ಹಾಸನ: ಸಾಕಷ್ಟು ವಿರೋಧಗಳ ನಡುವೆಯೂ ರಾಜ್ಯ ಸರ್ಕಾರ, ಬಾನು ಮುಷ್ತಾಕ ಅವರಿಗೆ ಆಹ್ವಾನ ನೀಡಿದೆ. ದಸರಾ ಉದ್ಘಾಟನೆಗಾಗಿ ಆಹ್ವಾನ ನೀಡಿದೆ. ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಚಾಮುಂಡೇಶ್ವರಿ ಪ್ರಾಧಿಕಾರದ ಮುಖ್ಯ ಜಾರ್ಯನಿರ್ವಹಣಾಧಿಕಾರಿ ರೂಪಾ ಮತ್ತು ಮೈಸೂರು ಜಿಲ್ಲಾಡಳಿತ ನೇತೃತ್ವದ ತಂಡ ಅಮೀರ್ ಮೊಹಲ್ಲಾದಲ್ಲಿರುವ ಬಾನು ಮುಷ್ತಾಕ ಅವರ ಮನೆಗೆ ಭೇಟಿ ನೀಡಿ, ಕುಟುಂಬ ಸಮೇತ ಬರಬೇಕೆಂದು ಆಹ್ವಾನ ನೀಡಿದೆ. ಮೈಸೂರು ಪೇಟ ಧರಿಸಿ, ಶಾಲು ಹೊದಿಸಿ, ಆನೆ ವಿಗ್ರಹವನ್ನು ನೀಡಿ ಆಹ್ವಾನ ಕೊಟ್ಟಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾನು ಮುಷ್ತಾಕ ಅವರು, ಖಂಡಿತಾ ನನಗೆ ಇದು ಖುಷಿಯ ವಿಚಾರವೇ ಸರಿ. ದಸರಾವನ್ನು ನಾವೂ ಹಲವು ಪ್ರಬೇಧಗಳಲ್ಲಿ ನೋಡಬಹುದಾಗಿದೆ. ನೀವೂ ಚಾಮುಂಡೇಶ್ವರಿ ತಾಯಿ ಅಂತೀರಿ, ನಿಮ್ಮ ಭಾವವನ್ನು ಗೌರವಿಸುತ್ತೇನೆ. ಅನೇಕರು ಇದನ್ನು ನಾಡಹಬ್ಬ ಅಂತಾರೆ, ಅದನ್ನು ಗೌರವಿಸುತ್ತೇನೆ. ನಾಡಹಬ್ಬ, ಚಾಮುಂಡೇಶ್ವರಿ ತಾಯಿ ಎಂದು ಪ್ರೀತಿ, ಅಭಿಮಾನದಿಂದ ಕರಿತೀರಿ.
ಇದು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ನಾಡಿನ ಭಾಗವಾಗಿದೆ. ಹೀಗಾಗಿ ಇದು ನನಗೂ ಪ್ರಿಯವಾಗಿದೆ. ನಾನು ಗೌರವಿಸುವ ಹಬ್ಬವಾಗಿದೆ. ಪ್ರೀತಿಯಿಂದ ಭಾಗಿಯಾಗುವ ಹಬ್ಬವಾಗಿದೆ. ನಾನು ತಂದೆ ತಾಯಿ ಜೊತೆಗೆ ಹಲವು ಬಾರಿ ಜಂಬು ಸವಾರಿ ನೋಡುವುದಕ್ಕೆ ಹೋಗುತ್ತಿದ್ದೆ. ಈಗ ನಾನೇ ದಸರಾ ಉದ್ಘಾಟನೆ ಸಂದರ್ಭದ ಆಹ್ವಾನ ಬಂದಿದೆ. ನನಗೆ ನಿಜಕ್ಕೂ ತುಂಬಾನೇ ಖುಷಿಯಾಗಿದೆ ಎಂದು ಅಧಿಕೃತ ಆಹ್ವಾನದ ಬಳಿಕ ಬಾನು ಮುಷ್ತಾಕ ಮಾತನಾಡಿದ್ದಾರೆ. ಬಾನು ಮುಷ್ತಾಕ ಅವರು ಹಣೆಗೆ ಕುಂಕುಮ ಇಟ್ಟುಕೊಂಡು ಬರಲಿ ಎಂದೇ ಹಲವರು ಒತ್ತಾಯಿಸುತ್ತಿದ್ದಾರೆ.






