ಇಂದಿನ ಕಾಲದಲ್ಲಿ ಒಂದು ಗಂಟೆ ಕರೆಂಟ್ ಇಲ್ಲದಿದ್ದರೂ, ಮೊಬೈಲ್ ಕೈಯಲ್ಲಿ ಇಲ್ಲದಿದ್ದರೂ ಹಲವರು ಅಸ್ವಸ್ಥರಾಗುತ್ತಾರೆ. ಆದರೆ ಆಂಧ್ರ ಪ್ರದೇಶದ ಶ್ರೀಕಾಕುಲಂ ಸಮೀಪದಲ್ಲಿರುವ ಕೂರ್ಮ ಗ್ರಾಮದಲ್ಲಿ ಇಂದಿಗೂ ವಿದ್ಯುತ್, ಮೊಬೈಲ್ ಹಾಗೂ ಯಂತ್ರಗಳಿಲ್ಲದ ಸರಳ ಜೀವನ ಸಾಗುತ್ತಿದೆ.ಭಾರತದ ಪೂರ್ವ ಭಾಗದ ಬೆಟ್ಟಗಳ ಮಧ್ಯೆ ನೆಲೆಸಿರುವ ಈ ಗ್ರಾಮಕ್ಕೆ ನೇರ ಬಸ್ ಅಥವಾ ಸಾರಿಗೆ ಸೌಲಭ್ಯ ಇಲ್ಲ. ಅಲ್ಲಿಗೆ ಹೋಗಲು ದಾರಿಯಲ್ಲಿ ಸಿಗುವ ವಾಹನಗಳಲ್ಲಿ ಲಿಫ್ಟ್ ಪಡೆದು ತೆರಳಬೇಕಾಗುತ್ತದೆ. ಇದೀಗ ಆ ಭಾಗದಲ್ಲಿ ಡಾಂಬರು ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಈ ಗ್ರಾಮದಲ್ಲಿ ಮನೆಗಳೆಲ್ಲವೂ ಮಣ್ಣಿನಿಂದ ನಿರ್ಮಿಸಲ್ಪಟ್ಟಿವೆ. ಮಣ್ಣು ಮತ್ತು ಸುಣ್ಣ ಬಳಸಿ ಕಟ್ಟಿದ ಮನೆಗಳು ಗ್ರಾಮಕ್ಕೆ ವಿಶಿಷ್ಟ ಸೊಬಗು ನೀಡುತ್ತವೆ. ಕೆಲವರು ಇದನ್ನು “ಶ್ರೀರಾಮ-ಶ್ರೀಕೃಷ್ಣರ ಹಳ್ಳಿ” ಎಂದೂ ಕರೆಯುತ್ತಾರೆ.ಇಲ್ಲಿನ ಜನರು ಗ್ಯಾಸ್ ಸ್ಟೌವ್ ಬಳಸುವುದಿಲ್ಲ. ಅಡುಗೆಗಾಗಿ ಕಟ್ಟಿಗೆ ಒಲೆಗಳನ್ನೇ ಬಳಸುತ್ತಾರೆ. ಹಿಟ್ಟು ರುಬ್ಬುವುದರಿಂದ ಹಿಡಿದು ದೈನಂದಿನ ಕೆಲಸಗಳವರೆಗೆ ಕಲ್ಲಿನ ಉಪಕರಣಗಳೇ ಬಳಸಲಾಗುತ್ತವೆ. ಗ್ರಾಮದಲ್ಲಿ ಗೋಶಾಲೆಯೂ ಇದ್ದು, ಅಲ್ಲೇ ಬೆಳೆದ ಹಣ್ಣು-ತರಕಾರಿಗಳಿಂದ ಆಹಾರ ತಯಾರಿಸಲಾಗುತ್ತದೆ. ಊಟಕ್ಕೂ ಟೇಬಲ್, ಕುರ್ಚಿಗಳ ಬಳಕೆ ಇಲ್ಲ.
ಗ್ರಾಮದ ಮಕ್ಕಳಿಗೆ ವೇದ ಅಧ್ಯಯನವನ್ನೂ ಕಲಿಸಲಾಗುತ್ತದೆ. ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನೇಕ ಮಕ್ಕಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕರ್ನಾಟಕದ ಕೆಲ ವಿದ್ಯಾರ್ಥಿಗಳೂ ಇಲ್ಲಿ ಅಧ್ಯಯನ ಮಾಡುತ್ತಿರುವುದು ವಿಶೇಷ.

ಗ್ರಾಮದಲ್ಲಿ ಮುಖ್ಯವಾಗಿ ತೆಲುಗು ಭಾಷೆ ಮಾತನಾಡಲಾಗುತ್ತದೆ.
ಇಲ್ಲಿ ಉಳಿಯಲು ಹಣ ಪಡೆಯುವುದಿಲ್ಲ. ಬದಲಾಗಿ ಸಾಧ್ಯವಾದಷ್ಟು ಸೇವೆ ಮಾಡುವ ಸಂಪ್ರದಾಯವಿದೆ. ಗ್ರಾಮಕ್ಕೆ ಭೇಟಿ ನೀಡುವವರು ಪ್ಲಾಸ್ಟಿಕ್ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು, ಮೊಬೈಲ್ ಬಳಕೆ ಮಾಡಬಾರದು ಹಾಗೂ ಅಲ್ಲಿನ ವಸ್ತುಗಳನ್ನು ಅನುಮತಿ ಇಲ್ಲದೆ ಬಳಸಬಾರದು ಎಂಬ ನಿಯಮಗಳಿವೆ.Srikakulam ಸಮೀಪದ ಈ ವಿಶಿಷ್ಟ ಗ್ರಾಮಕ್ಕೆ ಭೇಟಿ ನೀಡಿದವರು, “ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ನಿಜವಾದ ಸರಳ ಜೀವನವನ್ನು ಅರಿಯಬೇಕೆಂದರೆ ಈ ಹಳ್ಳಿಯನ್ನು ನೋಡಲೇಬೇಕು” ಎಂದು ಹೇಳುತ್ತಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















