ದಾವಣಗೆರೆ: ಉಕ್ರೇನ್ ನಲ್ಲಿ ದಾಳಿಗೆ ಬಲಿಯಾದ ನವೀನ್ ಅವರ ಮೃತದೇಹವನ್ನ ಇಂದು ತವರಿಗೆ ತರಲಾಗಿದೆ. ಕುಟುಂಬಸ್ಥರು ಪೂಜಾ ವಿಧಿವಿಧಾನಮುಗಿಸಿ, ಮೆರವಣಿಗೆ ನಡೆಸಿ ಬಳಿಕ ದೇಹವನ್ನ ಮೆಡಿಕಲ್ ಕಾಲೇಜಿಗೆ ದಾನ ಮಾಡಲಿದ್ದಾರೆ.
ಈ ಸಂಬಂಧ ಜಿಲ್ಲೆಯಲ್ಲಿ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಪ್ರಧಾನಿ ಮೋದಿ ವರ್ಚ್ಚಸ್ಸಿಗೆ ಇದು ಉದಾಹರಣೆಯಾಗಿದೆ. ಅಮೆರಿಕಾ ಕೂಡ ತನ್ನ ನಾಗರಿಕರನ್ನ ಕೈ ಬಿಟ್ಟಿದೆ. ಆದರೆ ಭಾರತ ಮಾತ್ರ ತನ್ನ ನಾಗರಿಕರನ್ನ ಕೈ ಬಿಟ್ಟಿಲ್ಲ. ನಮ್ಮ ದುರ್ದೈವ ಯುದ್ಧದಲ್ಲಿ ನವೀನ್ ಮೃತಪಟ್ಟಿದ್ದಾರೆ. ನವೀನ್ ಮೃತದೇಹ ಚಳಗೇರಿಗೆ ತರಲಾಗಿದೆ. ಮೋದಿಯವರ ಭಗೀರಥ ಪ್ರಯತ್ನದಿಂದ ಇದು ಸಾಧ್ಯವಾಗಿದೆ.
ಯಾಕಂದ್ರೆ ಅಲ್ಲಿನ ದೇಶದ ಸಹಕಾರ ಪಡೆಯುವುದು ಅಷ್ಟು ಸುಲಭವಲ್ಲ. ಭಾರತ ಧ್ವಜ ಹಿಡಿದರೆ ಸಾಕು ಬಿಟ್ಟು ಕಳುಹಿಸಿದ್ದಾರೆ. ಮೃತದೇಹ ತರಲು ವಿದೇಶಾಂಗ ಸಚಿವರ ಸಹಕಾರವಿದೆ. ಘಟಬೆ ಬಳಿಕ ನವೀನ್ ಮೃತದೇಹವನ್ನ ಸಂರಕ್ಷಿಸಲಾಗಿತ್ತು.
ಉಕ್ರೇನ್ ನಿಂದ ಬಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಉಕ್ರೇನ್ ವಿದ್ಯಾರ್ಥಿಗಳ ಬಗ್ಗೆ ಮೆಡಿಕಲ್ ಕೌನ್ಸಲ್ ಮಾಡುವ ಚಿಂತನೆ ನಡೆದಿದೆ. ಅಲ್ಲಿ ಕೋರ್ಸ್ ಮುಗಿದರು ಇಲ್ಲಿ ಮತ್ತೆ ಪರೀಕ್ಷೆ ನಡೆಯಬೇಕು. ಎಲ್ಲಾ ರಾಜ್ಯಗಳಲ್ಲೂ ಉಕ್ರೇನ್ ನಿಂದ ಬಂದವರಿದ್ದಾರೆ. ಹೀಗಾಗಿ ಅವರ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದಿದ್ದಾರೆ.