Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಆಗಸ್ಟ್ 24 ರಂದು ಕರ್ನಾಟಕ ಸಂಭ್ರಮ-50, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಕಾರ್ಯಕ್ರಮ

---Advertisement---

 

ಸುದ್ದಿಒನ್, ಚಿತ್ರದುರ್ಗ,ಆಗಸ್ಟ್. 21 : ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಚಿತ್ರದುರ್ಗ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಆಯ್ದ ಐವತ್ತು ಪ್ರೌಢಶಾಲೆಗಳಲ್ಲಿ ಕರ್ನಾಟಕ ಸಂಭ್ರಮ-50, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಧ್ಯೇಯವಾಕ್ಯದೊಂದಿಗೆ ನಾಡಗೀತೆ, ರಾಷ್ಟ್ರಗೀತೆ ಪ್ರಾಯೋಗಿಕ ಗಾಯನ ತರಬೇತಿ, ಕನ್ನಡ ಗೀತಗಾಯನ, ಕವಿಕಾವ್ಯ ಪರಿಚಯ ಹಾಗೂ ಯೋಗ ತರಬೇತಿ ಕಾರ್ಯಕ್ರಮ ಆಗಸ್ಟ್ 24 ರಂದು ಶನಿವಾರ ಬೆಳಿಗ್ಗೆ 8-30 ಗಂಟೆಗೆ ಹಿರೇಗುಂಟನೂರು ಗ್ರಾಮದ ಶ್ರೀ ದ್ಯಾಮಲಾಂಭ ಪ್ರೌಢಶಾಲಾ ಆವರಣದಲ್ಲಿ ಏರ್ಪಡಿಸಲಾಗಿದೆ.

ಹಿರೇಗುಂಟನೂರು ಗ್ರಾ.ಪಂ ಅಧ್ಯಕ್ಷೆ ರಾಧಮ್ಮ.ಜಿ.ಹೇಮಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯಶಿಕ್ಷಕ ಟಿ.ಧನಂಜಯ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಕಂದಾಯ ನಿರೀಕ್ಷಕ ಮೋಹನ್‍ಕುಮಾರ್, ಸಹಶಿಕ್ಷಕರಾದ ತಿಪ್ಪೇಸ್ವಾಮಿ ಕೆ.ಹೆಚ್, ಚಿಕ್ರಪ್ಪನವರ ಸಿದ್ಧನಗೌಡ, ಆರ್.ವಿದ್ಯಾಶ್ರೀ, ದೈಹಿಕಶಿಕ್ಷಕ ಪಿ.ಪುರುಷೋತ್ತಮ, ದ್ವಿ.ದ.ಸ ಎನ್.ಮರುಳಸಿದ್ದಯ್ಯ ಮುಖ್ಯಅತಿಥಿಗಳಾಗಿ ಉಪಸ್ಥಿತರಿರುವರು. ರಂಗನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ, ಸಂಗೀತ ಕಲಾವಿದ ಜಿ.ವಿ.ಮಾರುತೇಶ ಹಾಗೂ ಯೋಗಶಿಕ್ಷಕ ಎಂ.ಬಿ.ಮುರುಳಿ ಇವರು ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.

ವಿದ್ಯಾರ್ಥಿ/ನಿಯರಿಗೆ ಸರ್ಕಾರ ನಿಗಧಿಪಡಿಸಿದ ನಾಡಗೀತೆ, ರಾಷ್ಟ್ರಗೀತೆ, ರೈತಗೀತೆ, ಹುಯಿಲುಗೋಳ ನಾರಾಯಣರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಕುವೆಂಪು ವಿರಚಿತ ಎಲ್ಲಾದರು ಇರು ಎಂತಾದರು ಇರು, ದ.ರಾ.ಬೇಂದ್ರೆಯವರ ಒಂದೇ ಒಂದೇ ಕರ್ನಾಟಕ ಒಂದೇ, ಸಿದ್ಧಯ್ಯ ಪುರಾಣಿಕ ಬರೆದ ಹೊತ್ತಿತೋ ಹೊತ್ತಿತೂ ಕನ್ನಡದ ದೀಪ, ಚನ್ನವೀರ ಕಣವಿಯವರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡದ ಧ್ವನಿಮುದ್ರಿತ ಗೀತೆಗಳೊಂದಿಗೆ ಯೋಗ ತರಬೇತಿ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಕೆ.ಮೋಹನ್‍ಕುಮಾರ್ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...