Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕರ್ನಾಟಕ ವಸತಿ ಶಾಲೆಗಳ 767 ಶಿಕ್ಷಕರ ಹುದ್ದೆಗಳ ನೇರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟ!

---Advertisement---

ಬೆಂಗಳೂರು.ಜುಲೈ.11: ರಾಜ್ಯದ ನಿರುದ್ಯೋಗಿ ಯುವಜನತೆಗೆ ಹಾಗೂ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KEA) ಅಧೀನದಲ್ಲಿ ಬರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ಗ್ರೂಪ್-ಸಿ ವೃಂದದ ಒಟ್ಟು 767 ಶಿಕ್ಷಕರ ಹುದ್ದೆಗಳ ನೇರ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.

ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ವಿಷಯವಾರು ಹುದ್ದೆಗಳ ವಿವರ ಹಾಗೂ ವೇತನ ಶ್ರೇಣಿ:

ನೇಮಕಾತಿ ಮಾಡಿಕೊಳ್ಳಲಾಗುತ್ತಿರುವ ಹುದ್ದೆಗಳು ಮತ್ತು ಅವುಗಳ ಸಂಖ್ಯೆ ಈ ಕೆಳಗಿನಂತಿದೆ. ಈ ಎಲ್ಲಾ ಹುದ್ದೆಗಳಿಗೆ ರೂ. 54175 – 99400 ರ ವರೆಗಿನ (2024ರ ಪರಿಷ್ಕೃತ) ರಾಜ್ಯ ವೇತನ ಶ್ರೇಣಿ ಅನ್ವಯವಾಗಲಿದೆ.

ಕನ್ನಡ ಭಾಷಾ ಶಿಕ್ಷಕರು: 103 ಹುದ್ದೆಗಳು (100 ನಿಯಮಿತ + 03 ಹಿಂಬಾಕಿ)

ಆಂಗ್ಲ ಭಾಷಾ ಶಿಕ್ಷಕರು: 108 ಹುದ್ದೆಗಳು (100 ನಿಯಮಿತ + 08 ಹಿಂಬಾಕಿ)

ಹಿಂದಿ ಭಾಷಾ ಶಿಕ್ಷಕರು: 55 ಹುದ್ದೆಗಳು (50 ನಿಯಮಿತ + 05 ಹಿಂಬಾಕಿ)

ಗಣಿತ ಶಿಕ್ಷಕರು: 103 ಹುದ್ದೆಗಳು (100 ನಿಯಮಿತ + 03 ಹಿಂಬಾಕಿ)

ವಿಜ್ಞಾನ ಶಿಕ್ಷಕರು: 106 ಹುದ್ದೆಗಳು (100 ನಿಯಮಿತ + 06 ಹಿಂಬಾಕಿ)

ಸಮಾಜ ವಿಜ್ಞಾನ ಶಿಕ್ಷಕರು: 154 ಹುದ್ದೆಗಳು (150 ನಿಯಮಿತ + 04 ಹಿಂಬಾಕಿ)

ಗಣಕಯಂತ್ರ (ಕಂಪ್ಯೂಟರ್) ಶಿಕ್ಷಕರು: 57 ಹುದ್ದೆಗಳು (50 ನಿಯಮಿತ + 07 ಹಿಂಬಾಕಿ)

ದೈಹಿಕ ಶಿಕ್ಷಣ ಶಿಕ್ಷಕರು: 81 ಹುದ್ದೆಗಳು (75 ನಿಯಮಿತ + 06 ಹಿಂಬಾಕಿ)

ಒಟ್ಟು ಹುದ್ದೆಗಳು: 767 (725 ನಿಯಮಿತ + 42 ಬ್ಯಾಕ್‌ಲಾಗ್ ಹುದ್ದೆಗಳು)

ಪ್ರಮುಖ ದಿನಾಂಕಗಳು:
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 15.07.2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13.08.2026

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 14.08.2026

ವಯೋಮಿತಿ ಸಡಿಲಿಕೆ (ಗರಿಷ್ಠ ವಯೋಮಿತಿ):

ಸರ್ಕಾರದ ಆದೇಶದಂತೆ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ:

ಸಾಮಾನ್ಯ ಅರ್ಹತೆ (GM) ಅಭ್ಯರ್ಥಿಗಳಿಗೆ: ಗರಿಷ್ಠ 45 ವರ್ಷಗಳು

ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ: ಗರಿಷ್ಠ 48 ವರ್ಷಗಳು

ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ: ಗರಿಷ್ಠ 50 ವರ್ಷಗಳು

ಶೈಕ್ಷಣಿಕ ಅರ್ಹತೆ ಮತ್ತು ಹೆಚ್ಚುವರಿ ಅರ್ಹತೆಗಳು:
ಹುದ್ದೆಗಳಿಗೆ ಅನುಗುಣವಾಗಿ ಸಂಬಂಧಪಟ್ಟ ವಿಷಯಗಳಲ್ಲಿ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಬಿ.ಎಡ್ (B.Ed) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಕಂಪ್ಯೂಟರ್ ಶಿಕ್ಷಕರಿಗೆ ಬಿ.ಇ (ಗಣಕವಿಜ್ಞಾನ/ಮಾಹಿತಿ ವಿಜ್ಞಾನ), ಬಿಸಿಎ (BCA) ಅಥವಾ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್) ವಿದ್ಯಾರ್ಹತೆ ನಿಗದಿಪಡಿಸಲಾಗಿದೆ.

ಅತಿ ಮುಖ್ಯ ಸೂಚನೆ: ಕ್ರಮ ಸಂಖ್ಯೆ 1 ರಿಂದ 6 ರ ವರೆಗಿನ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (TET ಪತ್ರಿಕೆ-2) ಅಥವಾ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (CTET) ಯಲ್ಲಿ ಕಡ್ಡಾಯವಾಗಿ ಅರ್ಹತೆ ಹೊಂದಿರಬೇಕು.

ಅರ್ಜಿ ಶುಲ್ಕದ ವಿವರ:
ಸಾಮಾನ್ಯ ಅರ್ಹತೆ ಮತ್ತು ಇತರೆ ಹಿಂದುಳಿದ ಪ್ರವರ್ಗಗಳು (2A, 2B, 3A, 3B): ರೂ. 750/-

ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಪ್ರವರ್ಗ-1, ಮಾಜಿ ಸೈನಿಕ ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ: ರೂ. 500/-

ವಿಶೇಷ ಚೇತನ ಅಭ್ಯರ್ಥಿಗಳಿಗೆ: ರೂ. 250/- (ಕೇವಲ ಪ್ರಕ್ರಿಯೆ ಶುಲ್ಕ)

ಆಯ್ಕೆ ವಿಧಾನ:
ಅಭ್ಯರ್ಥಿಗಳಿಗೆ ಆಫ್‌ಲೈನ್ ಒ.ಎಂ.ಆರ್ (Offline-OMR) ಮಾದರಿಯಲ್ಲಿ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ ಒಟ್ಟು 2 ಪತ್ರಿಕೆಗಳಿರುತ್ತವೆ:

ಪತ್ರಿಕೆ-1 (ಸಾಮಾನ್ಯ ಜ್ಞಾನ): 100 ಅಂಕಗಳು (ಅವಧಿ: 2 ಗಂಟೆ)

ಪತ್ರಿಕೆ-2 (ನಿರ್ದಿಷ್ಟ ವಿಷಯ): 100 ಅಂಕಗಳು (ಅವಧಿ: 2 ಗಂಟೆ)

ಋಣಾತ್ಮಕ ಮೌಲ್ಯಮಾಪನ (Negative Marking): ಪ್ರತಿ ತಪ್ಪು ಉತ್ತರಕ್ಕೆ 0.25 (ನಾಲ್ಕನೇ ಒಂದು ಭಾಗ) ಅಂಕಗಳನ್ನು ಕಟಾಯಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಕನಿಷ್ಠ ಶೇ. 35 ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿ ಪ್ರಕಟಣೆಯಲ್ಲಿ ಕೋರಲಾಗಿದೆ.

Join WhatsApp

Join Now

Join Telegram

Join Now