ಧಾರವಾಡ; ಇಲ್ಲಿನ ಜಿಲ್ಲಾಸ್ಪತ್ರೆ ನಿರ್ಮಾಣವಾಗಿ 50 ವರ್ಷಗಳೇ ಕಳೆದಿದೆ. ಧಾರವಾಡ ಜನತೆ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ದಾಂಡೇಲಿ ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿ, ಕಿತ್ತೂರು, ಬೈಲಹೊಂಗಲ ತಾಲೂಕಿನ ಜನರು ಕೂಡ ಬರುತ್ತಾರೆ. ಏನಿಲ್ಲ ಅಂದ್ರು ಪ್ರತಿದಿನ ಸುಮಾರು 1500 ಜನ ಭೇಟಿ ನೀಡುತ್ತಾರೆ. ಆದರೆ ಆಸ್ಪತ್ರೆಯಲ್ಲಿರೋದು ಕೇವಲ 350 ಬೆಡ್ ಮಾತ್ರ. ಹೀಗಾಗಿ ಸ್ಥಳೀಯರಿಂದ ಕೂಡ ಜಿಲ್ಲಾಸ್ಪತ್ರೆಯನ್ನು ವಿಸ್ತರಿಸಬೇಕು ಎಂಬ ಒತ್ತಾಯವಿದೆ.
ಸದ್ಯ ಈಗಿರುವ ಆಸ್ಪತ್ರೆಯ ಜಾಗದಲ್ಲಿಯೇ ವಿಸ್ತರಣೆ ಮಾಡುವುದು ಬಹಳ ಕಷ್ಟವಿದೆ. ಯಾಕಂದ್ರೆ ಪಕ್ಕದಲ್ಲಿಯೇ ಪುರಾತ್ವ ಇಲಾಖೆಯಿದೆ. ಹೀಗಾಗಿ ಜಿಲ್ಲಾ ಆಸ್ಪತ್ರೆಯನ್ನು ನಗರದ ಹೊರ ವಲಯಕ್ಕೆ ಶಿಫ್ಟ್ ಮಾಡಿ, ಅಲ್ಲಿ ವಿಸ್ತರಣೆ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಈ ಸಂಬಂಧ ಸರ್ಕಾರಕ್ಕೂ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.
ಈ ಸಂಬಂಧ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದು, ಈಗ ಇರುವ ಆಸ್ಪತ್ರೆ ಹಳೆ ಬಸ್ ನಿಲ್ದಾಣ ಹಾಗೂ ಸಿಬಿಟಿಗೆ ತೀರಾ ಸಮೀಪವಿದೆ. ಹೀಗಾಗಿ ಇಲ್ಲಿಯೇ ವಿಸ್ತರಣೆ ಮಾಡಬೇಕು ಎನ್ನುವ ಆಗ್ರಹವೂ ಇದೆ. ಆದರೆ ಈಗ ಇರುವ 10 ಎಕರೆ ಜಾಗದಲ್ಲಿ ಎಲ್ಲಾ ಕಡೆಯೂ ಕಟ್ಟಡಗಳು ಭರ್ತಿಯಾಗಿವೆ. ಹೊಸದಾಗಿ ವಿಸ್ತರಣೆ ಅವಕಾಶವೇ ಇಲ್ಲ. ಹೀಗಾಗಿ ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ 30 ಎಜರೆ ಜಾಗ ಇಲ್ಲವೇ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಧಾರವಾಡ – ಬೆಳಗಾವಿ ಹೆದ್ದಾರಿ ಪಕ್ಕದ ಇಪ್ಪತ್ತು ಎಕರೆ ಜಾಗವನ್ನು ನೀಡುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕಾಗಿ 400 ಕೋಟಿ ರೂಪಾಯಿ ಅನುದಾನ ಬೇಕು ಎಂಬ ಬೇಡಿಕೆಯೂ ಇದೆ. ಸರ್ಕಾರದಿಂದ ಇದಕ್ಕೆ ಶೀರ್ಘವೇ ಅನುಮೋದನೆ ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











