Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಮಹೇಶ್ ಮೋಟಾರ್ಸ್ ನಲ್ಲಿ ಹೊಸ ಹೀರೋ ಡೆಸ್ಟಿನಿ 125 ಬಿಡುಗಡೆ

---Advertisement---

ಸುದ್ದಿಒನ್, ಚಿತ್ರದುರ್ಗ, ಜನವರಿ. 30 : ಪ್ರತಿಷ್ಠಿತ ದ್ವಿಚಕ್ರ ವಾಹನ ಕಂಪನಿಯಾದ ಹೀರೊ ಮೋಟೋಕಾರ್ಪ್ ನ ಹೊಸ ಮಾದರಿಯ ದ್ವಿಚಕ್ರ ವಾಹನ ಹೀರೋ ಡೆಸ್ಟಿನಿ 125 ಮಾರುಕಟ್ಟೆ ಬಿಡುಗಡೆ ಮಾಡಲಾಯಿತು.

ನಗರದ ಮಹೇಶ್ ಹೀರೋ ಶೋರೂಮಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ವಾಹನವನ್ನು ಪ್ರಾದೇಶಿಕ ಸಾರಿಗೆ ಇಲಾಖೆಯ ಹಿರಿಯ ನಿರೀಕ್ಷಕ ಮಹಂತೇಶ್ ಬಿಡುಗಡೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದ ಅವರು,
ಹೊಸ ಹೀರೋ ಡೆಸ್ಟಿನಿ 125 ಈಗಾಗಲೇ ದೇಶದಾದ್ಯಂತ ಬಿಡುಗಡೆಯಾಗಿದೆ. ಇಂದು ಚಿತ್ರದುರ್ಗದಲ್ಲಿ ವಾಹನ ಬಿಡುಗಡೆ ಮಾಡಲಾಗುತ್ತಿದೆ. ಈ ವಾಹನ ‘ನಗರ ಪ್ರದೇಶದ ಪ್ರಯಾಣಿಕರ ಅಗತ್ಯತೆ ಪೂರೈಸಲು ಈ ದ್ವಿಚಕ್ರ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ಆಧುನಿಕ ಫೀಚರ್‌ಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದ ನೇರಪ್ರಸಾರದ ವಿಡಿಯೋ

ನಂತರ ಪ್ರಾದೇಶಿಕ ಸಾರಿಗೆ ಇಲಾಖೆಯ ನಿರೀಕ್ಷಕ ಮಹಂತೇಶ್ ಅವರು ಮಾತನಾಡಿ, ಈ ವಾಹನವು ಆಧುನಿಕತೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಸವಾರರ ಸುರಕ್ಷತೆಗೆ ಒತ್ತು ನೀಡಲಾಗಿದೆ. ಜೊತೆಗೆ, ಆರಾಮದಾಯಕ ಸವಾರಿಯ ಅನುಭವ ನೀಡಲಿದೆ’ ಎಂದು ಹೇಳಿದರು.

ಶೋರೂಮ್ ನ ವ್ಯವಸ್ಥಾಪಕ ದೇವೇಂದ್ರ ಅವರು ಮಾತನಾಡಿ, ಅತ್ಯಾಧುನಿಕ ಶೈಲಿ, ಅನುಕೂಲತೆ ಮತ್ತು ಸುಧಾರಿತ ತಂತ್ರಜ್ಞಾನದ ಸಂಕೇತವಾದ ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ ಉದ್ಯಮದ ಗುಣಮಟ್ಟವನ್ನು ಮರು ವ್ಯಾಖ್ಯಾನಿಸುತ್ತದೆ ಮತ್ತು ಹೀರೋ ಮೋಟೋಕಾರ್ಪ್ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಉತ್ತಮ ಮೈಲೇಜ್‌ನೊಂದಿಗೆ, ಈ ಕುಟುಂಬ-ಸ್ನೇಹಿ ಸ್ಕೂಟರ್ ನಾವೀನ್ಯತೆ, ಮೌಲ್ಯ ಮತ್ತು ಗ್ರಾಹಕರಿಗೆ ಸಾಟಿಯಿಲ್ಲದ ಸವಾರಿ ಅನುಭವಕ್ಕೆ ಕಂಪನಿಯ ಬದ್ಧತೆಯನ್ನು ತೋರಿಹೊಂದಿವೆ. ಇದರ ವಿನ್ಯಾಸವು ಅತ್ಯಂತ ಆಕರ್ಷಕ ಮತ್ತು ಅತ್ಯಾಧುನಿಕವಾಗಿದೆ. ಇದು ಕರ್ವಿ ಬಾಡಿವರ್ಕ್ ಮತ್ತು LED ಹೆಡ್‌ಲೈಟ್‌ನಂತಹ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೇ ಟರ್ನ್ ಇಂಡಿಕೇಟರ್‌ಗಳನ್ನು ಏಪ್ರನ್‌ನಲ್ಲಿ ಸುಂದರವಾಗಿ ಸಂಯೋಜಿಸಲಾಗಿದೆ. ಇದರ ಟೈಲ್ ಲೈಟ್ ಕೂಡ ತುಂಬಾ ಸೊಗಸಾಗಿ ಮತ್ತು ವಿಶಿಷ್ಟವಾಗಿದೆ. ಹೀರೋ ಡೆಸ್ಟಿನಿ 125 ಮಾರುಕಟ್ಟೆಯಲ್ಲಿ ಇತರೆ ವಾಹನಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಲಿದೆ. ಸ್ಟೈಲಿಶ್, ಫೀಚರ್-ಲೋಡೆಡ್, ಕಾರ್ಯಕ್ಷಮತೆ ಆಧಾರಿತ ಸ್ಕೂಟರ್‌ಗಾಗಿ ನೋಡುತ್ತಿರುವವರಿಗೆ ಹೀರೋ ಡೆಸ್ಟಿನಿ 125 ಉತ್ತಮ ಆಯ್ಕೆಯಾಗಿದೆ ಎಂದರು.

ಈ ವೇಳೆ ಅಭಿಷೇಕ್ ಮತ್ತು ಮಲ್ಲಿನಾಥ್ ಎಂಬುವವರು ನೂತನ ವಾಹನವನ್ನು ಖರೀದಿಸಿದರು. ಇವರಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಕೀಯನ್ನು ಹಸ್ತಾಂತರಿಸಲಾಯಿತು.

ಹೀರೋ ಮೋಟೋಕಾರ್ಪ್ ತನ್ನ ಹೊಸ ಸ್ಕೂಟರ್ ಹೀರೋ ಡೆಸ್ಟಿನಿ 125 ಸ್ಕೂಟರ್ VX, ZX ಮತ್ತು ZX Plus ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ.

ಬಣ್ಣಗಳು :

VX ರೂಪಾಂತರವು ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಎಟರ್ನಲ್ ವೈಟ್, ರೀಗಲ್ ಬ್ಲಾಕ್, ಗ್ರೂವಿ ರೆಡ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
ZX ರೂಪಾಂತರವು ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ – ಕಾಸ್ಮಿಕ್ ಬ್ಲೂ ಮತ್ತು ಮಿಸ್ಟಿಕ್ ಮೆಜೆಂಟಾ.
ZX Plus ರೂಪಾಂತರವು ಎಟರ್ನಲ್ ವೈಟ್ ಮತ್ತು ರೀಗಲ್ ಬ್ಲಾಕ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

ಹೀರೋ ಡೆಸ್ಟಿನಿ 125 ಸ್ಕೂಟರ್ 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 9 bhp ಪವರ್ ಮತ್ತು 10.4 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸಿವಿಟಿ ಗೇರ್ ಬಾಕ್ಸ್‌ಗೆ ಜೋಡಿಸಲಾಗಿದೆ. ಇದು ಮೃದುವಾದ ಕಾರ್ಯಕ್ಷಮತೆಯನ್ನು ನೀಡುತ್ತದೆ.

VX ರೂಪಾಂತರವು ಎಲ್ಇಡಿ ಬೆಳಕಿನೊಂದಿಗೆ ಡಿಜಿಟಲ್-ಅನಲಾಗ್ ಪರದೆಯನ್ನು ಹೊಂದಿದೆ. ZX ಮತ್ತು ZX Plus ರೂಪಾಂತರಗಳು ಪೂರ್ಣ ಡಿಜಿಟಲ್ ಪರದೆಗಳು, ಸ್ಮಾರ್ಟ್‌ಫೋನ್ ಸಂಪರ್ಕ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಸ್ವಯಂ-ರದ್ದು ಸೂಚಕಗಳು, ಬೂಟ್ ಲ್ಯಾಂಪ್‌ಗಳು ಮತ್ತು ಇತರ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿವೆ. ಇದಲ್ಲದೇ, ZX Plus ರೂಪಾಂತರವು ತಾಮ್ರದ ಕ್ರೋಮ್ ಉಚ್ಚಾರಣೆಗಳು ಮತ್ತು ಮೃದುವಾದ ಬ್ಯಾಕ್‌ರೆಸ್ಟ್ ಅನ್ನು ಸಹ ಹೊಂದಿದೆ.

ವಿಎಕ್ಸ್ ರೂಪಾಂತರದ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ZX ಮತ್ತು ZX Plus ರೂಪಾಂತರಗಳು ಡಿಸ್ಕ್ ಬ್ರೇಕ್ಗಳನ್ನು ಹೊಂದಿವೆ . ಎಲ್ಲಾ ರೂಪಾಂತರಗಳು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಮೊನೊಶಾಕ್ ಸಸ್ಪೆನ್ಶನ್ ಅನ್ನು ಹೊಂದಿದೆ.

ಈ ಕಾರ್ಯಕ್ರಮದಲ್ಲಿ ಶೋರೂಂ ನ ಆಡಳಿತ ಸಿಬ್ಬಂದಿ ವರ್ಗದವರು ಮತ್ತು ಸಾರಿಗೆ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಹಕರು ಹಾಜರಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...