Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸೆಪ್ಟೆಂಬರ್ 12 ರಂದು ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಸಮಾಜಶಾಸ್ತ್ರ ಅಧ್ಯಾಪಕರಿಗೆ ಪಠ್ಯಕ್ರಮ ಕಾರ್ಯಾಗಾರ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ, ಸೆ.10 : ಪದವಿ ವಿಧ್ಯಾರ್ಥಿಗಳಿಗೆ 5 ಮತ್ತು 6 ನೇ ಸೆಮಿಸ್ಟರ್ ನ ಸಮಾಜಶಾಸ್ತ್ರ ಪಠ್ಯಕ್ರಮ ಕಾರ್ಯಾಗಾರವನ್ನು ದಾವಣಗೆರೆ ವಿ.ವಿ‌.ವ್ಯಾಪ್ತಿಯ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಸಮಾಜಶಾಸ್ತ್ರ ಅಧ್ಯಾಪಕರಿಗೆ ಸೆಪ್ಟೆಂಬರ್ 12 ರಂದು ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದೆ.

ದಾವಣಗೆರೆ ವಿಶ್ವವಿದ್ಯಾಲಯ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗ,ಮತ್ತು ದಾವಣಗೆರೆ ವಿಶ್ವವಿದ್ಯಾಲಯ ಸಮಾಜಶಾಸ್ತ್ರ ಅಧ್ಯಾಪಕರ ಸಂಘ.(ರಿ)ದಾವಣಗೆರೆ ಇವರ ಸಹಯೋಗದೊಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ. ಎ.ರಾಮೇಗೌಡ,ವಿಶ್ರಾಂತ ಸಮಾಜಶಾಸ್ತ್ರ ಪ್ರಾಧ್ಯಾಪಕರು, ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ನೆರೆವೇರುಸುವರು. ಅಧ್ಯಕ್ಷತೆಯನ್ನು ಪ್ರೊ.ಬಿ.ಟಿ.ತಿಪ್ಪೇರುದ್ರಸ್ವಾಮಿ, ಪ್ರಾಂಶುಪಾಲರು, ಸರ್ಕಾರಿ ಕಲಾ ಕಾಲೇಜು, ಚಿತ್ರದುರ್ಗ ವಹಿಸುವರು.

ಡಾ.ಹುಚ್ಚೆಗೌಡ, ಸಂಯೋಜಕರು, ಸಮಾಜಶಾಸ್ತ್ರ ವಿಭಾಗ, ದಾವಣಗೆರೆ ವಿ.ವಿ.ತೋಳಹುಣಸೆ, ದಾವಣಗೆರೆ, ಡಾ.ಧನಂಜಯ, ಜಿ.ಬಿ.ಪ್ರಾಂಶುಪಾಲರು, ಸ.ಪ್ರ.ದ.ಕಾಲೇಜು, ಹೊನ್ನಾಳಿ, ಪ್ರೊ.ಜಿ.ಡಿ.ಸುರೇಶ್, ಐ.ಕ್ಯೂ.ಎ.ಸಿ
ಸಂಚಾಲಕರು, ಡಾ.ಹೆಚ್.ತಿಪ್ಪೇಸ್ವಾಮಿ,  ಕಾರ್ಯದರ್ಶಿ, ದಾವಣಗೆರೆ ವಿ.ವಿ.ಸಮಾಜಶಾಸ್ತ್ರ ಅಧ್ಯಾಪಕರ ಸಂಘ,
ಪ್ರೊ.ಎಲ್.ನಾಗರಾಜಪ್ಪ, ಕಾರ್ಯದರ್ಶಿ, ಅಧ್ಯಾಪಕರ ಸಂಘ, ಸರ್ಕಾರಿ ಕಲಾ ಕಾಲೇಜು, ಗೆಜೆಟೆಡ್ ಮ್ಯಾನೇಜರ್ ಮಾರ್ಟಿನ್ ಸ್ಯಾಮುಯೆಲ್‌ ವೇದಿಕೆಯಲ್ಲಿ ಇರುತ್ತಾರೆ.

ಡಾ.ಧರಣೇಂದ್ರಯ್ಯ ಇವರ ಅಧ್ಯಕ್ಷತೆಯಲ್ಲಿ ಅಂತಿಮ ಪದವಿಯ ವಿವಿಧ ಪತ್ರಿಕೆಗಳನ್ನು ಡಾ.ಟಿ.ಮಂಜುಳಾ, ಡಾ.ಕೆ.ಸಿ.ಶರಣಪ್ಪ, ಡಾ.ಸರೇಶ್.ಸಿ ಪದವಿ ಐದನೇ ಸೆಮಿಸ್ಟರ್ ನ ಸಮಾಜಶಾಸ್ತ್ರದ ಪದವಿ ಪತ್ರಿಕೆಗಳನ್ನು

ಪ್ರೊ.ಸಿ.ವೈ. ಯಶೋಧ ಅವರ ಅಧ್ಯಕ್ಷತೆಯಲ್ಲಿ ಡಾ.ತಿಪ್ಪೇಸ್ವಾಮಿ, ಡಾ.ಸಿದ್ದಪ್ಪ ಡಿ.ಓ.ಪ್ರೊ.ಟಿ.ನಾಗರಾಜ್ ಆರನೇ ಸೆಮಿಸ್ಟರ್ ನ ಸಮಾಜಶಾಸ್ತ್ರದ ಪದವಿ ಪತ್ರಿಕೆಗಳನ್ನು ಮಂಡಿಸಲಿದ್ದಾರೆ.

ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಶ್ಯಾಮರಾಜ ಟಿ, ಸಹ ಸಂಚಾಲಕರು ಪ್ರೊ.ಎಸ್.ಆನಂದ, ಪ್ರೊ‌.ನಯಾಜ್ ಅಹಮದ್ ಹಾಗೂ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಸಮಾಜಶಾಸ್ತ್ರ ಅಧ್ಯಾಪಕರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾರ್ಯಾಗಾರದ ಸಂಚಾಲಕ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಆರ್.ಲೇಪಾಕ್ಷ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ :
ಡಾ.ಎಸ್.ಆರ್.ಲೇಪಾಕ್ಷ,ಸಂಚಾಲಕರು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು, ಸರ್ಕಾರಿ ಕಲಾ ಕಾಲೇಜು, ಚಿತ್ರದುರ್ಗ, 9986572664 ಸಂಪರ್ಕಿಸಲು ಕೋರಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಭಾ ಮಲ್ಲಿಕಾರ್ಜುನ್ ಗೆದ್ದರೆ ನಾನು ಗೆದ್ದಂಗೆ: ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಮುಖ್ಯಮಂತ್ರಿಯಾಗಿ ನನಗೆ ಹೆಚ್ಚು ಶಕ್ತಿ ಬರುತ್ತದೆ: ದಾವಣಗೆರೆಯಲ್ಲಿ  ಸಿ.ಎಂ. ಸಿದ್ದರಾಮಯ್ಯ ಹೇಳಿಕೆ

ದಾವಣಗೆರೆ ಮೇ 4: ನನ್ನ ಮತ್ತು ಕನಕಪೀಠದ ನಿರಂಜನಾನಂದಪುರಿ ಶ್ರೀಗಳ ಮಾತನ್ನು ತಿರಸ್ಕರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ವಿನಯ್ ಕುಮಾರ್ ನನ್ನು ನೀವೆಲ್ಲರೂ ತಿರಸ್ಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಇಲ್ಲಿ ನಡೆದ

ಬೆಂಗಳೂರಿನಲ್ಲಿ 3 ದಿನ ಸಾಧಾರಣ ಮಳೆ‌: ಉಳಿದಂತೆ ಎಲ್ಲೆಲ್ಲಿ ಎಷ್ಟು ಮಳೆ ಸಾಧ್ಯತೆ..?

ಬೆಂಗಳೂರು: ಬಿಸಿಬಿಸಿ ಎನ್ನುತ್ತಿದ್ದ ಬೆಂಗಳೂರು ಮಂದಿಗೆ ನಿನ್ನೆ ವರುಣರಾಯ ತಂಪೆರೆದಿದ್ದ. ಮಧ್ಯಾಹ್ನವೇ‌ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಕತ್ತಲು ಕವಿದಿತ್ತು. 3 ಗಂಟೆಯ ವೇಳೆಗೆ ಎಲ್ಲೆಲ್ಲೂ ಜೋರು ಮಳೆಯಾಗಿತ್ತು. ಮಳೆ ಕಂಡು ಬೆಂಗಳೂರು ಮಂದಿ

error: Content is protected !!