Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಜು. 29 ರಂದು ಕಾಗಿನೆಲೆ ಕನಕ ಗುರುಪೀಠದಲ್ಲಿ ಶ್ರೀ ಬಿರೇಂದ್ರ ಕೇಶವ ತಾರಾಕಾನಂದಪುರಿ ಶ್ರೀಗಳ 20 ನೇ ವರ್ಷದ ಪುಣ್ಯಾರಾಧನೆ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಜು. 05 : ಹಾವೇರಿ ಜಿಲ್ಲೆಯ ಬ್ಯಾಡಿಗಿ ತಾಲ್ಲೂಕಿನ ಶ್ರೀ ಕ್ಷೇತ್ರ ಕಾಗಿನಲೆಯ ಶ್ರೀ ಕಾಗಿನಲೆ ಮಹಾ ಸಂಸ್ಥಾನ ಕನಕ ಗುರುಪೀಠದಲ್ಲಿ ಜು. 29 ರಂದು ಬ್ರಹ್ಮಲೀನ ಜಗದ್ಗುರು ಶ್ರೀ ಬಿರೇಂದ್ರ ಕೇಶವ ತಾರಾಕಾನಂದಪುರಿ ಶ್ರೀಗಳ 20 ನೇ ವರ್ಷದ ಪುಣ್ಯಾರಾಧನೆ ಹಾಗೂ 11ನೇ ಗುರು ಪೂರ್ಣಿಮಾ ಸಮಾರಂಭವೂ ಶಾಸಕರಾದ ಬಿ.ಜಿ.ಗೋವಿಂದಪ್ಪ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಸಲು ತೀರ್ಮಾನ ಮಾಡಲಾಯಿತು.

ಇಂದು ಕುರುಬ ಸಂಘದಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಗಿನಲೆ ಸಂಸ್ಥಾಪಕ ಅಧ್ಯಕ್ಷರಾದ ರಾಜುಗೌಡ ಮಾತನಾಡಿ, 1992ರಲ್ಲಿ ಕಾಗಿನೆಲೆಯಲ್ಲಿ ಮಠವನ್ನು ಪ್ರಾರಂಭ ಮಾಡಲಾಯಿತು, ಪ್ರಾರಂಭದಲ್ಲಿ ನಂಜನಗೂಡಿನವರನ್ನು ಮಠಕ್ಕೆ ಸ್ವಾಮಿಗಳನ್ನಾಗಿ ಮಾಡಲಾಯಿತು, ತದ ನಂತರ ಹಿರಿಯೂರಿನ ಹರ್ತಿಕೋಟೆಯವರನ್ನು ನಿರಂಜನಂದ ರವರನ್ನು ಸ್ವಾಮಿಗಳನ್ನಾಗಿ ಮಾಡಲಾಯಿತು, 2016ರಿಂದ ಗುರು ಪೂರ್ಣಿಮ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು, ಇದುವರೆವಿಗೂ 10 ಜಿಲ್ಲೆಯವರ ಜವಾಬ್ದಾರಿಯನ್ನು ತೆಗೆದುಕೊಂಡು ಕಾರ್ಯಕ್ರಮವನ್ನು ಮಾಡಿದ್ದಾರೆ ಈಗ 11ನೇ ಗುರು ಪೂರ್ಣಿಮೆಯನ್ನು ಚಿತ್ರದುರ್ಗ ಜಿಲ್ಲೆಯವರು ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ ಎಂದರು.

 

ಈ ಕಾರ್ಯಕ್ರಮವನ್ನು ನಿರಂತರವಾಗಿ ಕಾಗಿನಲೆಯಲ್ಲಿ ನಡೆಸುತ್ತಾ ಬರಲಾಗಿದೆ, ಆದರೆ ಈ ಕಾರ್ಯಕ್ರಮದ ಖರ್ಚುಗಳನ್ನು ಇದುವರೆವಿಗೂ ಒಂದೊಂದು ಜಿಲ್ಲೆಯವರು ವಹಿಸಿಕೊಂಡು ನಡೆಸುತ್ತಾ ಬಂದಿದಾರೆ ಈ ಬಾರಿ ಚಿತ್ರದುರ್ಗ ಜಿಲ್ಲೆಯ ಕುರುಬ ಸಮಾಜದವರು ನಡೆಸಲು ಮುಂದೆ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಪೂರ್ವಭಾವಿ ಸಭೆಯನ್ನು ನಡೆಸುವುದರ ಮೂಲಕ ಜಿಲ್ಲೆಯ ತಾಲ್ಲೂಕು ಸಮಿತಿಯವರಿಗೆ ಜವಾಬ್ದಾರಿಯನ್ನು ವಹಿಸಲಾಗಿದ್ದು, ಸಮಾಜದವರಿಂದ ದೇಣಿಗೆಯನ್ನು ಸಂಗ್ರಹ ಮಾಡುವುದರ ಮೂಲಕ ಕಾರ್ಯಕ್ರಮ ನಡೆಸಲು ನಿರ್ಧಾರ ಮಾಡಲಾಯಿತು. ಜು. 29ರಂದು ಕಾಗಿನಲೆಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲು ಮುಂದಾಗಿದ್ದು, ಇದಕ್ಕೆ ಬೇಕಾದ ತಯಾರಿಯನ್ನು ನಡೆಸಬೇಕಿದೆ ಎಂದು ರಾಜುಗೌಡ ತಿಳಿಸಿದರು.

 

ಕಾಗಿನಲೆ ಗುರು ಪೀಠಕ್ಕೆ ನಾಲ್ಕು ಜನ ಶ್ರೀಗಳನ್ನು ಚಿತ್ರದುರ್ಗ ಜಿಲ್ಲೆಯಿಂದ ನೀಡಲಾಗಿದೆ, ಈ ಕಾರ್ಯ ಕ್ರಮವನ್ನು ನಮ್ಮ ಮೂಲ ಪೀಠದಲ್ಲಿ ನಡೆಯುವುದು ಮುಖ್ಯ ಉದ್ದೇಶ ವರ್ಷಕ್ಕೆ ಒಮ್ಮೆಯಾದರೂ ಸಹಾ ನಮ್ಮ ಸಮುದಾಯದವರು ಗುರುಪೀಠಕ್ಕೆ ಬಂದು ಅಲ್ಲಿನ ಅಭೀವೃದ್ದಿಯನ್ನು ನೋಡುವುದ್ದಲ್ಲದೆ ಕನಕದಾಸರ ಐಕ್ಯ ಸ್ಥಳವನ್ನು ಪೂಜೆ ಮಾಡಿ ಹೋಗಬೇಕೆನ್ನುವುದು ನಮ್ಮ ಉದ್ದೇಶವಾಗಿದೆ, ಈ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಅಲ್ಲಿಯೇ ನಡೆಸಲಾಗುತ್ತದೆ. ಈಗ ಸಮಯ ಕಡಿಮೆ ಇದರಲ್ಲಿಯೇ ಉತ್ತಮವಾಗಿ ಮಾಡಿಕೊಡಲಾಗುವುದೆಂದು ಚಿತ್ರದುರ್ಗ ಜಿಲ್ಲೆಯವರು ತಿಳಿಸಿದ್ದಾರೆ ಎಂದರು.

 

ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಶ್ರೀರಾಮ ಮಾತನಾಡಿ, ಈ ಭಾರಿ ಕಾರ್ಯಕ್ರಮ ನಮ್ಮ ಪಾಲಿಗೆ ಬಂದಿದೆ ಯಾವುದೇ ಲೋಪವಾಗದಂತೆ ಕಾರ್ಯಕ್ರಮವನ್ನು ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕುರುಬ ಸಮಾಜದವರು ಸೇರಿ ಮಾಡಬೇಕಿದೆ ಇದಕ್ಕೆ ಎಲ್ಲರು ಸಹಾ ತನು, ಮನ ಧನವನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕಿದೆ, ಕಾರ್ಯಕ್ರಮವನ್ನು ಕಾಗಿನಲೆಯಲ್ಲಿ ಮಾಡುವುದರಿಂದ ಖರ್ಚು ಕಡಿಮೆಯಾಗುತ್ತದೆ ಆಲ್ಲದೆ ನಮ್ಮ ಸಮುದಾಯದವರು ಸಹಾ ಕಾಗಿನಲೆಯನ್ನು ನೋಡಿದಂತೆ ಆಗುತ್ತದೆ ಅದೇ ಕಾರ್ಯಕ್ರಮ ಚಿತ್ರದುರ್ಗದಲ್ಲಿ ನಡೆದರೆ ಖರ್ಚು ಹೆಚ್ಚಾಗುತ್ತದೆ ಎಂದು ತಿಳಿಸಿದರು.

 

ಜಿಲ್ಲಾ ಕುರುಬರ ಸಂಘದ ಕಾರ್ಯದರ್ಶಿ ಬಿ.ಟಿ.ಜಗದೀಶ್ ಮಾತನಾಡಿ, ಚಿತ್ರದುರ್ಗ ಹಿಂದುಳಿದ ಜಿಲ್ಲೆಯಾಗಿದ್ದು, ನಮ್ಮಲ್ಲಿ ಬಹಳಷ್ಟು ಜನತೆ ಕೃಷಿ ಮತ್ತು ಕುರಿ ಕಾಯುವ ಕಾಯಕವನ್ನು ಮಾಡುತ್ತಿದ್ದಾರೆ, ನಮ್ಮಲ್ಲಿ ಶ್ರೀಮಂತರಾಗಲಿ, ಉದ್ಯಮೆಗಳಾಗಲಿ ಇಲ್ಲವಾಗಿದೇ ಇದ್ದಲ್ಲದೆ ಮಳೆಯ ಪ್ರಮಾಣ ಕಡಿಮೆಯಾಗಿದೆ ಜನತೆಯಿಂದ ಸಾಧ್ಯವಾದಷ್ಟು ಹಣವನ್ನು ಸಂಗ್ರಹ ಮಾಡಿ ಮಠಕ್ಕೆ ನೀಡಲಾಗುವುದು, ಈಗಾಗಲೇ ಸಮಾದವರಿಗೆ ವಿಷಯವನ್ನು ಮುಟ್ಟಿಸಲಾಗಿದೆ ಮುಂದಿನ ದಿನದಲ್ಲಿ ತಾಲ್ಲೂಕುವಾರು ಪ್ರವಾಸವನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗುವುದು ಎಂದರು.

 

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಹೆಚ್.ಮಂಜಪ್ಪ, ಕಂದಿಕರೆ ಸುರೇಶಬಾಬು, ಕಲ್ಲೇಶ್ ಸೇರಿದಂತೆ ಜಿಲ್ಲೆಯ ತಾಲ್ಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now