ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ವಿಚಾರ ಅಂದ್ರೆ ಅದುವೆ ನಟಿಗೆ ನಿರ್ಮಾಪಕ ಕೊಟ್ಟ ಲೈಂಗಿಕ ಕಿರುಕುಳದ ಬಗ್ಗೆ. ಇದೀಗ ಪೊಲೀಸರು ಆ ನಟಿಗೂ ನೋಟೀಸ್ ನೀಡಿದ್ದು, ದಾಖಲೆಗಳ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಅರವಿಂದ್ ರೆಡ್ಡಿ ವಿರುದ್ಧ ನಟಿ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿ, ದೂರು ನೀಡಿದ್ದರು. ನಟಿಯ ದೂರಿನ ಅನ್ವಯ ಪೊಲೀಸರು ಅರವಿಂದ್ ರೆಡ್ಡಿ ಅವರನ್ನು ಅರೆಸ್ಟ್ ಕೂಡ ಮಾಡಿದ್ದರು. ಜಾಮೀನಿನ ಮೇಲೆ ಹೊರ ಬಂದ ಅರವಿಂದ್ ರೆಡ್ಡಿ ನಟಿಯ ಮೇಲೆ ಆರೋಪ ಮಾಡಿದ್ದರು. ಲೀವಿ ಇನ್ ನಲ್ಲಿದ್ದೆವು, ಮದುವೆ ಆಗೋಣಾ ಎಂದಿದ್ದಕ್ಕೆ ಇಷ್ಟೆಲ್ಲಾ ಆರೋಪ ಮಾಡಿ, ದೂರು ನೀಡಿದ್ದಾರೆ ಎಂಬ ಹೇಳಿಕೆಯನ್ನ ನೀಡಿದ್ದರು. ಅಷ್ಟೇ ಅಲ್ಲದೆ ಕೋಟ್ಯಾಂತರ ರೂಪಾಯಿ ಗಿಫ್ಟ್ ಮಾಡಿದ್ದೇ. ಕಾರು ಕೊಡಿಸಿದ್ದೀನಿ, ಮನೆ ಇಂಟಿರಿಯರ್ ಎಲ್ಲಾ ಮಾಡಿಸಿದ್ದೇನೆ ಎಂದು ಆರೋಪ ಮಾಡಿದ್ದರು.
ಅದಕ್ಕೆ ನಟಿಯೂ ಬೇಸರ ವ್ಯಕ್ತಪಡಿಸಿ, ಅರವಿಂದ್ ರೆಡ್ಡಿ ಅವರು ನನ್ನ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ನಾನು ಎಷ್ಟೇ ದೂರ ಸರಿದರು ಪದೇ ಪದೇ ಟಾರ್ಚರ್ ನೀಡಿ, ಸಲುಗೆಯಿಂದ ಇರುವಂತೆ ಟಾರ್ಚರ್ ಮಾಡುತ್ತಿದ್ದರು ಎಂದು ದೂರಿದ್ದಾರೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದು, ಸೂಕ್ತ ದಾಖಲೆಗಳೊಂದಿಗೆ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಈ ಕೇಸ್ ಗೆ ಸಂಬಂಧಿಸಿದಂತೆ ಏನೆಲ್ಲಾ ದಾಖಲೆಗಳು ಇದಾವೆ ಅಥವಾ ಅರವಿಂದ್ ರೆಡ್ಡಿ ಮಾಡಿದ ಆರೋಪಕ್ಕೆ ಏನೆಲ್ಲಾ ಸಾಕ್ಷಿಗಳಿದ್ದಾವೆ ಎಂಬುದೆಲ್ಲವನ್ನು ತರುವಂತೆ ಸೂಚನೆ ನೀಡಿದ್ದಾರೆ.















