು ಯಾದವ ಗುರುಪೀಠ ಇದು ಬಿಟ್ಟರೆ ಬೇರೆ ಇಲ್ಲ, ಇವರಿಗೆ ಸಹಕಾರ ಸಹಾಯವನ್ನು ಮಾಡಬೇಕಿದೆ ಎಂದರು.

ರಾಜ್ಯ ಯಾದವ ಸಂಘದ ರಾಜ್ಯಾಧ್ಯಕ್ಷರಾದ ಡಿ.ಟಿ.ಶ್ರೀನಿವಾಸ್ ಮಾತನಾಡಿ, 2004ರಲ್ಲಿ ಇಲ್ಲಿ ಮಠಕ್ಕೆ ಜಾಗವನ್ನು ನೀಡಲಾಯಿತು ತದ ನಂತರ 2008ರಲ್ಲಿ ಮಠವನ್ನು ನಿರ್ಮಾಣ ಮಾಡಲು ಪ್ರಾರಂಭ ಮಾಡಲಾಯಿತಿ ಇದಕ್ಕೆ ಹಲವಾರು ಜನತೆ ತಮ್ಮ  ಸಹಕಾರವನ್ನು ನೀಡಿದ್ದಾರೆ ಇದರಲ್ಲಿ ಕೃಷ್ಣಪ್ಪರವರು ಪ್ರಮುಖರಾಗಿದ್ದಾರೆ. ಈಗ ಮಠ ನಿರ್ಮಾಣವಾಗಿದೆ ಶ್ರೀಗಳು ಇದ್ದಾರೆ. ಚಿತ್ರದುರ್ಗದ ಮೇಲೆ ಹೋಗುವಾಗ ಇಲ್ಲಿಗೆ ಬಂದು ಹೋಗುವ ಪದ್ದತಿಯನ್ನು ನಮ್ಮ ಸಮಾಜದವರು ಬೆಳಸಿಕೊಳ್ಳಬೇಕಿದೆ. ಅಂಜನೇಯರವರ ಸಚಿವರಾಗಿದ್ದಾಗ ಮಠಕ್ಕೆ ಅನುದಾನವನ್ನು ನೀಡಿದ್ದರು.

ಈಗ ನಮ್ಮ ಸಂಘಕ್ಕೆ 100 ವರ್ಷ ಪೂರ್ಣವಾಗಿದೆ ಅದರ ಸಮಾರಂಭವನ್ನು ಅದ್ದೂರಿಯಾಗಿ ಆಚರಣೆ ಮಾಡಬೇಕಿದೆ, ಇದರಿಂದ ಸಮಾಜದ ಘಟ್ಟಿತನವನ್ನು ಪ್ರದರ್ಶನ ಮಾಡಬೇಕಿದೆ. ಇಲ್ಲದಿದ್ದರೆ ನಮ್ಮ ಬೇಡಿಕೆಗಳು ಈಡೇರುವುದಿಲ್ಲ, ಸಮಾಜಕ್ಕೆ ಅನ್ಯಾಯವಾದಾಗ ಎಲ್ಲರು ಸೇರಿ ಅದನ್ನು ಎದುರಿಸಬೇಕಿದೆ.  ಸಮಾಜ ಒಂದಾಗಿ ಶಕ್ತಿಯನ್ನು ಪ್ರದರ್ಶನ ಮಾಡಬೇಕಿದೆ ಎಂದರು.

ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ, ಶಾಸಕರಾದ ಧೀರಜ್ ಮುನಿರಾಜು ಮಾಜಿ ಎಂ.ಎಲ್.ಸಿ.ಶ್ರೀಮತಿ ಜಯ್ಯಮ್ಮ ಬಾಲರಾಜ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಯಾದವ ಸಂಘದ ಉಪಾಧ್ಯಕ್ಷರಾದ ಸಿದ್ದಪ್ಪ, ರಾಜ್ಯ ಯಾದವ್ ಸಂಘದ ರಾಜ್ಯ ಉಪಾಧ್ಯಕ್ಷರಾದ ವಿಠಲ್ ಯಾದವ್, ಮುಖಂಡರಾದ ಸಿ.ಟಿ.ಕೃಷ್ಣಮೂರ್ತಿ, ನರಸಿಂಹರಾಜು, ಶ್ರೀಮತಿ ಗೀತಾನಂದಿನಿಗೌಡ, ಕೆ.ಸಿ.ರಮೇಶ್, ಓ.ಶಂಕರ್, ಜೆಜೆ.ಹಟ್ಟಿ ತಿಪ್ಪೇಸ್ವಾಮಿ. ಮುತ್ತುರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಕೃಷ್ಣ ಯಾದವಾನಂದ ಶ್ರೀಗಳು, ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಶ್ರೀಗಳು, ಕನಕ ಗುರಪೀಠದ ಶ್ರೀ ಈಶ್ವರನಂದಪುರಿ ಶ್ರೀಗಳು, ಮೇದಾರ ಗುರುಪೀಠದ ಶ್ರೀ ಮೇದಾರಕೇತೇಶ್ವರ ಶ್ರೀಗಳು ಸೇರಿದಂತೆ ಇತರೆ ಮಠದ ಶ್ರೀಗಳು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೇಸಿಗೆಯಲ್ಲಿ ಕೂದಲಿಗೆ ಎಣ್ಣೆ ಹಚ್ಚಿದರೆ ಏನಾಗುತ್ತೆ ಗೊತ್ತಾ ?

ಸುದ್ದಿಒನ್ : ಹವಾಮಾನದ ಬದಲಾವಣೆಗೆ ಅನುಗುಣವಾಗಿ ಚರ್ಮ ಮತ್ತು ಕೂದಲಿಗೆ ಸರಿಯಾದ ಪೋಷಣೆ ನೀಡಬೇಕು. ಇಲ್ಲದಿದ್ದರೆ ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಅನೇಕ ಜನರು ತಮ್ಮ ಕೂದಲಿಗೆ ಎಣ್ಣೆಯನ್ನು ಹಾಕುವುದಿಲ್ಲ ಏಕೆಂದರೆ ಅದು ಬೇಸಿಗೆಯಲ್ಲಿ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ, ಗುರುವಾರ ರಾಶಿ ಭವಿಷ್ಯ -ಮೇ-2,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ ,

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

error: Content is protected !!