ಸಾಮಾನ್ಯವಾಗಿ ಕೆಲವೊಬ್ಬರಿಗೆ ಕೆಮ್ಮು ಆದ್ರೆ ತಿಂಗಳು ಗಟ್ಟಲೇ ಕಡಿಮೆ ಆಗುವುದೇ ಇಲ್ಲ. ಎಷ್ಟೇ ಮಾತ್ರೆಗಳನ್ನ ನುಂಗಿದರು ವಾಸಿಯಾಗುವುದೇ ಇಲ್ಲ. ಕೆಮ್ಮಿ ಕೆಮ್ಮಿ ಅವರೇ ಸುಸ್ತಾಗಿ ಬಿಡಬೇಕು. ಈ ರೀತಿ ಸಮಸ್ಯೆ ಇರುವವರು ಒಂದು ಮನೆ ಮದ್ದನ್ನ ಹೇಳ್ತೀವಿ ಟ್ರೈ ಮಾಡಿ.

ವೀಲಕ್ಯದೆಲೆಯನ್ನ ಸಾಮಾನ್ಯವಾಗಿ ಊಟವಾದ ಮೇಲೆ ಜಗಿಯುವ ಅಭ್ಯಾಸ ಹಲವರಿಗೆ ಇರುತ್ತದೆ. ಆದರೆ ಕೆಮ್ಮಿನ ಸಮಸ್ಯೆ ಇರುವವರು ಈ ರೀತಿ ಮಾಡಿ. ವೀಳ್ಯದೆಲೆಯಲ್ಲಿ ಸಾಕಷ್ಟು ಔಷಧೀಯ ಗುಣವಿರುತ್ತದೆ. ಎರಡು ವೀಳ್ಯದೆಲೆಯನ್ನು ತೊಳೆದು, ಚೂರು ಚೂರು ಮಾಡಿಕೊಳ್ಳಿ. ಬಳಿಕ ಕಲ್ಲು ಅಥವಾ ಏನಾದರೊಂದರಲ್ಲಿ ಜಜ್ಜಿ. ಅದರಿಂದ ರಸವನ್ನು ಒಂದು ಬಟ್ಟಲಿಗೆ ಹಾಕಿಕೊಳ್ಳಿ. ಅರ್ಧದಿಂದ ಮುಕ್ಕಾಲು ಸ್ಪೂನ್ ಸಿಗಬಹುದು. ಇದಕ್ಕೆ ಈರುಳ್ಳಿಯನ್ನ ಬಳಕೆ ಮಾಡಿಕೊಳ್ಳಬೇಕು.

ಮಕ್ಕಳಲ್ಲಿ ಕಫ ಏನಾದರೂ ಹೆಚ್ಚಾದಲ್ಲಿ, ಈರುಳ್ಳಿಯನ್ನ ಬಳಕೆ ಮಾಡಿಕೊಳ್ಳಬಹುದು. ಇದನ್ನ ಬಳಕೆ ಮಾಡುವ ವಿಧಾನ ನೋಡಿಕೊಳ್ಳಿ. ಸಣ್ಣ ಗಾತ್ರದ ಈರುಳ್ಳಿಯಲ್ಲಿ ಅರ್ಧ ಓಳು ತೆಗೆದುಕೊಳ್ಳಿ. ಅದನ್ನ ಒಂದು ಸ್ಪೂನ್ ನಲ್ಲಿ ಚುಚ್ಚಿ, ಬೆಂಕಿಯಲ್ಲಿ ಸುಡಿ. ಆ ಕಡೆ ಈ ಕಡೆ ಕಪ್ಪಾಗುವಷ್ಟು ಸುಟ್ಟಿದರು ಸಾಕು. ಬಳಿಕ ಈರುಳ್ಳಿಯನ್ನು ಜಜ್ಜಿಕೊಳ್ಳಿ. ಚೆನ್ನಾಗಿ ಜಜ್ಜಿ ಅದರಿಂದ ಬರುವ ರಸವನ್ನು ವೀಳ್ಯದೆಲೆ ರಸದ ಜೊತೆಗೆ ಮಿಕ್ಸ್ ಮಾಡಿ. ಒಂದು ಟೇಬಲ್ ಸ್ಪೂನ್ ಜೇನು ತುಪ್ಪ ಕೂಡ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮಕ್ಕಳಲ್ಲಿ ಹೆಚ್ಚು ಕೆಮ್ಮಾದಾಗ ದಿನಕ್ಕೆ ಮೂರು ಟೈಮ್ ನಂತೆ ಕುಡಿಸಿ. ಇದರಿಂದ ಕೆಮ್ಮು ಬೇಗನೆ ವಾಸಿಯಾಗುತ್ತದೆ.


