ಶಿವಮೊಗ್ಗ: ಮಂತ್ರಾಲಯದಲ್ಲಿ ರಾಯರ ಮಠ ಕಟ್ಟಲು ಜಾಗ ಕೊಟ್ಟಿದ್ದು ಒಬ್ಬ ಮುಸ್ಲಿಂ ರಾಜ. ನಿಮಗೆ ಮುಸಲ್ಮಾನರು ಬೇಡ ಅನ್ಸಿದ್ರೆ ಆ ಜಾಗ ವಾಪಸ್ಸು ಕೊಟ್ಟು ಬಿಡಿ ಅಂತ ಹೇಳಿದ್ರು. ಈ ವಿಚಾರವಾಗಿ ಮಾತನಾಡಿರುವ ಆರ್ಎಸ್ಎಸ್ ನಾಯಕ ನಾರಾಯಣಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಆ ಜಾಗವನ್ನ ಮುಸಲ್ಮಾನ ರಾಜ ಕೊಟ್ಟಿದ್ದು ಅಂತಾನೇ ಅಂದ್ಕೊಳ್ಳೋಣಾ. ಹಾಗಾದ್ರೆ ಆ ರಾಜಾನಿಗೆ ಆ ಜಾಗ ಹೇಗೆ ಬಂತು. ಈ ಜಾಗ ಮುಸಲ್ಮಾನರದ್ದಾಗಿರಲಿಲ್ಲ. ಹಿಂದೂಗಳದ್ದಾಗಿತ್ತು. ಅವರು ಇರಾನ್ ನಿಂದಲೋ, ಇರಾಕ್ ನಿಂದಲೋ ದಾಳಿಕೋರರಾಗಿ ಬಂದಿದ್ದರು. ದಾಳಿ ಮಾಎಇ ಬೇಕಾದಷ್ಟು ಲೂಟಿ ಮಾಡಿದ್ರು. ಜಾಗವನ್ನ ತೆಗೆದುಕೊಂಡ್ರು. ಮುಸಲ್ಮಾನರಿಗೆ ಬಂದ ಎಲ್ಲಾ ಜಾಗವೂ ಕೂಡ ಈ ದೇಶದ ಜಾಗವೇ. ಮಂತ್ರಾಲಯಕ್ಕೆ ಜಾಗ ಕೊಟ್ಟಂತ ಮುಸಲ್ಮಾನ ಜಾಗ ಕೂಡ ಹಿಂದೂಗಳದ್ದೇ. ಹಿಂದುಸ್ತಾನದ ಜಾಗವನ್ನ ಮಠಕ್ಕೆ ಕೊಟ್ಟಿದ್ದಾರೆ ವಿನಃ ಇರಾನ್ ಇರಾಕ್ ನಿಂದ ತಂದು ಜಾಗ ಕೊಟ್ಟಿಲ್ಲವಲ್ಲ.
ಟಿಪ್ಪು ಸುಲ್ತಾನ್ ಕೂಡ ಶೃಂಗೇರಿಗೆ, ಮೇಲುಕೋಟೆಗೆ ಜಾಗ ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಟಿಪ್ಪು ಸುಲ್ತಾನ್ ಒಬ್ಬ ಸಾಮಾನ್ಯ ಸರದಾರ ಆಗಿದ್ದ. ಆದ್ರೆ ಆ ಬಳಿಕ ಮಾಡಿದ್ದೇನು. ರಾಜರ ಕುಟುಂಬವನ್ನ ಸೆರೆಮನೆಯಲ್ಲಿಟ್ಟು ಎಲ್ಲವನ್ನು ವಶಮಾಡಿಕೊಂಡು ಆ ಜಾಗ ಈ ಜಾಗ ಅಂತ ಕೊಟ್ಟರು. ಕೊಟ್ಟಿದ್ದು ಯಾರ ಜಾಗವನ್ನ ಮೈಸೂರು ಮಹಾರಾಜರ ಜಾಗವನ್ನ . ಸ್ವಂತ ಜಾಗವನ್ನಲ್ಲವಲ್ಲ. ಇಲ್ಲಿ ಈ ರೀತಿ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.