ಪ್ಲೇ ಆಫ್ ಬಗ್ಗೆ ಸಿಕ್ಕಿಲ್ಲ ಇನ್ನು ಕ್ಲಾರಿಟಿ… RCB ಕನಸು ನನಸಾಗುತ್ತಾ..?

 

 

ಚುನಾವಣಾ ಬಿಸಿಯ ನಡುವೆಯೂ ಐಪಿಎಲ್ ಫೀವರ್ ಮಾತ್ರ ಜಾಸ್ತಿನೇ ಇದೆ. ಅದರಲ್ಲೂ ಈ ಬಾರಿಯ ಆರ್ಸಿಬಿ ಮ್ಯಾಚ್ ನೋಡುತ್ತಿದ್ದರೆ ಆಗಾಗ ಆ ಫೀವರ್ ಏರುವುದು ಇಳಿಯುವುದು ಮಾಡುತ್ತಾ ಇದೆ. ಉದರ ನಡುವೆ ಪ್ಲೇ ಆಫ್ ಬಗ್ಗೆಯೂ ಕ್ರಿಕೆಟ್ ಪ್ರಿಯರಿಗೆ ಟೆನ್ಶನ್ ಆಗಿದೆ. ಯಾಕಂದ್ರೆ ಪ್ಲೇ ಆಫ್ ಬಗ್ಗೆ ಇನ್ನು ಯಾವುದೇ ಕ್ಲಾರಿಟಿ ಸಿಗುತ್ತಿಲ್ಲ.

ನಾಲ್ಕು ಸ್ಥಾನಕ್ಕಾಗಿ ಏಳು ತಂಡಗಳ ನಡುವೆ ಸಿಕ್ಕಾಪಟ್ಟೆ ಫೈಟ್ ಇದೆ. ಎಲ್ಲಾ ತಂಡಗಳು ಈಗಾಗಲೇ 9-10 ಪಂದ್ಯಗಳನ್ನು ಆಡಿವೆ. ಪಂದ್ಯಗಳು, ಸೋಲು ಗೆಲುವನ್ನು ನೋಡ್ತಾ ಇದ್ರೆ ಈ ಪ್ಲೇ ಆಫ್ ಸಿಗುವುದು ಅಷ್ಟು ಸುಲಭವಲ್ಲ. ಈಗಾಗಲೇ ಆರ್ಸಿಬಿ 9 ಪಂದ್ಯಗಳನ್ನು ಆಡಿದೆ. ಅದರಲ್ಲಿ 5 ಪಂದ್ಯಗಳನ್ನು ಗೆದ್ದಿದೆ. ಆದ್ರೆ ಆರ್ಸಿಬಿ ಪ್ಲೇ ಆಫ್ ಕನಸು ನನಸಾಗಬೇಕು ಎಂದರೆ ಇನ್ನು ಮೂರು ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಆಡುವ ಐದು ಪಂದ್ಯದಲ್ಲಿ ಮೂರು ಪಂದ್ಯಗಳ ಮೇಲೆ ಹೆಚ್ಚು ಗಮನ ಕೊಡಬೇಕಿದೆ.

ಗುಜರಾತ್ ಟೈಟನ್ಸ್ ಮಾತ್ರ ಪ್ಲೇ ಆಫ್ ಕನಸಿಗೆ ತೀರಾ ಸನಿಹದಲ್ಲಿದೆ. ಈ ಟೀಂ ಕೂಡ ಎರಡು ಪಂದ್ಯಗಳನ್ನು ಗೆದ್ದರೆ ಮಾತ್ರ ಅಧಿಕೃತವಾಗಿ ಪ್ಲೇ ಆಫ್ ಕನಸು ನನಸಾಗಲಿದೆ. ಚೆನ್ನೈ ಹಾಗೂ ಲಕ್ನೋ ಕೂಎ ಪ್ಲೇ ಆಫ್ ಕನಸನ್ನು ಕಂಡಿದೆ.

Share This Article
Leave a Comment

Leave a Reply

Your email address will not be published. Required fields are marked *