Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನೀಟ್‌ ಫಲಿತಾಂಶ : ರಾಷ್ಟ್ರಮಟ್ಟದ 85ನೇ ರ್ಯಾಂಕ್‌ ದಾಖಲಿಸಿದ ಮಧ್ಯಕರ್ನಾಟಕದ ಏಕೈಕ ಪಿಯು ಕಾಲೇಜು ಚಿತ್ರದುರ್ಗದ “ಎಸ್‌ ಆರ್‌ ಎಸ್‌”

---Advertisement---

ಸುದ್ದಿಒನ್, ಜೂನ್.15 :  ಮೇ  04 ರಂದು ನಡೆದ 2025ನೇ ಸಾಲಿನ ರಾಷ್ಟ್ರಮಟ್ಟದ ವೈದ್ಯಕೀಯ ಅರ್ಹತಾ(ನೀಟ್‌) ಫಲಿತಾಂಶ ಜೂ.14ರ ಶನಿವಾರ ಪ್ರಕಟವಾಗಿದ್ದು, ನಗರದ “ಎಸ್.ಆರ್‌.ಎಸ್‌” ಪಿಯು ಕಾಲೇಜಿನ ವಿದ್ಯಾರ್ಥಿ ಕು. ಆನಂದ್‌ ಎನ್‌ ವೈ ರಾಷ್ಟ್ರಮಟ್ಟದಲ್ಲಿ 85ನೇ ರ್ಯಾಂಕ್‌ ಪಡೆಯುವುದರ ಮೂಲಕ ಮಧ್ಯ ಕರ್ನಾಟಕ ಭಾಗದಲ್ಲೇ ಅತ್ಯುತ್ತಮ ರ್ಯಾಂಕ್‌ ಪಡೆದ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕ್ರಮವಾಗಿ ಕಾಲೇಜಿನ ವಿದ್ಯಾರ್ಥಿಗಳಾದ ನಯನ ಎನ್‌-1194, ಮಹಾಲಕ್ಷ್ಮಿ ಎ-1672, ನಯನ ಬಿ-1925,  ಛಾಯಾ ಟಿ-2855, ಮಲ್ಲಿಕಾರರ್ಜುನ ರೆಡ್ಡಿ ಬಿ-3599, ಮಾನಸಗಂಗಾ ಕೆ ಟಿ-4908, ತಳವಾರ ಪ್ರವೀಣ್‌-6537, ಅಮರೇಶ್‌-8728, ರಾಧಿಕಾ-9857, ಆಲ್‌ ಇಂಡಿಯಾ ರ್ಯಾಂಕ್‌ಗಳನ್ನು  ಪಡೆಯುವುದರ ಮೂಲಕ ಎಸ್‌ ಆರ್‌ ಎಸ್‌ ವಿದ್ಯಾರ್ಥಿಗಳು ಮತ್ತೋಮ್ಮೆ ರಾಷ್ಟ್ರಮಟ್ಟದಲ್ಲಿ ಇತಿಹಾಸ ಬರೆದಿದ್ದಾರೆ. ನಿರಂತರ ತರಬೇತಿಯನ್ನು ಪಡೆದ ಕಾಲೇಜಿನ ಒಟ್ಟು 80 ವಿದ್ಯಾರ್ಥಿಗಳ ಬ್ಯಾಚ್‌ನಲ್ಲಿ 52 ವಿದ್ಯಾರ್ಥಿಗಳು ಅತ್ಯುತ್ತಮ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವುದು ಹರ್ಷದಾಯಕ ಸಂಗತಿ.

ಈ ಅದ್ವಿತೀಯ ಸಾಧನಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ , ಪ್ರಾಂಶುಪಾಲರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಯವರು ಹೃದಯಪೂರ್ವಕವಾಗಿ ಆಭಿನಂದಿಸಿದ್ದಾರೆ..

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment