Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಅಧಿಸೂಚನೆ ಪ್ರಕಟ

---Advertisement---

ಸುದ್ದಿಒನ್,ಬೆಂಗಳೂರು,ಜೂನ್.1: ರಾಜ್ಯ ರಾಜಕಾರಣದಲ್ಲಿ ಮತ್ತೆ ಚುನಾವಣಾ ಕಣ ಕಾವೇರಿದೆ. ಕರ್ನಾಟಕ ವಿಧಾನಪರಿಷತ್‌ನ 7 ತೆರವಾಗಲಿರುವ ಸ್ಥಾನಗಳಿಗೆ ಚುನಾವಣೆಯ ಅಧಿಕೃತ ಬಿಗ್ ಅಪ್ಡೇಟ್‌ ಹೊರಬಿದ್ದಿದೆ. ಈ ಹೈವೋಲ್ಟೇಜ್‌ ಚುನಾವಣೆಗೆ ಇಂದಿನಿಂದಲೇ (ಜೂನ್ 1) ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಭರ್ಜರಿ ಪೈಪೋಟಿ ಶುರುವಾಗಿದೆ.

ವಿಧಾನಸಭೆ ಕಾರ್ಯದರ್ಶಿಯೂ ಆಗಿರುವ ಚುನಾವಣಾಧಿಕಾರಿ ಎಂ.ಕೆ. ವಿಶಾಲಕ್ಷಿ ಅವರು ಈ ಕುರಿತು ಅಧಿಕೃತ ನೋಟಿಫಿಕೇಶನ್ ಹೊರಡಿಸಿದ್ದು, ಜೂನ್ 8ರವರೆಗೆ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರಮುಖ ದಿನಾಂಕಗಳು ಇಂತಿವೆ:

ನಾಮಪತ್ರ ಸಲ್ಲಿಕೆಗೆ ಕಡೆ ದಿನ: ಜೂನ್ 8, 2026

ಪರಿಶೀಲನೆ: ಜೂನ್ 9

ಹೆಸರು ಹಿಂಪಡೆಯಲು ಕೊನೆ ದಿನ: ಜೂನ್ 11

ಮತದಾನದ ದಿನ: ಜೂನ್ 18 (ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ)

ಫಲಿತಾಂಶ: ಜೂನ್ 18ರ ಸಂಜೆ 5 ಗಂಟೆಯಿಂದಲೇ ವೋಟ್ ಕೌಂಟಿಂಗ್ ಶುರು

ಒಂದು ವೇಳೆ ಕಣದಲ್ಲಿ ಕೇವಲ 7 ಅಭ್ಯರ್ಥಿಗಳು ಮಾತ್ರ ಉಳಿದುಕೊಂಡರೆ ಅವರೆಲ್ಲರೂ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಆದರೆ, 7ಕ್ಕಿಂತ ಹೆಚ್ಚು ಜನ ಕಣದಲ್ಲಿದ್ದರೆ ಮಾತ್ರ ಜೂನ್ 18 ರಂದು ಮತದಾನ ನಡೆಯಲಿದೆ.ಬರುವ ಜೂನ್ 30ಕ್ಕೆ ಹಾಲಿ ಇರುವ 7 ಪ್ರಮುಖ ನಾಯಕರ ಅಧಿಕಾರ ಅವಧಿ ಕೊನೆಗೊಳ್ಳುತ್ತಿದೆ. ಕಾಂಗ್ರೆಸ್‌ನಿಂದ ಗೋವಿಂದರಾಜು, ನಾಸಿರ್ ಅಹಮದ್, ಬಿ.ಕೆ. ಹರಿಪ್ರಸಾದ್ ಹಾಗೂ ತಿಪ್ಪಣ್ಣಪ್ಪ ನಿವೃತ್ತರಾಗುತ್ತಿದ್ದರೆ, ಬಿಜೆಪಿಯಿಂದ ಎಂಟಿಬಿ ನಾಗರಾಜ್, ಸುನೀಲ್ ವಲ್ಯಾಪುರೆ ಮತ್ತು ಪ್ರತಾಪ್ ಸಿಂಹ ನಾಯಕ್ ಅವರ ಅವಧಿ ಮುಗಿಯುತ್ತಿದೆ.

Join WhatsApp

Join Now

Join Telegram

Join Now