Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜೆಡಿಎಸ್ ಹೋಗೋದಕ್ಕೆ ಯಾವ ಷರತ್ತು ಹಾಕಿಲ್ಲ : ಸಿ ಎಂ ಇಬ್ರಾಹಿಂ

Facebook
Twitter
Telegram
WhatsApp

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿರುವ ಸಿ ಎಂ ಇಬ್ರಾಹಿಂ ಇದೀಗ ಜೆಡಿಎಸ್ ಸೇರುವುದು ಖಾತರಿಯಾಗಿದೆ. ಹಲವು ಷರತ್ತುಗಳನ್ನು ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ್ದಾರೆ.

ನಾನು ಯಾವ ಷರತ್ತು ಹಾಕಿಲ್ಲ. ಅದು ನನ್ನ ಮನೆ. ನನ್ನ ಮನೆಯಲ್ಲೇನಾದ್ರೂ ಷರತ್ತು ಹಾಕ್ತೀನೆರ್ರಿ. ಎಲ್ಲಿ ಬಾಗಿಲಿದೆ, ಕಿಟಕಿ ಇದೆ, ದೇವರ ಮನೆ ಯಾವುದು ಗೊತ್ತಿರಲ್ವಾ. ನನ್ನ ಮನೆಗೆ ಹೋಗೋದಕ್ಕೆ ದಾರಿ ತೋರಿಸೋದಕ್ಕೆ ಬೇರೆ ಯಾರಾದ್ರೂ ಬೇಕಾಗುತ್ತಾ..? ಕಾಂಗ್ರೆಸ್ ನಲ್ಲಿ ಅಧಿಕಾರ ಕೊಟ್ಟಿಲ್ಲ ಅಂತಲ್ಲ. ಪ್ರಜಾಪ್ರಭುತ್ವದ ತಳಹದಿ ಮೇಲೆ ಲೀಡರ್ ನ ಆರಿಸಬೇಕಿತ್ತು ಅದನ್ನ ಮಾಡಲಿಲ್ಲ.‌ 25 ಜನ ಇದ್ದೀವಿ ಎಲೆಕ್ಷನ್ ಮಾಡಿ ನಂಗೆ ಮೆಜಾರಿಟಿ ಬಂದ್ರೆ ನನ್ನನ್ನ ಸೆಲೆಕ್ಟ ಮಾಡಿ. ಅದು‌ ಮಾಡದೆ ಇದ್ದಿದ್ದಕ್ಕೆ ನಾನು ಹೊರಗೆ ಬಂದಿದ್ದು.

ಜೆಡಿಎಸ್ ನಲ್ಲಿ ಪ್ರಜಾಪ್ರಭುತ್ವ ಖಂಡಿತ ಇದೆ. ನನ್ನ ಮುಂದಿನ ನಡೆಯನ್ನ ದೇವೇಗೌಡರ ಅವರ ಪಾಲಿಗೆ ಬಿಟ್ಟಿದ್ದೀನಿ. ದೇಶಕ್ಕೆ ಮಾರ್ಗದರ್ಶನ ಕೊಟ್ಟಂತವರು. ಅಜಾತಶತ್ರು, ಉತ್ತಮವಾದಂತ ಹೆಸರು ಗಳಿಸಿರುವವರು. ಇನ್ಮುಂದೆ ನಮ್ಮ‌ನಡೆ ಅವರ ಜೊತೆ ಕೂಡಿರುತ್ತೆ. ಅನೇಕ ಜನ ಬರೋದಕ್ಕೆ ತಯಾರಾಗಿದ್ದಾರೆ. ಆದರೆ ನಾನು ಯಾರಿಗೂ ಬಲವಂತ ಮಾಡಲ್ಲ. ಯಾರ್ಯಾರು ಬರ್ತಾವಿದ್ದಾರೋ ಅವರಿಗೆ ಯುಗಾದಿ ತಡುಕು ಮುಗಿದ ಮೇಲೆ ಎಪ್ರಿಲ್ ಮೇ ತಿಂಗಳಲ್ಲಿ ಒಂದು ದೊಡ್ಡ ಪ್ರವಾಹ ಬರುತ್ತೆ. ನಾನು ಹೇಳಿದ್ದೆ ಸ್ವತಂತ್ರವಾಗಿ ಒಂದು ದೊಡ್ಡ ಸರ್ಕಾರ ಮಾಡುವ ಶಕ್ತಿ ಜನತಾದಳಕ್ಕೆ ಬರುವಂತಾಗಬೇಕು.

ಕರ್ನಾಟಕದಲ್ಲಿ ಕುಮಾರಸ್ವಾಮಿ ಅವರ ನಿಲುವು, ಅವರ ವಿಚಾರಗಳನ್ನ ಜನರ ಮುಂದೆ ಇಡುತ್ತಿದ್ದಾರೆ. ಅದರಿಂದಲೇ ಸ್ಪಷ್ಟತೆ ಸಿಗುತ್ತಿದೆ ಇದೊಂದು ಜಾತ್ಯಾತೀತ ಪಕ್ಷ ಎಂಬುದು. ನೀವೂ ಏಕಾಂಗಿಯಾಗಿ ಬರ್ತೀರಾ ಅಂತ ಕೇಳಿ ನೋಡಿ ಕುಮಾರಸ್ವಾಮಿ ಅವ್ರು ಈಗ ಏನ್ ಹೇಳ್ತಾರೆ ನೋಡಿವ್ರಂತೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ ವಶಕ್ಕೆ 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 :  ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ

ಇದು ಪಿಕ್ ಪಾಕೆಟ್ ಸರ್ಕಾರ : ಹಿರಿಯೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸುದ್ದಿಒನ್, ಹಿರಿಯೂರು, ಏಪ್ರಿಲ್, 19  : ಗ್ಯಾರಂಟಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು  5 ರಿಂದ 6 ಸಾವಿರ ವಸೂಲಿ ಮಾಡುತ್ತಿದ್ದಾರೆ . ಇದು

error: Content is protected !!