Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜೂ.26 ರಂದು ಪ್ರೊ. ಬಿ. ಕೃಷ್ಣಪ್ಪ ನವರ 85 ನೇ ಜನ್ಮ ದಿನಾಚರಣೆ : ಸಿ. ಕೆ. ಮಹೇಶ್

Facebook
Twitter
Telegram
WhatsApp

ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್

ಚಿತ್ರದುರ್ಗ, (ಜೂ.24) : ನವಯಾನ ಬುದ್ಡ ಧಮ್ಮ ಹಾಗೂ ಸಾಮಾಜಿಕ ಸಂರ್ಘ ಸಮಿತಿ ಚಿತ್ರದುರ್ಗ ವತಿಯಿಂದ ಪ್ರೂ. ಬಿ. ಕೃಷ್ಣಪ್ಪ ಇವರ 85 ನೇ ಜನ್ಮ ದಿನಾಚರಣೆಯನ್ನು ಜೂ.26 ರ ಭಾನುವಾರ ಡಾ. ಬಿ. ಆರ್ ಅಂಬೇಡ್ಕರ್ ಪ್ರತಿಮೆ ಬಳಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷರಾದ ಸಿ. ಕೆ. ಮಹೇಶ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದಲಿತ ಚಳವಳಿಯ ಮಹಾ ಅವ್ವಳಾದ ಪ್ರೊ. ಬಿ. ಕೃಷ್ಣಪ್ಪನವರ 85 ನೇ ಜನ್ಮ ದಿನವನ್ನು ದಲಿತ ಚಳುವಳಿಯ ಮರುಕಟ್ಟುವಿಕೆಯ ದಿನವನ್ನಾಗಿ ಆಚರಿಸುವ ಹಿನ್ನೆಲೆಯಲ್ಲಿ ದಲಿತರ ಬೃಹತ್ ಸಮ್ಮೇಳನವನ್ನು ಏರ್ಪಡಿಸಲಾಗಿದೆ. ಇದರಲ್ಲಿ ಮತಗಳ ಜಾಗೃತಿ ಆಂದೋಲನ, ಮದ್ಯ ವಿರೋಧಿ ಆಂದೋಲನ ದಲಿತ ಗ್ರಾಹಕರ ಆಂದೋಲನ ಮತ್ತು ನವಯಾನ ಬುದ್ಧ ಧಮ್ಮ ಆಂದೋಲನ ಹಮ್ಮಿಕೊಳ್ಳಲಾಗಿದೆ.

ಇಂದು ಮತಗಳನ್ನು ಮಾರಾಟದ ಸರಕುಗಳನ್ನಾಗಿಸುವ ರಾಜಕಾರಣವು ಎಗ್ಗಿಲ್ಲದೇ ನಡೆಯುತ್ತಿರುವ ಕಾರಣದಿಂದ ಪ್ರಜಾಪ್ರಭುತ್ವವು ಅತ್ಯಂತ ಅಪಾಯದಲ್ಲಿದೆ.ಪ್ರಜಾಪ್ರಭುತ್ವವು ಅರ್ಥ ಕಳೆದು ಕೊಂಡಿದೆ ಮತ್ತು ಧನವಂತರ ಪ್ರಜಾಪ್ರಭುತ್ವವಾಗಿ ರೂಪಾಂತರವಾಗುತ್ತಿದೆ. ಅದರಿಂದ ದಲಿತರು ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಸಾಂವಿಧಾನಿಕಹಕ್ಕುಗಳನ್ನು, ಸವಲತ್ತುಗಳನ್ನು ಕಳೆದು ಕೊಳ್ಳುತ್ತಾರೆ. ಇದು ತಪ್ಪ ಬೇಕಾದರೆ ಮತಗಳು ಮೌಲ್ಯಗಳಾಗ ಬೇಕಾಗಿದೆ. ಮತಗಳನ್ನು ಮೌಲ್ಯವಾಗಿಸಲು “ಮತಗಳ ಜಾಗೃತಿಯ ಆಂದೋಲನ ” ವನ್ನು ನಡೆಸಲು ನಿರ್ಧರಿಸಲಾಗಿದೆ.ಅದಕ್ಕಾಗಿ ಮತಗಳ ಮಹತ್ವ ಕುರಿತು ಪ್ರಚರಿಸಲು ವಿಚಾರ ಸಂಕಿರಣಗಳನ್ನು, ಹಾಡುಗಳನ್ನು ಮತ್ತು ಬೀದಿ ನಾಟಕಗಳನ್ನು ಏರ್ಪಡಿಸಲಾಗುತ್ತದೆ.ಜೊತೆಗೆ ಪಕ್ಷ ಆಧಾರಿತ ಅಧಿಕಾರ ಕೇಂದ್ರದ ಬದಲಿಗೆ ಸಮುದಾಯ ಆಧಾರಿತ ಅಧಿಕಾರ ಕೇಂದ್ರದ ಸ್ಥಾಪನೆಯ ಬಗ್ಗೆ ಚಿಂತನೆ ಮತ್ತು ಕ್ರಿಯೆಗಳನ್ನು ರೂಪಿಸಲಾಗುವುದು ಎಂದರು.

ಇಂದು ಕುಡಿತವು ಮಿತಿಮೀರಿ ಹೆಚ್ಚಾಗುತ್ತಿದೆ. ಯುವಕರಂತೂ ಕುಡಿತದಿಂದ ನಿಷ್ಕ್ರಿಯರಾಗಿದ್ದಾರೆ.ಉದ್ದಿಮೆಗಳು
ಆರಂಭವಾಗುವುದಕ್ಕಿಂತ ಅಧಿಕವಾಗಿ ಬಾರ್ ಶಾಪ್‍ಗಳು ನಾಯಿ ಕೊಡಿಗಳ ರೀತಿಯಲ್ಲಿ ಆರಂಭವಾಗುತ್ತಿವೆ.ಅದರಿಂದ ಅಸಂಖ್ಯಾತ ಕುಟುಂಬಗಳು ಬೀದಿಗಳಿಗೆ ಬೀಳುತ್ತಿವೆ.ಅದರಲ್ಲಿ ದಲಿತರ, ಹಿಂದುಳಿದವರ ಮತ್ತು ಬಡವರ ಕುಟುಂಬಗಳ ಬದುಕುಗಳು ನಾಶದ ಅಂಚುಗೆ ತಲುಪಿವೆ. ಈ ದುಃಸ್ಥಿತಿಯ ತಡೆಯಲು ಮದ್ಯ ವಿರೋಧಿ ಆಂದೋಲನವನ್ನು ಆರಂಭಿಸಲಾಗುತ್ತದೆ ಎಂದು ತಿಳಿಸಿದರು.

ದಲಿತರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ನಿರುದ್ಯೋಗಕ್ಕೆ ಯಾವ ಇತಿ ಮಿತಿಯಿಲ್ಲದಾಗಿದೆ. ಅದರಲ್ಲೂ ದಲಿತ ವಿದ್ಯಾವಂತರ ನಿರುದ್ಯೋಗವಂತೂ ಚಿಂತಾಜನಕ ಸ್ಥಿತಿಯ ತಲುಪಿದೆ.ಇತರೇ ಜಾತಿಯವರು ವ್ಯವಹಾರ ಜಗತ್ತಿಗೆ ಪ್ರವೇಶಿಸುವುದಕ್ಕೆ ಜಾತಿ ಮತ್ತು ಅಸ್ಪೃಶ್ಯತೆಯ ಕಡಿವಾಣವಿಲ್ಲ. ದಲಿತರ ಪ್ರತಿಯೊಂದು ಹೆಜ್ಜೆಗಳಿಗೂ ಅಸ್ಪೃಶ್ಯತೆಯ ತೊಡರುಗಾಲು ಹಾಕುವುದು ಸಾಮಾನ್ಯ ಸಂಗತಿಯಾಗಿದೆ.ಕಾರಣ ದಲಿತರು ವ್ಯವಹಾರ ಜಗತ್ತಿಗೆ ಪ್ರವೇಶಿಸುವುದು ಅತ್ಯಂತ ಕಷ್ಟಕರವಾಗಿದೆ.ಆದರೆ ದಲಿತರು ದೊಡ್ಡ ಸಂಖ್ಯೆಯ ಗ್ರಾಹಕರು.

ಈ ಗ್ರಾಹಕರು ತಮ್ಮನ್ನು ಅಸ್ಪೃಶ್ಯರನ್ನಾಗಿಸಿರುವ ಜಾತಿಗಳ ಶಾಪ್ ಗಳಿಂದಲೇ ತಮಗೆ ಅಗತ್ಯವಾದ ವಸ್ತುಗಳನ್ನು ಮತ್ತು ಸೇವೆಗಳನ್ನು ಖರೀದಿಸುವರು. ಮೇಲ್ಜಾತಿಗಳಿಗೆ ದಲಿತರ ದುಡ್ಡು ಬೆವರುಜ್ಞಾನ ಮತ್ತು ಮತಗಳು ಅಸ್ಪೃಶ್ಯವಲ್ಲ.ಈ ದ್ವಂದ್ವ ವರ್ತನೆಗಳ ತಡೆಯಲು ದಲಿತರು ವ್ಯವಹಾರ ಜಗತ್ತನ್ನು ಪ್ರವೇಶಿಸಿತಮ್ಮ ವ್ಯವಹಾರಕ್ಕೆ ತಾವುಗಳು ಮೊದಲು ಗ್ರಾಹಕರಾಗಲುಉತ್ತೇಜಿಸುವ ಸಲುವಾಗಿ ದಲಿತರು ಜಾತಿವಾದಿ ಗ್ರಾಹಕರಾಗುವ ಪರಿಸರ ನಿರ್ಮಿಸಲು ದಲಿತ ಗ್ರಾಹಕರ ಆಂದೋಲನವನ್ನು ಶುರು ಮಾಡಲಾಗುತ್ತದೆ ಎಂದರು.

ಹಿಂದೂ ಧರ್ಮದ ಅಸ್ಪೃಶ್ಯರಾಗಿ ಹುಟ್ಟಿರುವ, ಅಸ್ಪೃಶ್ಯರಾಗಿ ಬದುಕುತ್ತಿರುವ ಮತ್ತು ಅಸ್ಪೃಶ್ಯರಾಗಿ ಸಾಯುತ್ತಿರು ವದಲಿತರು ಅದರಿಂದ ಬಿಡುಗಡೆಯ ಹೊಂದುವುದು ಅನಿವಾರ್ಯವಾಗಿದೆ.ಮುಂದೆಂದೂ ದಲಿತರು ಅಸ್ಪೃಶ್ಯರಾಗಿ ಹುಟ್ಟುವುದು, ಅಸ್ಪೃಶ್ಯರಾಗಿ ಬದುಕುವುದು ಮತ್ತು ಅಸ್ಪೃಶ್ಯರಾಗಿ ಸಾಯುವುದು ತಪ್ಪಾಬೇಕಾಗಿರುವ ಕಾರಣ ಅವರು ಅಂಬೇಡ್ಕರ್ ತೋರಿದ ತಮ್ಮ ಮೂಲ ಧಮ್ಮವಾದ ಬುದ್ಧ ಧಮ್ಮದ ಕಡೆಗೆ ಚಲಿಸುವ ಅಗತ್ಯವಿದೆ. ದಲಿತರು ಅಸ್ಪೃಶ್ಯರನ್ನಾಗಿಸಿರುವ ಧಾರ್ಮಿಕ ಪರಿಸರದಲ್ಲಿ ಇರುವವರೆಗೂ ಅವರಿಗೆ ಮುಕ್ತ ಚಲನೆ ಮತ್ತು ಮುಕ್ತ ಸ್ವಾತಂತ್ರ್ಯವು ದೊರೆಯುವುದಿಲ್ಲ.ಆ ಕಾರಣ ದಲಿತರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ನವಯಾನ ಬುದ್ಧ ಧಮ್ಮ ಆಂದೋಲನವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಮಹೇಶ್ ತಿಳಿಸಿದರು.

ಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ದುರುಗೇಶಪ್ಪ, ಜಿಲ್ಲಾ ಅಧ್ಯಕ್ಷ ಕೆ. ಕುಮಾರ್ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!