ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದೆ. ರಾಜಕೀಯ ಪಕ್ಷಗಳು ತಮ್ಮ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿವೆ. ಪ್ರತಿ ಸಲ ಚುನಾವಣೆ ಮುಗಿದಾಗಲೂ ಇವಿಎಂ ಮಷಿನ್ ವಿಚಾರವಾಗಿ ಸುದ್ದಿಯಾಗುತ್ತೆ, ಚರ್ಚೆಯಾಗುತ್ತೆ. ಇವಿಎಂ ಮಷಿನ್ ಗಳ ಸಮಸ್ಯೆ ಎಂಬ ಆರೋಪ ಕೇಳಿ ಬರುತ್ತೆ. ಈ ಚುನಾವಣೆಯಲ್ಲಾದರೂ ಅದಕ್ಕೊಂದು ಅಂತ್ಯ ಸಿಗುತ್ತೆ ಎನ್ನಲಾಗ್ತಾ ಇತ್ತು. ಆದ್ರೆ ಚುನಾವಣಾ ಆಯೋಗ ಕಡ್ಡಿ ತುಂಡಾದಂತೆ ಉತ್ತರಿಸಿದ್ದು, ಇವಿಎಂ ಮಷಿನ್ ಗಳ ಬದಲಾವಣೆ ಮಾಡಲ್ಲ ಎಂದಿದೆ.
ಇಂದು ವಿಕಾಸಸೌಧದಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಮಾತನಾಡಿ, ಕಳೆದ ಮೂರು ದಿನಗಳಿಂದ ರಾಜಕೀಯ ಪಕ್ಷಗಳ ಜೊತೆಗೆ ಸಭೆ ನಡೆಸಿದ್ದೇವೆ. ಮೇ 24 ಸರ್ಕಾರದ ಅವಧಿಮುಗಿಯುವ ಕಾರಣ ಚುನಾವಣಾ ಸಿದ್ಧತೆ ಬಗ್ಗೆ ಚರ್ಚೆ ನಡೆಸಿದ್ದೇವೆ. ಗುಜರಾತ್ ನಲ್ಲಿ ಬಳಸಿದ ಇವಿಎಂ ಮಷಿನ್ ಗಳ ಬಳಕೆ ಬೇಡ ಎಂದು ಕಾಂಗ್ರೆಸ್ ಮಾಡಿದ್ದ ಮನವಿಯನ್ನು ತಿರಸ್ಕಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಇವಿಎಂ ಮಷಿನ್ ಗಳ ಬಳಕೆಯನ್ನು ಎಲ್ಲಿಂದಾನೂ, ಯಾರಿಂದಾನೂ ದುರ್ಬಳಕೆಮಾಡುವುದಕ್ಕೆ ಸಾಧ್ಯವಿಲ್ಲ. ಅವುಗಳನ್ನು ಬದಲಾವಣೆ ಮಾಡುವುದಿಲ್ಲ. ಹಲವು ಬಾರಿ ನಮ್ಮ ಮುಂದೆ ಈ ರೀತಿಯಾದಂತ ಪ್ರಶ್ನೆಗಳು ಬಂದಿವೆ. ಆದರೆ ಮಷಿನ್ ಗಳ ಬದಲಾವಣೆ ಮಾಡಲ್ಲ ಎಂದಿದ್ದಾರೆ.