Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೋದಿಯಿಂದ ಹೊಸ ಯೋಜನೆ ಘೋಷಣೆ : ಯಾರಿಗೆಲ್ಲಾ ಈ ಯೋಜನೆಯ ಹಣ ಸಿಗುತ್ತೆ..?

---Advertisement---

ನವದೆಹಲಿ: ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಸಾನ್ಯ ಜನರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ಹೊಸ ಯೋಜನೆಯಲ್ಲಿ ಸಾಮಾನ್ಯ ಜನರಿಗೆ ಹಣ ಸಿಗಲಿದೆ. ವಿಶ್ವಕರ್ಮ ಯೋಜನೆಯನ್ನು ಘೋಷಣೆ ಮಾಡಿದ್ದು, ಈ ಮೂಲಕ ಯಾರಿಗೆಲ್ಲಾ ಹಣ ಸಿಗಲಿದೆ ಎಂಬ ಮಾಹಿತಿ ಇಲ್ಲಿದೆ.

ವಿಶ್ವಕರ್ಮ ಯೋಜನೆಯೂ ವಿಶ್ವಕರ್ಮ ಪೂಜೆಯ ದಿನ ಆರಂಭವಾಗಲಿದೆ. ಈ ಮೂಲಕ ಶ್ರಮಿಕರು ಮತ್ತು ದಿನಗೂಲಿ ಕಾರ್ಮಿಕರಿಗೆ ಈ ಯೋಜನೆಯಿಂದ ಹಣ ಸಿಗಲಿದೆ. ಈ ಮೂಲಕ ಒಬಿಸಿ ಕಲಾವಿದರ ಅಭಿವೃದ್ಧಿಗಾಗಿ ಸರ್ಕಾರ 14 ಸಾವಿರ ಕೋಟಿ ಅನುದಾನ ನೀಡಲಿದೆ.

ಕಾಲೋನಿಗಳು, ಗುಡಿಸಲುಗಳು, ಬಾಡಿಗೆ ಮನೆಗಳಲ್ಲಿ ವಾಸಿಸುವ ಜನರಿಗೆ ಕೇಂದ್ರವು ಸುಲಭ ಷರತ್ತುಗಳ ಮೇಲೆ ಸಾಲವನ್ನು ನೀಡುತ್ತದೆ. ಬಡ ಕಾರ್ಮಿಕ ವರ್ಗದ ಜನರಿಗೆ ಸುಲಭ ಷರತ್ತುಗಳಲ್ಲಿ ಸಾಲ ಪಡೆಯಲು ಸರ್ಕಾರ ವ್ಯವಸ್ಥೆ ಮಾಡುತ್ತದೆ. ಈ ಯೋಜನೆ ಸೆಪ್ಟೆಂಬರ್‌ನಲ್ಲಿ ಅಂದರೆ ಮುಂದಿನ ತಿಂಗಳು ಆರಂಭವಾಗಲಿದೆ. ಒಟ್ಟಾರೆಯಾಗಿ, ಸರ್ಕಾರವು 13,000 ಕೋಟಿಯಿಂದ 15,000 ಕೋಟಿಗೆ ಸಹಾಯ ಮಾಡುತ್ತದೆ. ಬಟ್ಟೆ ತೊಳೆಯುವವರು, ಕ್ಷೌರಿಕರು, ಅಕ್ಕಸಾಲಿಗರು ಮುಂತಾದ ಹಿಂದುಳಿದ ವರ್ಗದ ಜನರು ಈ ಹೊಸ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...