ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ ಸಮಸ್ಯೆಯಾಗಬಹುದು. ಹೀಗಾಗಿ ಎಚ್ಚರದಿಂದ ಆರೋಗ್ಯ ನೋಡಿಕೊಳ್ಳಬೇಕಾಗುತ್ತದೆ.
* ಹೊ್ಟೆ ಮತ್ತು ಹೃದಯ ಭಾಗವೂ ಹಲವಾರು ಶಾರೀರಿಕ ಕಾರ್ಯ ವಿಧಾನವನ್ನು ಹೊಂದಿದೆ. ಮಲಬದ್ಧತೆಯಂತ ದೀರ್ಘಕಾಲೊಕ ಸಮಸ್ಯೆಯಿಂದಾಗಿ ಸಮತೋಲನ ಬಿಗಾಡಾಯಿಸುತ್ತದೆ.
* ಮಲಬದ್ಧತೆಯಿಂದಾಗಿ ಅತಿಯಾದ ಒತ್ತಡ ಹೇರು ಪರಿಣಾಮವಾಗಿ ರಕ್ತದೊತ್ತಡವು ಹೆಚ್ಚಾಗುವುದು ಮತ್ತು ಇದರ ಜತೆಗೆ ಹೃದಯದ ಒತ್ತಡ ಕೂಡ.
* ಮಲಬದ್ಧತೆಯಿಂದಾಗಿ ಹೃದಯರಕ್ತನಾಳದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು.
* ಮಲಬದ್ಧತೆಯಿಂದಾಗಿ ತಾತ್ಕಾಲಿಕವಾಗಿ ಹೊಟ್ಟೆ ಮತ್ತು ಎದೆಯಲ್ಲಿ ಒತ್ತಡವು ಹೆಚ್ಚಾಗುವುದು. ಇದರ ಜತೆಗೆ ಅನಿರೀಕ್ಷಿತ ರಕ್ತದೊತ್ತಡವು ಹೃದಯದ ಮೇಲೆ ಒತ್ತಡ ಹಾಕುವುದು.
* ಮಲಬದ್ಧತೆಯಿಂದಾಗಿ ಹೃದಯದ ಸಮಸ್ಯೆಯು ಇರುವವರಲ್ಲಿ ಆರ್ಹೆತ್ಮಿಯಾ ಅಥವಾ ಸ್ಟ್ರೋಕ್ ಉಂಟಾಗಬಹುದು.
* ಜೀರ್ಣಕ್ರಿಯೆ ಸಮಸ್ಯೆಗಳನ್ನು ಸರಿಯಾಗಿ ನಿಭಾಯಿಸಿದರೆ, ಆಗ ಇದರಿಂದ ಸಂಪೂರ್ಣ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಅದರಲ್ಲೂ ಮುಖ್ಯವಾಗಿ ಹೃದಯದ ಆರೋಗ್ಯದ ಮೇಲೆ. ಹೊಟ್ಟೆಯನ್ನು ಆರೋಗ್ಯವಾಗಿಟ್ಟುಕೊಂಡು, ಹೃದಯದ ಸಮಸ್ಯೆ ಯನ್ನು ಕಡಿಮೆ ಮಾಡುವ ವಿಧಾನಗಳು
* ಹಣ್ಣು, ತರಕಾರಿಗಳು, ಇಡೀ ಧಾನ್ಯಗಳಿರುವ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಿ. ಇದರಿಂದ ಕರುಳಿನ ಕ್ರಿಯೆ ಸರಾಗವಾಗುವುದು ಮತ್ತು ಉರಿಯೂತ ತಗ್ಗುವುದು
* ಸರಿಯಾಗಿ ನೀರು ಕುಡಿದರೆ, ಆಗ ಇದರಿಂದ ಮಲವು ಮೆತ್ತಗೆ ಆಗುವುದು ಮತ್ತು ಮಲಬದ್ಧತೆ ಸಮಸ್ಯೆ ಕಡಿಮೆ ಆಗುವುದು.
* ದೈಹಿಕ ಚಟುವಟಿಕೆಯಿಂದಾಗಿ ಜೀರ್ಣಕ್ರಿಯೆಯು ಉತ್ತಮವಾಗುವುದು ಮತ್ತು ಹೃದಯರಕ್ತನಾಳದ ಆರೊಗ್ಯವು ಉತ್ತಮವಾಗಿ, ಒತ್ತಡ ತಗ್ಗುವುದು.