Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶುಭಕೃತ್ ನಾಮ ಸಂವತ್ಸರ 2022-23 : ದ್ವಾದಶ ರಾಶಿಯವರ ಗೋಚಾರ ಫಲ

Facebook
Twitter
Telegram
WhatsApp

ಕಾರ್ತೀಕ್ ದೇಸಾಯಿ

ಜ್ಯೋತಿಷ್ಯ ಪ್ರವೀಣ
[ಇಂಡಿಯನ್ ಕೌನ್ಸಿಲ್ ಆಫ್ ಆಸ್ಟ್ರಾಲಾಜಿಕಲ್ ಸೈನ್ಸ್]
ಜ್ಯೋತಿರ್ಗುಹಾ ಆಸ್ಟ್ರೋ ಸೆಂಟರ್
ವಿ.ಪಿ. ಬಡಾವಣೆ, ಚಿತ್ರದುರ್ಗ,
9739730876

ಮೇಷ ರಾಶಿ :

ಕುಟುಂಬದಲ್ಲಿ ಸುಖ, ಧರ್ಮ ಸ್ಥಾನಗಳಲ್ಲಿ ಪ್ರಯಾಣ, ತೀರ್ಥ ಕ್ಷೇತ್ರಗಳ ದರ್ಶನ, ಸಮುದ್ರ ದರ್ಶನ, ತೀರ್ಥ, ನದಿ ಸ್ನಾನ ಮಾಡುವ ಭಾಗ್ಯ. ವಾಹನ ಖರೀದಿ, ಜಮೀನು, ಆಸ್ತಿ ಲಾಭ, ಸ್ಥಾನ ಪಲ್ಲಟ, ಆರೋಗ್ಯದಲ್ಲಿ ವೃದ್ಧಿ, ಶತ್ರುಹಾನಿ, ಮನಸ್ಸಿಗೆ ನೆಮ್ಮದಿ ದೊರಕುವುದು. ಕೋರ್ಟ್ ಕಚೇರಿ ಕೆಲಸಗಳಲ್ಲಿ ಸ್ವಲ್ಪ ನಿಧಾನವಾಗುವುದು.
ಆದರೆ 17-01-2023 ರಿಂದ ಎಲ್ಲಾ ಫಲಗಳು ಒಳ್ಳೆಯ ರೀತಿಯಲ್ಲಿ ಸುಧಾರಣೆಗೆ ಬರುತ್ತವೆ.

ಪರಿಹಾರ : ಪ್ರತಿ ಶನಿವಾರ ಆಂಜನೇಯನಿಗೆ ತುಪ್ಪದ ದೀಪ  ಹಾಗೂ ವಡೆ ಹಾರ ಹಾಕುವುದು.

ವೃಷಭ ರಾಶಿ : ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿಯಲ್ಲಿ ವೃದ್ಧಿ, ವಿದ್ಯೆಯ ಕಡೆಗೆ ವಿಶೇಷ ಗಮನ, ಮಾನಸಿಕ ದೃಢತೆ, ಸಂಪಾದಕರಿಗೆ ಬರವಣಿಗೆಯಿಂದ ಲಾಭ ಮತ್ತು ಕೀರ್ತಿ, ಒಳ್ಳೆಯ ಆಹಾರ ಭಾಗ್ಯ, ಹಣ್ಣು ಮತ್ತು ತರಕಾರಿ ಬೆಳೆಯುವ ರೈತರಿಗೆ ಒಳ್ಳೆಯ ಲಾಭ
ಯಾರಿಗಾದರೂ ಪಿತೃ ಸಾಲ ಇದ್ದಲ್ಲಿ ಸಾಲ ನಿವಾರಣೆ. ಷೇರು ಮಾರುಕಟ್ಟೆ ವ್ಯವಹರಿಸುವವರಿಗೆ ಪ್ರಗತಿ. ಸಿನಿಮಾ ರಂಗದವರಿಗೆ ಒಳ್ಳೆಯ ಮುನ್ನಡೆ. ವೃತ್ತಿಯಲ್ಲಿ ಅಸಮಾಧಾನ, ಬಂಧು ಮಿತ್ರರಲ್ಲಿ ವಿರೋಧ ಮಾಡಿಕೊಳ್ಳುವ ಸಾಧ್ಯತೆ.

ಪರಿಹಾರ :
1)ಬಡವರಿಗೆ ಗೋಧಿ ರೊಟ್ಟಿ ಮತ್ತು ಪಲ್ಯ ನೀಡುವುದು.

ಮಿಥುನ ರಾಶಿ :  ಧನ ಲಾಭ, ಕಾರ್ಪೋರೇಟ್ ಕೆಲಸದವರಿಗೆ ವಾಹನ ಸೌಕರ್ಯ, ಪತಿ ಪತ್ನಿಯರ ಮಧ್ಯೆ ಸುಖಾನುಭವ, ಕುಟುಂಬದಿಂದ ಲಾಭ, ಮಾತೃವಿಗೆ ಸೌಖ್ಯ, ಒಳ್ಳೆಯ ಮಾತುಗಾರಿಕೆ, ಸೋದರ ಮಾವನಿಗೆ ದೂರ ಪ್ರಯಾಣ, ಸ್ಥಾನ ಪಲ್ಲಟ, ವೃತ್ತಿಯಲ್ಲಿ ಬದಲಾವಣೆ, ವಾಹನಾನುಕೂಲ, ಗ್ರಂಥ ರಚನೆ ಮಾಡುವವರಿಗೆ ಅನುಕೂಲ, ಶತ್ರುನಾಶ, ಪತ್ನಿಯಿಂದ ಲಾಭ. ಆರೋಗ್ಯದಲ್ಲಿ ಏರುಪೇರು, ಕಾಲುಗಳಲ್ಲಿ ದೌರ್ಬಲ್ಯ, ಕೀಲು ನೋವು ಕಾಣಿಸಿಕೊಳ್ಳುವ ಸಂಭವ.

ಪರಿಹಾರ :
1) ಉದ್ದನೆಯ ಕುಂಬಳಕಾಯಿಯನ್ನು ಶನಿ ದೇವರ ದೇವಸ್ಥಾನಕ್ಕೆ ದಾನ ಮಾಡುವುದು.

ಕಟಕ ರಾಶಿ :
ಮನಸ್ಸಿಗೆ ಶಾಂತಿ, ದೈವ ದರ್ಶನ, ನದಿ, ತೀರ್ಥ ದರ್ಶನ ಹಾಗೂ ಸ್ನಾನ, ಸಹೋದರರಲ್ಲಿ ಹೊಂದಾಣಿಕೆ, ಬುದ್ಧಿ ಚುರುಕಾಗುವಿಕೆ, ಹೊಸ ಅನ್ವೇಷಣೆ, ಧರ್ಮ ಕಾರ್ಯಗಳಲ್ಲಿ ಮುನ್ನಡೆ, ಮಕ್ಕಳಿಗೆ ಸ್ಥಾನ ಪಲ್ಲಟ, ಮಕ್ಕಳಿಂದ ಸೌಖ್ಯ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ, ದೂರ ಪ್ರಯಾಣ.
ಗಂಡಹೆಂಡತಿಯರಲ್ಲಿ ಸ್ವಲ್ಪ ವೈಮನಸ್ಯ,
ಆರೋಗ್ಯದಲ್ಲಿ ಸಮಸ್ಯೆ, ಮಿತ್ರರಲ್ಲಿ ಸಮಸ್ಯೆ ಆಗುವ ಸಾಧ್ಯತೆ ಇರುವುದು.

ಪರಿಹಾರ:
1) ಹಾಲನ್ನು ಈಶ್ವರನ ದೇವಸ್ಥಾನದಲ್ಲಿ ದಾನ ಮಾಡುವುದು (ಪ್ರತಿ ಸೋಮವಾರ)

ಸಿಂಹ ರಾಶಿ :
ಒಳ್ಳೆಯ ಆರೋಗ್ಯ, ಧನ ಧಾನ್ಯ ಅಭಿವೃದ್ಧಿ, ಸರ್ಕಾರಿ ಕೆಲಸದಲ್ಲಿ ಪ್ರಗತಿ, ಸಾರ್ವಜನಿಕ ಕ್ಷೇತ್ರದಲ್ಲಿ ನೆಮ್ಮದಿ, ಅಧಿಕಾರಿಗಳಿಗೆ ಲಾಭ, ರಾಜಕಾರಣಿಗಳಿಗೆ ಯಶಸ್ಸು, ಗುಪ್ತ ನಿಧಿ ಹುಡುಕಾಟ ಅಥವಾ ಪ್ರಾಪ್ತಿ. ವೈದ್ಯಕೀಯ ವೃತ್ತಿಯವರಿಗೆ ಲಾಭ. ಇನ್ಸೂರೆನ್ಸ್, ಗ್ರಾಚ್ಯುಟಿಯಲ್ಲಿ ಹಣ ಹೂಡುವಿಕೆ ಹಾಗೂ ಲಾಭ. ಕಠಿಣವಾದ ವ್ಯವಹಾರಗಳಲ್ಲಿ ಪ್ರವೇಶಿಸುವುದು.

ಜೊತೆಗೆ ಬಂಧುಮಿತ್ರರಲ್ಲಿ ಕಲಹ, ನೀರಿನಿಂದ ಅಪಘಾತ, ಹೃದಯ ತೊಂದರೆ, ಕಳ್ಳತನ ಆಗುವ ಸಂಭವ, ದಾಯಾದಿಗಳಲ್ಲಿ ಕಲಹ, ಗಂಡಹೆಂಡತಿಯರಲ್ಲಿ ಜಗಳ, ಅನಾರೋಗ್ಯ ಕಾಡಬಹುದು.

ಪರಿಹಾರ :
1) ಹರಿವಂಶ ಪುರಾಣ ಅಥವಾ ವಿಷ್ಣು ಸಹಸ್ರನಾಮ ಪಠಿಸುವುದು.

ಕನ್ಯಾ ರಾಶಿ :
ವಿವಾಹ ಪ್ರಾಪ್ತಿ, ಗಂಡ/ಹೆಂಡಂದಿರ ನಡುವೆ ಒಳ್ಳೆ ಸಾಮರಸ್ಯ, ಮನೆ ಕಂಟ್ರಾಕ್ಟರ್ ಗಳಿಗೆ ಒಳ್ಳೆಯ ಲಾಭ, ಸಮಾಜದಲ್ಲಿ ಬೆರೆಯುವಿಕೆ, ಗೌರವ, ವರ್ಚಸ್ಸು ಹೆಚ್ಚುವುದು. ಕಳೆದು ಹೋದ ಆಸ್ತಿ ಸಂಪಾದಿಸುವುದು, ಧನ ಲಾಭ, ವಿದೇಶದಲ್ಲಿ ವ್ಯವಹರಿಸುವವರಿಗೆ ಲಾಭ, ಮೈದುನನಿಗೆ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಹಣ ಹೂಡುವಿಕೆ. ಸ್ನೇಹಿತರಿಂದ ಸಂತೋಷ, ದೂರ ದೇಶಪ್ರಯಾಣ, ತೀರ್ಥಯಾತ್ರೆ ಪ್ರಯಾಣ, ರೈತರಿಗೆ ಕೃಷಿಯಿಂದ ಅಭಿವೃದ್ಧಿ ಕಂಡುಬರುವುದು.

ಬಂಧು ಬಾಂಧವರಲ್ಲಿ ಸ್ವಲ್ಪ ಮಟ್ಟಿಗೆ ಅಸಮಾಧಾನ, ಅವಿಶ್ರಾಂತ ದುಡಿಮೆ, ಧೈರ್ಯ ಕುಂದುವಿಕೆಯಾಗುವ ಅನುಭವ, ಮಾನಸಿಕ ಭಯ ಉಂಟಾಗುವ ಸಾಧ್ಯತೆ ಒದಗಬಹುದು.

ಪರಿಹಾರ :
1) ಕನ್ಯೆಯರನ್ನು (12 ವರ್ಷಕ್ಕಿಂತ ಕಡಿಮೆ ವಯಸ್ಸಿನ) ಪೂಜಿಸುವುದು.

 

ತುಲಾ ರಾಶಿ :
ನಿರುದ್ಯೋಗ ಇದ್ದಲ್ಲಿ ಉದ್ಯೋಗ ಪ್ರಾಪ್ತಿ. ಹೆಸರು ಗಳಿಸುವಿಕೆ, ದೇವತಾ ಕಾರ್ಯಗಳಲ್ಲಿ ಮುನ್ನಡೆ, ಆಧ್ಯಾತ್ಮಿಕ ಚಿಂತನೆ ಕಡೆ ಒಲವು, ಹಣಕಾಸಿನ ವ್ಯವಸ್ಥೆ, ಗುರು, ಹಿರಿಯರ ನಡುವೆ ಗೌರವ ಹಾಗೂ ಪ್ರೀತಿಗಳಿಸುವಿಕೆ, ಧನ ಲಾಭ, ಕುಟುಂಬದಲ್ಲಿ ಸೌಖ್ಯ, ವಾಕ್ ಶುದ್ಧಿ, ಸಿನಿಮಾ ರಂಗದಲ್ಲಿ ಇರುವವರಿಗೆ ಹೊಸ ಅವಕಾಶ. ಧೈರ್ಯವಾಗಿ ಮುನ್ನಡೆಯುವಿಕೆ, ಸಮುದ್ರ ದರ್ಶನ, ಹೆಣ್ಣು ದೇವತೆಯ ಆಶೀರ್ವಾದ ಸಿಗುವ ಲಕ್ಷಣಗಳು ದೊರಕುವುದು.
ಜೊತೆಗೆ ವಾಹನ ಓಡಿಸುವಾಗ ಜಾಗ್ರತೆ ಇಟ್ಟುಕೊಳ್ಳುವುದು, ಮನೆಕಟ್ಟುವುದು ಅಷ್ಟು ಸಮಂಜಸವಲ್ಲ. ಹೊಲ, ಜಮೀನು ಖರೀದಿ ಮಾಡುವುದು, ಸಾಲ ಕೊಡುವುದು, ಶ್ಯೂರಿಟಿ ಹಾಕುವುದಕ್ಕೆ ಈ ವರ್ಷ ಅಷ್ಟು ಅನುಕೂಲ ಪರಿಸ್ಥಿತಿ ಇರುವುದಿಲ್ಲ.

ಪರಿಹಾರ:
1) ಬಡವರಿಗ ಗೋಧಿ ರೊಟ್ಟಿ ಮತ್ತು ಪಲ್ಯವನ್ನು ದಾನ ಮಾಡುವುದು.

 

ವೃಶ್ಚಿಕ ರಾಶಿ :
ಕುಟುಂಬ ಸೌಖ್ಯ, ಧರ್ಮಾಚರಣೆ, ಧನ ಲಾಭ, ಪುತ್ರರಿಂದ ಸೌಖ್ಯ, ವಿವಾಹ ಪ್ರಾಪ್ತಿ, ನದಿ, ತೀರ್ಥ ಸ್ನಾನ, ಧರ್ಮ ಗುರುಗಳಿಂದ ಆಶೀರ್ವಾದ. ಮನಸ್ಸಿಗೆ ಸಂತೋಷ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಯೋಗ, ಒಳ್ಳೆಯ ನಿದ್ದೆ, ಕನಸಿನಲ್ಲಿ ದೇವರ ದರ್ಶನ, ಧ್ಯಾನ, ಯೋಗ ಮಾಡುವ ನಿರೀಕ್ಷಣೆ, ಸ್ಮಶಾನ ವೈರಾಗ್ಯವು ಒದಗುವ ಸಂಭವ, ಪುರೋಹಿತ ವೃತ್ತಿಯವರಿಗೆ ಗೌರವ, ಅನುಕೂಲ ಹಾಗೂ ಎಲ್ಲಡೆಯಲ್ಲಿಯೂ ಲಾಭ, ವ್ಯವಹಾರಸ್ಥರಿಗೆ ಲಾಭ.

ಅಣ್ಣತಮ್ಮಂದಿರಲ್ಲಿ  ಕಲಹ, ಧೈರ್ಯ ಕುಂದುವಿಕೆ, ಕೆಲವೊಂದು ಬಾರಿ ಮನಸ್ಸು ಚಂಚಲವಾಗುವ ಸಂಭವ, ದೂರ ಪ್ರಯಾಣದಿಂದ ಆಯಾಸ.

ಪರಿಹಾರ:
1) ಸಿಹಿ ಲಾಡನ್ನು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹಂಚುವುದು ಹಾಗೂ
ಹನುಮಾನ್ ಚಾಲೀಸಾ ಪಠಿಸುವುದು.

ಧನಸ್ಸು ರಾಶಿ :
ಕೆಲಸ ಕಾರ್ಯಗಳಲ್ಲಿ ಮುನ್ನಡೆ, ವಾಹನ ಸೌಖ್ಯ, ನೂತನ ಮನೆ ಕಟ್ಟಿಸುವಿಕೆ, ನೂತನ ವಾಹನ, ವಸ್ತ್ರಾಭರಣ ಖರೀದಿ, ಸ್ಥಾನ ಪಲ್ಲಟ, ಉತ್ತಮ ಉದ್ಯೋಗ ಪ್ರಾಪ್ತಿ, ಹೊಲ ಜಮೀನು ಖರೀದಿ. ಉದ್ಯಾನವನ ಸ್ಥಾಪನೆ ಮತ್ತು ವಸ್ತು ಸಂಗ್ರಹಾಲಯದವರಿಗೆ ಉತ್ತಮ ಲಾಭ. ಒಳ್ಳೆಯ ವಿದ್ಯೆ ಕಲಿಯುವಿಕೆ, ದೇವರಲ್ಲಿ ದೃಢ ನಂಬಿಕೆ ಉಂಟಾಗುವ ಯೋಗ, ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಲಾಭ ಹಾಗೂ ಸೌಖ್ಯ, ಕಳೆದುಕೊಂಡ ಆಸ್ತಿ ಪುನರ್ ಪ್ರಾಪ್ತಿ.
ಜೊತೆಗೆ ಬಂಧು ಮಿತ್ರದಲ್ಲಿ ಸ್ವಲ್ಪ ವೈಮನಸ್ಸು ಆಗುವ ಸಂಭವ. ವೃಥಾ ತಿರುಗಾಟ ಮಾಡುವುದರಿಂದ ಆಯಾಸ, ಮಾನಸಿಕ ಚಾಂಚಲ್ಯ, ಕುಟುಂಬದಲ್ಲಿ ವ್ಯತ್ಯಾಸಗಳಾಗುವ ಸಂಭವವ.

ಪರಿಹಾರ :
1) ಒಳ್ಳೆಯ ಗಿಡಗಳನ್ನು ನೆಡುವುದರಿಂದ ಸೌಖ್ಯ ಪ್ರಾಪ್ತಿಯಾಗುತ್ತದೆ.

ಮಕರ ರಾಶಿ :
ಆರೋಗ್ಯದಲ್ಲಿ ಸುಧಾರಣೆ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ ಗಂಡಹೆಂಡತಿಯರಲ್ಲಿ ಸೌಖ್ಯ, ಕುಟುಂಬದಲ್ಲಿ ಶಾಂತಿ, ವ್ಯಾಪಾರಸ್ಥರಿಗೆ ಲಾಭ, ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಗೌರವ ಪ್ರಾಪ್ತಿ. ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ, ಆಧ್ಯಾತ್ಮಿಕ ಚಿಂತನೆ, ಹೊಸ ಉದ್ಯೋಗ ಪ್ರಾಪ್ತಿ, ಒಳ್ಳೆಯ ಗೌರವವನ್ನು ಪಡೆಯುವ ಯೋಗ, ದೈವ ಕಾರ್ಯಗಳಲ್ಲಿ ಆಸಕ್ತಿ, ಮಾನಸಿಕ ಚಾಂಚಲ್ಯದಲ್ಲಿ ಸುಧಾರಣೆ, ಒಳ್ಳೆಯ ಚಿಂತನೆ, ಅಣ್ಣ ತಮ್ಮಂದಿರಿಂದ ಲಾಭ ಹಾಗೂ ಸಂತೋಷ, ಆಕಸ್ಮಿಕ ಧನ ಲಾಭ. ಮಾನಸಿಕ ಚಾಂಚಲ್ಯ, ಮಾಡುವ ಕೆಲಸಗಳಲ್ಲಿ ನಿಧಾನ, ಸೋಮಾರಿತನ ಆವರಿಸುವುದು, ನಿದ್ರೆ, ಮಾಡುವ ಕೆಲಸಗಳಲ್ಲಿ ಆಡಚಣೆ ಆಗುವುದು.

ಪರಿಹಾರ:
1) ಗೋಧಿ, ಉದ್ದು, ಕಡಲೆಹಿಟ್ಟು, ಜೋಳದ ಹಿಟ್ಟು, ಎಳ್ಳನ್ನು ಸೇರಿಸಿ ಉಂಡೆ ಮಾಡಿ ಮೀನಿಗೆ ಸಮರ್ಪಿಸುವುದು. ಮೃತ್ಯುಂಜಯ ಜಪವನ್ನು ಮಾಡುವುದು.

ಕುಂಭ ರಾಶಿ :
ಕುಟುಂಬ ಸೌಖ್ಯ, ಧನ ಲಾಭವಾಗುವುದು, ಕುಟುಂಬಸ್ಥರಿಗೆ ಗೌರವ ಪ್ರಾಪ್ತಿ, ಸಾಲ ಇದ್ದಲ್ಲಿ ಸಾಲ ನಿವಾರಣೆ, ಮತ್ತೊಬ್ಬರಿಗೆ ರಕ್ಷಣೆ ಕೊಡುವುದು, ಮಾತೃ ಮೂಲದಿಂದ ಲಾಭ, ಸ್ನೇಹಿತನಿಂದ ಒಳ್ಳೆಯ ಸಂತೋಷ. ವಿವೇಚನೆಯಲ್ಲಿ ಪ್ರಭುದ್ಧತೆ, ತನ್ನ ಯೋಚನೆಯನ್ನು ಇನ್ನೊಬ್ಬರಿಗೆ ತಿಳಿ ಹೇಳುವುದರಿಂದ ಲಾಭವಾಗುವುದು.

ಕೋರ್ಟ್ ವ್ಯವಹಾರಗಳಲ್ಲಿ ಅಡಚಣೆ, ಅಧಿಕ ತಿರುಗಾಟ ಮಾಡುವುದರಿಂದ ಆಯಾಸ, ಪರಸ್ಥಳ ವಾಸ, ಬಂಧುಗಳಿಂದ ವಿರೋಧ, ಶತ್ರುಗಳ ಅಕ್ರಮಣವಾಗುವ ಸಂಭವ ಇರುತ್ತದೆ.

ಪರಿಹಾರ:
1) ಕಾಗೆಗಳಿಗೆ 48 ದಿನ ಗೋಧಿ ರೊಟ್ಟಿ ತಿನ್ನಿಸುವುದು.

ಮೀನ ರಾಶಿ :
ಕುಟುಂಬದಲ್ಲಿ ಸೌಖ್ಯ, ಗಂಡ ಹೆಂಡತಿಯರ ನಡುವೆ ವಿಶ್ವಾಸ ಹೆಚ್ಚುವುದು, ಪಿತೃ ಮಾಡಿದ ಪುಣ್ಯದಿಂದ ಲಾಭ, ಪಾಪ ಪುಣ್ಯಗಳ ವಿಮರ್ಶೆ ಮಾಡುವುದು, ವಿಹಾರ / ವಿಶ್ರಾಂತಿ ಪಡೆಯುವ ಯೋಗ, ಮಕ್ಕಳಿಂದ ಸಂತೋಷ, ಆತ್ಮಾವಲೋಕನ ಮಾಡುವುದು. ಕೂಡಿಟ್ಟ ಹಣದಿಂದ ಧರ್ಮ ಕಾರ್ಯಗಳನ್ನು ಮಾಡುವ ಯೋಗ ಪ್ರಾಪ್ತಿ.

ಜೊತೆಗೆ ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಸಿಗಲಾರದು, ಅಧಿಕಾರಿಗಳ ಜೊತೆ ವೈಮನಸ್ಸು ನಿಷಿದ್ಧ, ಬಂಧು ಮಿತ್ರರ ಜೊತೆಯಲ್ಲಿ ಅಲ್ಪ ಮಾತು ಮತ್ತು ಮೌನವಾಗಿರುವುದು ಒಳ್ಳೆಯದು.

ಪರಿಹಾರ :
1) ಪ್ರತಿ ದಿನ ಸೂರ್ಯನಮಸ್ಕಾರ ಮಾಡುವುದು.

ವಿಶೇಷ ಸೂಚನೆ :
ಇಲ್ಲಿ ಕೊಟ್ಟಿರುವ ರಾಶಿ ಫಲಗಳು ಕೇವಲ ಗೋಚಾರ ಫಲವಾಗಿರುತ್ತವೆ. ಪೂರ್ಣ ಫಲಗಳನ್ನು ಅವರವರ ಜನ್ಮ ಜಾತಕ ನೋಡಿ ತಿಳಿಯಬೇಕಾಗುತ್ತದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

ಛಲವಾದಿ ಗುರುಪೀಠದ ಸ್ವಾಮೀಜಿಯಿಂದ ದೇವೇಗೌಡರ ಭೇಟಿ, ಸಾಂತ್ವನ

ಬೆಂಗಳೂರು: ಕಿಡ್ನ್ಯಾಪ್ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಜೈಲು ಪಾಲಾಗಿದ್ದಾರೆ. ಜಾಮೀನು ಸಿಗದೆ ನ್ಯಾಯಾಂಗ ಬಂಧನ ಮುಂದುವರೆಯುತ್ತಲೆ ಇದೆ. ಇನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ನಿಂದಾಗಿ ವಿದೇಶದಲ್ಲಿಯೇ

error: Content is protected !!