Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಕ್ಟೋಬರ್ 13 ರಂದು ನಾಡದೊರೆ  ರಾಜವೀರ ಮದಕರಿನಾಯಕರ ಜಯಂತ್ಯೋತ್ಸವ : ಎಲ್ಲಾ ಸಮಾಜದವರನ್ನು ಪರಿಗಣನೆಗೆ ತೆಗೆದುಕೊಂಡು ಆಚರಿಸಿ : ಸಿ.ಟಿ.ಕೃಷ್ಣಮೂರ್ತಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 11 : ‌ಅಕ್ಟೋಬರ್ 13 ರಂದು ನಡೆಯಲಿರುವ ಮದಕರಿ ನಾಯಕರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ಸಮಾಜದವರನ್ನು ಪರಿಗಣನೆಗೆ ತೆಗೆದುಕೊಂಡು ಆಚರಣೆಯನ್ನು ಮಾಡುವಂತೆ ನಗರಸಭೆಯ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ ಸಮಾಜದ ಮುಖಂಡರನ್ನು ಆಗ್ರಹಿಸಿದ್ದಾರೆ.

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗವನ್ನಾಳಿದವರಲ್ಲಿ ಮದಕರಿ ನಾಯಕರು ಪ್ರಮುಖರಾಗಿದ್ದಾರೆ. ಇಂತಹ ಜನ್ಮ ದಿನೋತ್ಸವವನ್ನು ಕಾಂತರಾಜ್ ಬಳದವರು ಆಚರಣೆ ಮಾಡುತ್ತಿರುವುದು ಶ್ಲಾಘನೀಯವಾದದು, ನಾನು 1988 ರಿಂದಲೂ ಕೋಟೆಯ ಸಂಪರ್ಕದಲ್ಲಿದ್ದೇನೆ, ಮದಕರಿನಾಯಕರು ಚಿತ್ರದುರ್ಗಕ್ಕೆ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ. ಮಠವನ್ನು ಕಟ್ಟಿಸಿದ್ದಾರೆ. ಕೆರಯನ್ನು ನಿರ್ಮಾಣ ಮಾಡಿದ್ದಾರೆ. ಏಕನಾಥೇಶ್ವರಿ ಅಮ್ಮನವರ ದೇವಾಲಯವನ್ನು ಸಹಾ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಚಿತ್ರದುರ್ಗವನ್ನು ಸುಮಾರು 211 ವರ್ಷ ವಿವಿಧ ರಾಜರು ಸಾಮಂತರು ಆಳ್ವಿಕೆಯನ್ನು ನಡೆಸಿದ್ದಾರೆ ಎಂದರು.

ಮದಕರಿನಾಯಕರು ಯುದ್ದ ಪ್ರಿಯರಾಗಿದ್ದರು. ತಮ್ಮ ಆಡಳಿತದ ಸಮಯದಲ್ಲಿ ರಾಜ್ಯವನ್ನು ವಿಸ್ತರಣೆ ಮಾಡಿದ್ದರು, ಮದಕರಿನಾಯಕರು ಯಾವ ಜನಾಂಗಕ್ಕೂ ಸಹಾ ಸೇರಿದವರಲ್ಲ ಎಲ್ಲಾ ಜನಾಂಗದವರನ್ನು ಸ್ನೇಹದಿಂದ ನೋಡುವುದರ ಮೂಲಕ ಆಡಳಿತವನ್ನು ನಡೆಸುತ್ತಿದ್ದರು. ಅವರ ಜಯಂತಿಯನ್ನು ಎಲ್ಲರು ಸೇರಿ ಆಚರಣೆ ಮಾಡಬೇಕಿದೆ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಈ ಜಯಂತಿಯನ್ನು ಆಚರಣೆ ಮಾಡಬೇಕಿದೆ ಎಂದು ಕೃಷ್ಣಮೂರ್ತಿ ತಿಳಿಸಿದರು.

ನಗರಸಭೆಯ ಮಾಜಿ ಅಧ್ಯಕ್ಷರಾದ ನಿರಂಜನ ಮೂರ್ತಿ ಮಾತನಾಡಿ, ಚಿತ್ರದುರ್ಗವನ್ನು ಆಳ್ವಿಕೆ ನಡೆಸಿದವರಲ್ಲಿ ಮದಕರಿ ನಾಯಕರಷ್ಠೇ ಪ್ರಮುಖರಾದವರು ಬಿಚ್ಚುಗತ್ತಿ ಭರವಣ್ಣ ನಾಯಕ ಸಹಾ ಚಿತ್ರದುರ್ಗದಲ್ಲಿ ಇವರ ಪ್ರತಿಮೆ ಎಲ್ಲಿಯೂ ಸಹಾ ಇಲ್ಲ ಇವರ ಪ್ರತಿಮೆಯನ್ನು ಚಿತ್ರದುರ್ಗದಲ್ಲಿ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದರು.
ಗೋಷ್ಟಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಮಂಜಪ್ಪ, ಮಾಜಿ ಸದಸ್ಯರಾದ ಗಾಡಿ ಮಂಜಣ್ಣ, ಮಾಜಿ ಉಪಾಧ್ಯಕ್ಷರಾದ ದುರುಗೇಶಪ್ಪ, ಜಯ್ಯಣ್ಣ ,ಆನಂದ್, ಮಹಾಂತೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!