ಮೈಸೂರು: ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆ ಸಿದ್ಧರಾಮನಹುಂಡಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ಸ್ಥಾನಕ್ಕೆ ಚಾಲನೆ ನೀಡಿದ್ರು. ಕಹಳೆ ಊದುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸದಸ್ಯರಾಗುವುದು ಹೆಮ್ಮೆಯ ವಿಚಾರ. 1885ರಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸ್ಥಾಪನೆಯಾಯಿತು. ಭಾರತೀಯರನ್ನು ಸೇರಿಸಿ ಡಾ.ಹ್ಯೂಮ್ ಪಕ್ಷ ಸ್ಥಾಪಿಸಿದ್ದರು. ಡಾ.ಬ್ಯಾನರ್ಜಿ ಕಾಂಗ್ರೆಸ್ ಸ್ಥಾಪನೆ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ರಾಜಕೀಯಕ್ಕಾಗಿ ಉದಯವಾದ ಪಕ್ಷವಲ್ಲ. ಬ್ರಿಟಿಷ್ ಸರ್ಕಾರದಲ್ಲಿ ಭಾರತೀಯರಿಗೆ ನ್ಯಾಯ ಕೊಡಿಸಲು, ಭಾರತೀಯರ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಸ್ಥಾಪನೆ ಆದ ಪಕ್ಷ ಎಂದರು.

ಇದೇ ವೇಳೆ ಸಂವಿಧಾನದ ಬಗ್ಗೆ ಮಾತನಾಡಿ, ಸಂವಿಧಾನ ಬಂದ ಮೇಲೆ ಎಲ್ಲರಿಗೂ ಒಂದೇ ಮತ ಒಂದೇ ಬೆಲೆ ಸಿಗುವಂತಾಯಿತು. ಇದಕ್ಕೆಲ್ಲಾ ಕಾರಣ ಅಂಬೇಡ್ಕರ್ ಅವರು. 1952ರಲ್ಲಿ ಆರಂಭವಾದ ಚುನಾವಣೆ ಈಗಲೂ ಐದು ವರ್ಷಕ್ಕೊಮ್ಮೆ ನಡೆಯುತ್ತೆ. ಸಂಸದ, ಶಾಸಕನಾದ ಬಳಿಕ ನಾನೇ ಮಹಾರಾಜನೆಂದುಕೊಳ್ಳುತ್ತಾನೆ. ಆದ್ರೆ ಆತ ಜನಸೇವಕ ಅನ್ನೋದನ್ನ ಅರ್ಥ ಮಾಡಿಕೊಳ್ಳಲಿ ಎಂದಿದ್ದಾರೆ.

ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಎಳ್ಳಷ್ಟು ಗೌರವವಿಲ್ಲ. ನರೇಂದ್ರ ಮೋದಿ ಪ್ರಧಾನಿ ಆಗಿದ್ದು ಬಿಜೆಪಿಯಿಂದಲ್ಲ ಸಂವಿಧಾನದಿಂದ. ಆರ್ಎಸ್ಎಸ್ ಬಿಜೆಪಿಯವರು ಯಾವಾಗಲು ಜಾತಿವಾದಿಗಳು. ಹೀಗಾಗಿ ನಾನು ಯಾವಾಗಲು ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ವಿರೋಧಿಸುತ್ತೇನೆ. ಅದು ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರ ಪಕ್ಷವಲ್ಲ ಎಂದರು.

