Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಐಎಸ್‍ಐ ಗುರುತು ಇರುವ ಉತ್ಪನ್ನಗಳು ಮಾತ್ರ ಬಳಕೆಗೆ ಯೋಗ್ಯ : ಸೌವಿಕ್ ಸಿಖ್‍ದರ್

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, (ಫೆ.10) : ಉತ್ಪನ್ನಗಳ ಮೇಲೆ ಐಎಸ್‍ಐ ಗುರುತಿನ ವಸ್ತುಗಳ ಗುಣಮಟ್ಟದ ಬಗ್ಗೆ ಎಲ್ಲರೂ ಮಾಹಿತಿ ಪಡೆಯುವುದು ಅತ್ಯವಶ್ಯಕವಾಗಿದ್ದು, ಯಾವುದೇ ವಸ್ತುವನ್ನು ಖರೀದಿ ಮಾಡುವಾಗ, ಸಂಗ್ರಹಿಸುವಾಗ ಅದರ ಗುಣಮಟ್ಟ ನೋಡಿ ನಂತರ ಖರೀದಿಸಬೇಕು ಎಂದು ಬಿಐಎಸ್ ಹುಬ್ಬಳ್ಳಿ ಶಾಖೆಯ ಸಹಾಯಕ ನಿರ್ದೇಶಕ ಸೌವಿಕ್ ಸಿಖ್‍ದರ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್) ಹುಬ್ಬಳ್ಳಿ ಶಾಖೆ ವತಿಯಿಂದ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಐಎಸ್‍ಐ ಗುರುತು ಇರುವ ಉತ್ಪನ್ನಗಳು ಮಾತ್ರ ಬಳಕೆಗೆ ಯೋಗ್ಯವೆಂದು ಅರಿಯಬೇಕು. ಉತ್ಪನ್ನಗಳು ಗುಣಮಟ್ಟದಿಂದ ಕೂಡಿರದಿದ್ದಲ್ಲಿ ಅಂತಹ ಕೈಗಾರಿಕೆ, ಸಂಸ್ಥೆಗಳ ಮೇಲೆ ಬಿಐಎಸ್‍ನಿಂದ ಕಾನೂನು ಕ್ರಮಕೈಗೊಳ್ಳಲು ಅವಕಾಶವಿದೆ. ಉತ್ಪನ್ನ, ವಸ್ತು, ಸಾಮಗ್ರಿಗಳ ಗುಣಮಟ್ಟ ಪರೀಕ್ಷಿಸಲು ದೇಶದಲ್ಲಿ ಬಿಐಎಸ್‍ನ 8 ಪ್ರಯೋಗಾಲಯ ಹಾಗೂ ಬಿಐಎಸ್‍ನಿಂದ ಅಧಿಕೃತವಾಗಿ ಗುರುತಿಸಿರುವ 270 ಖಾಸಗಿ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಬಿಐಎಸ್ ಪರವಾನಗಿ ಇಲ್ಲದೇ ಉತ್ಪನ್ನಗಳ ಮೇಲೆ ಐಎಸ್‍ಐ ಮಾರ್ಕ್ ಅಳವಡಿಸಲು ಅವಕಾಶವಿಲ್ಲ. ಗಾಹಕರಿಗೆ ಉತ್ಪನ್ನಗಳನ್ನು ಸರಬರಾಜು ಮಾಡುವ ಕೈಗಾರಿಕೆಗಳು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಚಿನ್ನ, ಬೆಳ್ಳಿ, ಅಭರಣಗಳನ್ನು ಕೊಳ್ಳುವಾಗ ಬಿಐಎಸ್‍ನ ಹಾಲ್‍ಮಾರ್ಕ್ ಇರುವುದನ್ನು ಗ್ರಾಹಕರು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಶುದ್ಧವಲ್ಲದ ಚಿನ್ನ, ಬೆಳ್ಳಿಯನ್ನು ಖರೀದಿಸಿ ನಷ್ಟ ಅನುಭವಿಸಬೇಕಾಗುತ್ತದೆ ಎಂದರು.

ಬಿಐಎಸ್ ಹುಬ್ಬಳ್ಳಿ ಶಾಖೆಯ ಪ್ರಚಾರ ಅಧಿಕಾರಿ ಮೊಹಮದ್ ಅಹ್ಮದ್ ಬಿಜಾಪುರ್ ಮಾತನಾಡಿ, ಕಟ್ಟಡ ಕಾಮಗಾರಿಗಳಲ್ಲಿ ಬಳಸುವ ಸಿಮೆಂಟ್, ಕಬ್ಬಿಣ, ಗೃಹಬಳಕೆಯ ಗ್ಯಾಸ್ ಸಿಲಿಂಡರ್, ಪ್ಯಾಕೇಟ್ ಕುಡಿಯುವ ನೀರು, ರಸಗೊಬ್ಬರ, ರಾಸಾಯನಿಕಗಳು, ವೈದ್ಯಕೀಯ ಉಪಕರಣಗಳು, ಕುಡಿಯುವ ನೀರಿನ ಸಂಪರ್ಕಕ್ಕೆ ಬಳಸುವ ಪಿವಿಸಿ ಪೈಪ್‍ಗಳು, ಅಂಗನವಾಡಿಗಳಲ್ಲಿ ವಿತರಿಸುವ ಆಹಾರ, ಶಾಲೆಗಳಿಗೆ ಪೂರೈಕೆ ಮಾಡುವ ಹಾಲಿನ ಪುಡಿ ಸೇರಿದಂತೆ ಎಲ್ಲ ರೀತಿಯ ಹಾಲಿನ ಉತ್ಪನ್ನಗಳು, ಜಾನುವಾರುಗಳ ಆಹಾರ ಪೊಟ್ಟಣಗಳ ಮೇಲೆ ಐಎಸ್‍ಐ ಗುರುತು ಇರುವುದನ್ನು ಸಂಬಂಧಿಸಿದ ಅಧಿಕಾರಿಗಳು ಖಚಿತಪಡಿಸಿಕೊಂಡು ಖರೀದಿಸಬೇಕು ಎಂದು ಸಲಹೆ ನೀಡಿದರು.

ಯಾವುದೇ ತಯಾರಿಕಾ ಸಂಸ್ಥೆ, ಕೈಗಾರಿಕೆಗಳು ತಯಾರಿಸುವ ಸರಕು, ಸಾಮಾಗ್ರಿ, ಉತ್ಪನ್ನಗಳಿಗೆ ಸಂಬಂಧಿಸಿದಂತೆ ಬಿಐಎಸ್‍ನಿಂದ ಪರವಾನಗಿ ಪಡೆದಿರುವ ಬಗ್ಗೆ ಜಾಲತಾಣ www.bis.gov.in ಅನ್ನು ಸಂಪರ್ಕಿಸಿ ಪರಿಶೀಲಿಸಬಹುದು ಎಂದು ತಿಳಿಸಿದ ಅವರು, ಪ್ಲೇಸ್ಟೋರ್‍ನಿಂದ ಬಿಐಎಸ್ ಕೇರ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬಹುದು ಎಂದರು.

ಬ್ಯೂರೋ ಆಫ್ ಇಂಡಿಯನ್ ಸ್ಟಾಂಡಡ್ರ್ಸ್‍ನ ಕಾರ್ಯಚಟುವಟಿಕೆಗಳ ಬಗ್ಗೆ ಅಧಿಕಾರಿಗಳಿಗೆ ಪಿಪಿಟಿ ಪ್ರದರ್ಶನ ಮೂಲಕ ಮಾಹಿತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರ ರೇಖಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ,  ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾಗೇಂದ್ರನಾಯ್ಕ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

ಛಲವಾದಿ ಗುರುಪೀಠದ ಸ್ವಾಮೀಜಿಯಿಂದ ದೇವೇಗೌಡರ ಭೇಟಿ, ಸಾಂತ್ವನ

ಬೆಂಗಳೂರು: ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಜೈಲು ಪಾಲಾಗಿದ್ದಾರೆ. ಜಾಮೀನು ಸಿಗದೆ ನ್ಯಾಯಾಂಗ ಬಂಧನ ಮುಂದುವರೆಯುತ್ತಲೆ ಇದೆ. ಇನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ನಿಂದಾಗಿ ವಿದೇಶದಲ್ಲಿಯೇ

error: Content is protected !!