Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೈಲಿನಲ್ಲಿ ಡಿಜಿಟಲ್ ಟಿಕೆಟ್ ಬಳಸುವವರಿಗೆ ಹೊಸ ನಿಯಮ: ಈ ಟಿಕೆಟ್ ಇನ್ನು ಮಾನ್ಯವಲ್ಲ!

---Advertisement---

ರೈಲು ನಿಲ್ದಾಣಗಳ ಟಿಕೆಟ್ ಕೌಂಟರ್‌ಗಳಲ್ಲಿ ಸಾಲಿನಲ್ಲಿ ನಿಲ್ಲದೇ ಮೊಬೈಲ್ ಮೂಲಕ ಅನ್‌ರಿಸರ್ವ್ಡ್ ಟಿಕೆಟ್ ಬುಕ್ ಮಾಡಿಕೊಳ್ಳುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಮಹತ್ವದ ಸೂಚನೆ ನೀಡಿದೆ. ಇನ್ನು ಮುಂದೆ RailOne ಆ್ಯಪ್‌ನಲ್ಲಿ ಬುಕ್ ಮಾಡಿದ ಮೂಲ (Original) ಡಿಜಿಟಲ್ ಟಿಕೆಟ್ ಮಾತ್ರ ಮಾನ್ಯವಾಗಲಿದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ.

ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಮಹಿಳಾ ಪ್ರಯಾಣಿಕೆಯೊಬ್ಬರು ವಾಟ್ಸ್‌ಆಪ್‌ನಲ್ಲಿ ಬಂದಿದ್ದ ಟಿಕೆಟ್‌ನ ಸ್ಕ್ರೀನ್‌ಶಾಟ್‌ನ್ನು ಟಿಕೆಟ್ ಪರಿಶೀಲಕರಿಗೆ (TTE) ತೋರಿಸಿದ್ದರು. ಪರಿಶೀಲನೆ ವೇಳೆ ರೈಲು ಹೊರಟ ಬಳಿಕವೇ ಟಿಕೆಟ್ ಬುಕ್ ಮಾಡಿರುವುದು ಪತ್ತೆಯಾಗಿದ್ದು, ನಿಯಮ ಉಲ್ಲಂಘನೆಯ ಕಾರಣ ಅವರಿಗೆ ದಂಡ ವಿಧಿಸಲಾಯಿತು. ಈ ಘಟನೆ ಬಳಿಕ ರೈಲ್ವೆ ಇಲಾಖೆ ಡಿಜಿಟಲ್ ಅನ್‌ರಿಸರ್ವ್ಡ್ ಟಿಕೆಟ್ ಬಳಕೆಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಇನ್ನು ಮುಂದೆ ಇವುಗಳಿಗೆ ಮಾನ್ಯತೆ ಇಲ್ಲ
ಪರಿಷ್ಕೃತ ನಿಯಮಗಳ ಪ್ರಕಾರ ಕೆಳಕಂಡ ದಾಖಲೆಗಳನ್ನು ಮಾನ್ಯ ಟಿಕೆಟ್ ಎಂದು ಪರಿಗಣಿಸಲಾಗುವುದಿಲ್ಲ.
ಟಿಕೆಟ್‌ನ ಸ್ಕ್ರೀನ್‌ಶಾಟ್
ಮೊಬೈಲ್‌ನಲ್ಲಿ ಸೇವ್ ಮಾಡಿಕೊಂಡಿರುವ ಟಿಕೆಟ್ ಫೋಟೋ
PDF ರೂಪದಲ್ಲಿರುವ ಟಿಕೆಟ್
WhatsApp ಅಥವಾ ಇತರ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಬಂದಿರುವ ಟಿಕೆಟ್ ಪ್ರತಿಗಳು

ಈ ರೀತಿಯ ದಾಖಲೆಗಳನ್ನು ತೋರಿಸಿ ಪ್ರಯಾಣಿಸಿದರೆ, ಸಂಬಂಧಿತ ಪ್ರಯಾಣಿಕರನ್ನು ಟಿಕೆಟ್ ಇಲ್ಲದೆ ಪ್ರಯಾಣಿಸಿದವರು ಎಂದು ಪರಿಗಣಿಸಿ ನಿಯಮಾನುಸಾರ ದಂಡ ವಿಧಿಸಲಾಗುತ್ತದೆ.
ಮೂಲ ಡಿಜಿಟಲ್ ಟಿಕೆಟ್ ತೋರಿಸುವುದು ಕಡ್ಡಾಯ
ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ ಅದೇ ಮೊಬೈಲ್‌ನಲ್ಲಿ, ಅದೇ ಮೊಬೈಲ್ ಸಂಖ್ಯೆಯ ಮೂಲಕ RailOne ಆ್ಯಪ್ ತೆರೆಯಬೇಕು ಮತ್ತು ಅದರಲ್ಲಿ ಕಾಣಿಸುವ Original Digital Ticket ಅನ್ನು ಟಿಕೆಟ್ ಪರಿಶೀಲಕರಿಗೆ ತೋರಿಸಬೇಕು.

ಬುಕ್ಕಿಂಗ್ ಸಮಯಕ್ಕೂ ಹೊಸ ನಿಯಮ
ಹೊಸ ಮಾರ್ಗಸೂಚಿಗಳ ಪ್ರಕಾರ, ಡಿಜಿಟಲ್ ಅನ್‌ರಿಸರ್ವ್ಡ್ ಟಿಕೆಟ್ ಅನ್ನು ರೈಲು ಹೊರಡುವ ಮುನ್ನವೇ ಹಾಗೂ ಪ್ರಯಾಣಿಕರು ಏರಬೇಕಾದ ಬೋರ್ಡಿಂಗ್ ನಿಲ್ದಾಣದಿಂದಲೇ ಬುಕ್ ಮಾಡಿರಬೇಕು. ರೈಲು ನಿಲ್ದಾಣವನ್ನು ಬಿಟ್ಟ ನಂತರ ಬುಕ್ ಮಾಡಲಾದ ಡಿಜಿಟಲ್ ಟಿಕೆಟ್ ಮಾನ್ಯವಾಗುವುದಿಲ್ಲ.

ಯಾರಿಗೆ ಅನ್ವಯಿಸುತ್ತದೆ?
ಈ ನಿಯಮಗಳು ಅನ್‌ರಿಸರ್ವ್ಡ್ (Unreserved) ಡಿಜಿಟಲ್ ಟಿಕೆಟ್‌ಗಳಿಗೆ ಮಾತ್ರ ಅನ್ವಯಿಸುತ್ತವೆ. ಸ್ಲೀಪರ್, ಎಸಿ ಸೇರಿದಂತೆ ರಿಸರ್ವ್ಡ್ ಟಿಕೆಟ್‌ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ರಿಸರ್ವ್ಡ್ ಟಿಕೆಟ್ ಹೊಂದಿರುವ ಪ್ರಯಾಣಿಕರ ಗುರುತನ್ನು ಆಧಾರ್, ಪ್ಯಾನ್ ಕಾರ್ಡ್ ಅಥವಾ ಇತರೆ ಅಧಿಕೃತ ಗುರುತಿನ ಚೀಟಿಗಳ ಮೂಲಕ ಪರಿಶೀಲಿಸಲಾಗುತ್ತದೆ.

ಹೀಗಾಗಿ ಡಿಜಿಟಲ್ ಅನ್‌ರಿಸರ್ವ್ಡ್ ಟಿಕೆಟ್ ಬಳಸುವ ಪ್ರಯಾಣಿಕರು ಸ್ಕ್ರೀನ್‌ಶಾಟ್ ಅಥವಾ PDF ಮೇಲೆ ಅವಲಂಬಿಸದೇ, RailOne ಆ್ಯಪ್‌ನಲ್ಲಿರುವ ಮೂಲ ಟಿಕೆಟ್‌ನ್ನೇ ಪ್ರಯಾಣದ ವೇಳೆ ಹೊಂದಿರುವುದು ಅತ್ಯಗತ್ಯ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now