ಕಾಂಗ್ರೆಸ್ ಪಕ್ಷದ ನಾಯಕರಿಗೆ ಆ ಭಯ ಬೆಂಬಿಡದೆ ಕಾಡುತ್ತಿದೆ : ನಳೀನ್ ಕುಮಾರ್ ಕಟೀಲ್

suddionenews
1 Min Read

 

ಬಾಗಲಕೋಟೆ : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ನಿರುದ್ಯೋಗದ ಭೀತಿ ಕಾಡುತ್ತಿದೆ ಎಂದು ಗೇಲಿ ಮಾಡಿದ್ದಾರೆ.

ಜಿಲ್ಲೆಗೆ ಭೇಟಿ ನೀಡಿರುವ ನಳೀನ್ ಕುಮಾರ್ ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಕಾಂಗ್ರೆಸ್ ಪಕ್ಷದ ನಾಯಕರನ್ನ ಕುಟುಕಿದ್ದಾರೆ. ಬಿಜೆಪಿ ಎಲ್ಲಾ ಉಪಚುನಾವಣೆ ಹಾಗೂ ಮಹಾನಗರ ಚುನವಾಣೆಯಲ್ಲಿ ಗೆಲುವು ಕಂಡಿದೆ. ಹೀಗಾಗಿ ಎಲ್ಲಾ ಚುನಾವಣೆಯಲ್ಲೂ ಬಿಜೆಪಿಯೇ ಗೆಲುವು ಸಾಧಿಸಲಿದೆ. ಇದನ್ನ ಕಂಡ ಕಾಂಗ್ರೆಸ್ ಗೆ ಆ ಭಯ ಕಾಡ್ತಿದೆ. ನಾವೆಲ್ಲಿ ಶಾಶ್ವತವಾಗಿ ನಿರುದ್ಯೋಗಿಗಳಾಗುತ್ತಿವೋ ಎಂಬ ಭಯ ಅವರನ್ನ ಕಾಡುತ್ತಿದೆ‌ ಎಂದಿದ್ದಾರೆ.

ಇನ್ನು ಇದೇ ವೇಳೆ 40% ಕಮಿಷನ್ ಬಗ್ಗೆ ಮಾತನಾಡಿದ ಅವರು, 40% ಸರ್ಕಾರದ ತನಿಖೆಗೆ ಆದೇಶ ವಿಚಾರಕ್ಕೆ ಪಾರದರ್ಶಕ ವ್ಯವಸ್ಥೆ ಅಡಿ ನಮ್ಮ ಸರ್ಕಾರ ನಡೆಯುತ್ತದೆ. ಈ ರೀತಿಯಾದ ಯಾವುದೇ ದೂರುಗಳು ಬಂದರು ನಮ್ಮ ಸಿಎಂ ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ. ಸುಳ್ಳು ಸುದ್ದಿ ಎಷ್ಟೇ ಹೇಳಿದರೂ ದಾಖಲೆಗಳನ್ನ ಕೊಡಬೇಕು. ದಾಖಲೆ ಇಲ್ಲದೆ ದೂರನ್ನ ಕೊಟ್ಟರು ಸಿಎಂ ಅದರ ತನಿಖೆಗೆ ಮುಂದಾಗಿದ್ದಾರೆ.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಆರೋಪಗಳು ಬಂದಿದ್ದವು. ಅವರು ಎಲ್ಲಿ ತನಿಖೆಗೆ ಆದೇಶ ಮಾಡಿದ್ದಾರೆ..? ಯಾವುದೆಲ್ಲಾ ತನಿಖೆಯಾಗಿದೆ..? ಗುತ್ತಿಗೆದಾರರಿಗೆ ಬಿಲ್ ಆಗ್ತಿಲ್ಲ ಎಂಬ ಆಧಾರ, ದಾಖಲೆಗಳಿಲ್ಲದೆ ಸಂಘಟನೆಯ ಅಧ್ಯಕ್ಷ ಆಗಲೀ, ಸಂಘಟನೆ ಇರಲಿ ದೂರಿದರೇ ಪ್ರಯೋಜನವಿಲ್ಲ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *