ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿರುವ ಸಿ ಎಂ ಇಬ್ರಾಹಿಂ ಇದೀಗ ಜೆಡಿಎಸ್ ಸೇರುವುದು ಖಾತರಿಯಾಗಿದೆ. ಹಲವು ಷರತ್ತುಗಳನ್ನು ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ್ದಾರೆ.

ನಾನು ಯಾವ ಷರತ್ತು ಹಾಕಿಲ್ಲ. ಅದು ನನ್ನ ಮನೆ. ನನ್ನ ಮನೆಯಲ್ಲೇನಾದ್ರೂ ಷರತ್ತು ಹಾಕ್ತೀನೆರ್ರಿ. ಎಲ್ಲಿ ಬಾಗಿಲಿದೆ, ಕಿಟಕಿ ಇದೆ, ದೇವರ ಮನೆ ಯಾವುದು ಗೊತ್ತಿರಲ್ವಾ. ನನ್ನ ಮನೆಗೆ ಹೋಗೋದಕ್ಕೆ ದಾರಿ ತೋರಿಸೋದಕ್ಕೆ ಬೇರೆ ಯಾರಾದ್ರೂ ಬೇಕಾಗುತ್ತಾ..? ಕಾಂಗ್ರೆಸ್ ನಲ್ಲಿ ಅಧಿಕಾರ ಕೊಟ್ಟಿಲ್ಲ ಅಂತಲ್ಲ. ಪ್ರಜಾಪ್ರಭುತ್ವದ ತಳಹದಿ ಮೇಲೆ ಲೀಡರ್ ನ ಆರಿಸಬೇಕಿತ್ತು ಅದನ್ನ ಮಾಡಲಿಲ್ಲ. 25 ಜನ ಇದ್ದೀವಿ ಎಲೆಕ್ಷನ್ ಮಾಡಿ ನಂಗೆ ಮೆಜಾರಿಟಿ ಬಂದ್ರೆ ನನ್ನನ್ನ ಸೆಲೆಕ್ಟ ಮಾಡಿ. ಅದು ಮಾಡದೆ ಇದ್ದಿದ್ದಕ್ಕೆ ನಾನು ಹೊರಗೆ ಬಂದಿದ್ದು.

ಜೆಡಿಎಸ್ ನಲ್ಲಿ ಪ್ರಜಾಪ್ರಭುತ್ವ ಖಂಡಿತ ಇದೆ. ನನ್ನ ಮುಂದಿನ ನಡೆಯನ್ನ ದೇವೇಗೌಡರ ಅವರ ಪಾಲಿಗೆ ಬಿಟ್ಟಿದ್ದೀನಿ. ದೇಶಕ್ಕೆ ಮಾರ್ಗದರ್ಶನ ಕೊಟ್ಟಂತವರು. ಅಜಾತಶತ್ರು, ಉತ್ತಮವಾದಂತ ಹೆಸರು ಗಳಿಸಿರುವವರು. ಇನ್ಮುಂದೆ ನಮ್ಮನಡೆ ಅವರ ಜೊತೆ ಕೂಡಿರುತ್ತೆ. ಅನೇಕ ಜನ ಬರೋದಕ್ಕೆ ತಯಾರಾಗಿದ್ದಾರೆ. ಆದರೆ ನಾನು ಯಾರಿಗೂ ಬಲವಂತ ಮಾಡಲ್ಲ. ಯಾರ್ಯಾರು ಬರ್ತಾವಿದ್ದಾರೋ ಅವರಿಗೆ ಯುಗಾದಿ ತಡುಕು ಮುಗಿದ ಮೇಲೆ ಎಪ್ರಿಲ್ ಮೇ ತಿಂಗಳಲ್ಲಿ ಒಂದು ದೊಡ್ಡ ಪ್ರವಾಹ ಬರುತ್ತೆ. ನಾನು ಹೇಳಿದ್ದೆ ಸ್ವತಂತ್ರವಾಗಿ ಒಂದು ದೊಡ್ಡ ಸರ್ಕಾರ ಮಾಡುವ ಶಕ್ತಿ ಜನತಾದಳಕ್ಕೆ ಬರುವಂತಾಗಬೇಕು.
ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರ ನಿಲುವು, ಅವರ ವಿಚಾರಗಳನ್ನ ಜನರ ಮುಂದೆ ಇಡುತ್ತಿದ್ದಾರೆ. ಅದರಿಂದಲೇ ಸ್ಪಷ್ಟತೆ ಸಿಗುತ್ತಿದೆ ಇದೊಂದು ಜಾತ್ಯಾತೀತ ಪಕ್ಷ ಎಂಬುದು. ನೀವೂ ಏಕಾಂಗಿಯಾಗಿ ಬರ್ತೀರಾ ಅಂತ ಕೇಳಿ ನೋಡಿ ಕುಮಾರಸ್ವಾಮಿ ಅವ್ರು ಈಗ ಏನ್ ಹೇಳ್ತಾರೆ ನೋಡಿವ್ರಂತೆ ಎಂದಿದ್ದಾರೆ.

