Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನರೇಂದ್ರ ಮೋದಿ ಪ್ರಧಾನಿಯಾಗಿದ್ದು ಸಂವಿಧಾನದಿಂದ ಬಿಜೆಪಿಯಿಂದಲ್ಲ : ಸಿದ್ದರಾಮಯ್ಯ

Facebook
Twitter
Telegram
WhatsApp

ಮೈಸೂರು: ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆ ಸಿದ್ಧರಾಮನಹುಂಡಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ಸ್ಥಾನಕ್ಕೆ ಚಾಲನೆ ನೀಡಿದ್ರು. ಕಹಳೆ ಊದುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸದಸ್ಯರಾಗುವುದು ಹೆಮ್ಮೆಯ ವಿಚಾರ. 1885ರಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್​ ಸ್ಥಾಪನೆಯಾಯಿತು. ಭಾರತೀಯರನ್ನು ಸೇರಿಸಿ ಡಾ.ಹ್ಯೂಮ್ ಪಕ್ಷ ಸ್ಥಾಪಿಸಿದ್ದರು. ಡಾ.ಬ್ಯಾನರ್ಜಿ ಕಾಂಗ್ರೆಸ್ ಸ್ಥಾಪನೆ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ರಾಜಕೀಯಕ್ಕಾಗಿ ಉದಯವಾದ ಪಕ್ಷವಲ್ಲ. ಬ್ರಿಟಿಷ್ ಸರ್ಕಾರದಲ್ಲಿ ಭಾರತೀಯರಿಗೆ ನ್ಯಾಯ ಕೊಡಿಸಲು, ಭಾರತೀಯರ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಸ್ಥಾಪನೆ ಆದ ಪಕ್ಷ ಎಂದರು.

ಇದೇ ವೇಳೆ ಸಂವಿಧಾನದ ಬಗ್ಗೆ ಮಾತನಾಡಿ, ಸಂವಿಧಾನ ಬಂದ ಮೇಲೆ ಎಲ್ಲರಿಗೂ ಒಂದೇ ಮತ ಒಂದೇ ಬೆಲೆ ಸಿಗುವಂತಾಯಿತು. ಇದಕ್ಕೆಲ್ಲಾ ಕಾರಣ ಅಂಬೇಡ್ಕರ್ ಅವರು. 1952ರಲ್ಲಿ ಆರಂಭವಾದ ಚುನಾವಣೆ ಈಗಲೂ ಐದು ವರ್ಷಕ್ಕೊಮ್ಮೆ ನಡೆಯುತ್ತೆ. ಸಂಸದ, ಶಾಸಕನಾದ ಬಳಿಕ ನಾನೇ ಮಹಾರಾಜನೆಂದುಕೊಳ್ಳುತ್ತಾನೆ. ಆದ್ರೆ ಆತ ಜನಸೇವಕ ಅನ್ನೋದನ್ನ ಅರ್ಥ ಮಾಡಿಕೊಳ್ಳಲಿ ಎಂದಿದ್ದಾರೆ.

ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಎಳ್ಳಷ್ಟು ಗೌರವವಿಲ್ಲ. ನರೇಂದ್ರ ಮೋದಿ ಪ್ರಧಾನಿ ಆಗಿದ್ದು ಬಿಜೆಪಿಯಿಂದಲ್ಲ ಸಂವಿಧಾನದಿಂದ. ಆರ್ಎಸ್ಎಸ್ ಬಿಜೆಪಿಯವರು ಯಾವಾಗಲು ಜಾತಿವಾದಿಗಳು. ಹೀಗಾಗಿ ನಾನು ಯಾವಾಗಲು ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ವಿರೋಧಿಸುತ್ತೇನೆ. ಅದು ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರ ಪಕ್ಷವಲ್ಲ ಎಂದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಗೋವಿಂದ ಕಾರಜೋಳರವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಏಪ್ರಿಲ್. 16 : ತಾಯಿಯ ಅಂತ್ಯ ಸಂಸ್ಕಾರ ನಡೆಸಿ ಅಂದೇ ಕೆಲಸದಲ್ಲಿ ನಿರತರಾದ ನರೇಂದ್ರಮೋದಿ ಮೂರನೆ ಬಾರಿಗೆ

ಅಭ್ಯರ್ಥಿ ಗೆಲುವಿಗೆ ಶಕ್ತಿ ಕೇಂದ್ರದ ಪ್ರಮುಖರು ಹಗಲು-ರಾತ್ರಿ ಪ್ರಾಮಾಣಿಕವಾಗಿ ಕೆಲಸ ಮಾಡಿ : ಸಂತೋಷ್‍ ಜಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಏಪ್ರಿಲ್. 16  : ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಕಾಂಗ್ರೆಸ್‍ನವರಿಗೆ ಬೇಕಿಲ್ಲ. ಅವರವರ ಕುರ್ಚಿ ಉಳಿಕೊಳ್ಳುವುದೇ

ವಾಣಿ ವಿಲಾಸ ಸಾಗರ ಜಲಾಶಯದ ನೀರನ್ನ ಖಾಲಿ ಮಾಡಲು ಹುನ್ನಾರ :  ರೈತ ಮುಖಂಡ  ರಮೇಶ್ ಆರೋಪ

ಸುದ್ದಿಒನ್, ಹಿರಿಯೂರು, ಏಪ್ರಿಲ್. 16 : ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯದ ನೀರು ಖಾಲಿ ಮಾಡಲು ಹುನ್ನಾರ ನಡೆಸಲಾಗಿದೆ ಎಂಬುದಾಗಿ  ರೈತ ಮುಖಂಡ ಹಾಗೂವಾಣಿವಿಲಾಸ ಸಾಗರ  ಹಾಗೂ  ಭದ್ರಾ ಮೇಲ್ದಂಡೆ ಅಚುಕಟ್ಟುದಾರ ರೈತಹಿತ ರಕ್ಷಣಾ

error: Content is protected !!