ಸೈನಿಕರು ಮತ್ತು ಮಾಜಿ ಸೈನಿಕರಿಗೆ ಉದ್ಯೋಗ ನೇಮಕಾತಿಗಾಗಿ ಆನ್‌ಲೈನ್ ತರಬೇತಿ

1 Min Read

ಚಿತ್ರದುರ್ಗ. ಅ.30: ಆರ್ಮಿ ವೇಲ್‌ಫೇರ್ ಪ್ಲೇಸ್‌ಮೆಂಟ್ ಆರ್ಗನೈಜೇಷನ್  (AWPO) ಮತ್ತು ದಿ ಮಾವೆನ್ ಕೊಹಾರ್ಟ್  (The Maven Cohort) ಎಂಬ ಸಂಸ್ಥೆಯ ಸಹಯೋಗದೊಂದಿಗೆ ಭಾರತೀಯ ಸೇನೆಯ ಜೆ.ಸಿ.ಓ  (JCO )  ರ‍್ಯಾಂಕ್‌ವರೆಗಿನ ಕೊನೆಯ ವರ್ಷದ ನವೃತ್ತಿ ಅಂಚಿನಲ್ಲಿರುವ ಸೈನಿಕರು ಹಾಗೂ ನಿವೃತ್ತ ಮಾಜಿ ಸೈನಿಕರುಗಳ ಕೇಂದ್ರ ಸರ್ಕಾರಿ ಉದ್ಯೋಗ ಮತ್ತು ಬ್ಯಾಂಕ್ ಉದ್ಯೋಗ ನೇಮಕಾತಿಗಾಗಿ ಪಾವತಿಯ ಮೇರೆಗೆ ಪೂರ್ವ ತಯಾರಿ ಆನ್‌ಲೈನ್ ತರಬೇತಿಗಳನ್ನು ಪರಿಚಯಿಸುತ್ತಿದೆ.

 

ನವೆಂಬರ್ 6 ರಿಂದ ತರಬೇತಿ ಆರಂಭಗೊಳ್ಳಲಿದ್ದು,ಆಸಕ್ತರು AWPO     ಜಾಲತಾಣ  https://me-qr.com/ZloLV2HS     ನಲ್ಲಿ ನೊಂದಾಯಿಸಿಕಳ್ಳುವುದರ ಮೂಲಕ ತರಬೇತಿಯ ಸುವರ್ಣಾವಕಾಶವನ್ನು ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಆರ್ಮಿ ವೇಲ್‌ಫೇರ್ ಪ್ಲೇಸ್‌ಮೆಂಟ್ ಆರ್ಗನೈಜೇಷನ್  AWPO   ನ ಜಾಲತಾಣವನ್ನು ಸಂಪರ್ಕಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಆರ್.ಸಿ.ಹಿರೇಮಠ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *