ಸುದ್ದಿಒನ್, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯ ಒಟ್ಟು ಸ್ಥಾನಗಳು ಹಾಗೂ ವರ್ಗವಾರು ಮೀಸಲಾತಿಯನ್ನು ನಿಗದಿಪಡಿಸಿ ರಾಜ್ಯ ಸರ್ಕಾರವು ಅಧಿಕೃತ ರಾಜ್ಯಪತ್ರದಲ್ಲಿ ವಿಶೇಷ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 162ರ ಅನ್ವಯ ಈ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಚಿತ್ರದುರ್ಗ ಜಿಲ್ಲಾ ಪಂಚಾಯಿತಿಗೆ ಒಟ್ಟು 37 ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಇವುಗಳಲ್ಲಿ ಶೇಕಡಾ 50ಕ್ಕೂ ಹೆಚ್ಚು ಅಂದರೆ ಒಟ್ಟು 19 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮೀಸಲಾತಿಯ ವಿವರ:
ಒಟ್ಟು ಸ್ಥಾನಗಳು: 37 (ಇದರಲ್ಲಿ ಮಹಿಳೆಯರಿಗೆ 19 ಸ್ಥಾನಗಳು)
ಅನುಸೂಚಿತ ಜಾತಿ (SC): ಒಟ್ಟು 9 ಸ್ಥಾನಗಳು (4 ಮಹಿಳೆಯರಿಗೆ ಮೀಸಲು)
ಅನುಸೂಚಿತ ಪಂಗಡ (ST): ಒಟ್ಟು 7 ಸ್ಥಾನಗಳು (4 ಮಹಿಳೆಯರಿಗೆ ಮೀಸಲು)
ಹಿಂದುಳಿದ ವರ್ಗ ‘ಅ’ (BCM-A): ಒಟ್ಟು 2 ಸ್ಥಾನಗಳು (1 ಮಹಿಳೆಗೆ ಮೀಸಲು)
ಹಿಂದುಳಿದ ವರ್ಗ ‘ಬ’ (BCM-B): 0 ಸ್ಥಾನ
ಸಾಮಾನ್ಯ ವರ್ಗ (General): ಒಟ್ಟು 19 ಸ್ಥಾನಗಳು (9 ಮಹಿಳೆಯರಿಗೆ ಮೀಸಲು)
ಸರ್ಕಾರವು ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಗಳನ್ನು ರದ್ದುಪಡಿಸಿ ಈ ನೂತನ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿ ಆದೇಶಿಸಿದೆ. ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣಾ ಕಣಕ್ಕೆ ಈ ಮೀಸಲಾತಿ ಪ್ರಕಟಣೆ ಮೂಲಕ ವೇದಿಕೆ ಸಜ್ಜಾಗಿದೆ.












