Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

EVM ಮಷೀನ್ ಗಳ ಬದಲಾವಣೆಯ ಇಲ್ಲ: ಸ್ಪಷ್ಟ ಪಡಿಸಿದ ಚುನಾವಣಾ ಆಯೋಗ..!

---Advertisement---

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿವೆ. ಪ್ರತಿ ಸಲ ಚುನಾವಣೆ ಮುಗಿದಾಗಲೂ ಇವಿಎಂ ಮಷಿನ್ ವಿಚಾರವಾಗಿ ಸುದ್ದಿಯಾಗುತ್ತೆ, ಚರ್ಚೆಯಾಗುತ್ತೆ. ಇವಿಎಂ ಮಷಿನ್ ಗಳ ಸಮಸ್ಯೆ ಎಂಬ ಆರೋಪ ಕೇಳಿ ಬರುತ್ತೆ. ಈ ಚುನಾವಣೆಯಲ್ಲಾದರೂ ಅದಕ್ಕೊಂದು ಅಂತ್ಯ ಸಿಗುತ್ತೆ ಎನ್ನಲಾಗ್ತಾ ಇತ್ತು. ಆದ್ರೆ ಚುನಾವಣಾ ಆಯೋಗ ಕಡ್ಡಿ ತುಂಡಾದಂತೆ ಉತ್ತರಿಸಿದ್ದು, ಇವಿಎಂ ಮಷಿನ್ ಗಳ ಬದಲಾವಣೆ ಮಾಡಲ್ಲ ಎಂದಿದೆ.

ಇಂದು ವಿಕಾಸಸೌಧದಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿ, ಕಳೆದ ಮೂರು ದಿನಗಳಿಂದ ರಾಜಕೀಯ ಪಕ್ಷಗಳ ಜೊತೆಗೆ ಸಭೆ ನಡೆಸಿದ್ದೇವೆ. ಮೇ 24 ಸರ್ಕಾರದ ಅವಧಿ‌ಮುಗಿಯುವ ಕಾರಣ ಚುನಾವಣಾ ಸಿದ್ಧತೆ ಬಗ್ಗೆ ಚರ್ಚೆ ನಡೆಸಿದ್ದೇವೆ‌. ಗುಜರಾತ್ ನಲ್ಲಿ ಬಳಸಿದ ಇವಿಎಂ ಮಷಿನ್ ಗಳ ಬಳಕೆ ಬೇಡ ಎಂದು ಕಾಂಗ್ರೆಸ್ ಮಾಡಿದ್ದ ಮನವಿಯನ್ನು ತಿರಸ್ಕಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಇವಿಎಂ ಮಷಿನ್ ಗಳ ಬಳಕೆಯನ್ನು ಎಲ್ಲಿಂದಾನೂ, ಯಾರಿಂದಾನೂ ದುರ್ಬಳಕೆ‌ಮಾಡುವುದಕ್ಕೆ ಸಾಧ್ಯವಿಲ್ಲ. ಅವುಗಳನ್ನು ಬದಲಾವಣೆ ಮಾಡುವುದಿಲ್ಲ. ಹಲವು ಬಾರಿ ನಮ್ಮ ಮುಂದೆ ಈ ರೀತಿಯಾದಂತ ಪ್ರಶ್ನೆಗಳು ಬಂದಿವೆ. ಆದರೆ ಮಷಿನ್ ಗಳ ಬದಲಾವಣೆ ಮಾಡಲ್ಲ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...