ಬೆಂಗಳೂರು: ಕೈನಲ್ಲೊಂದು ಮೊಬೈಲ್, ತಿಂಗಳ ಪೂರ್ತಿ ನೆಟ್ ಫ್ರೀ ಇಷ್ಟು ಇದೆ ಎಂದ ಮಾತ್ರಕ್ಕೆ ಏನೇನೋ ಮಾಡ್ತಾ ಕೂರುವವರಿಗೆ ಸೆಲೆಬ್ರಿಟಿಗಳು ಎಷ್ಟು ಅಂತ ಉಗೀತಾರೆ ಹೇಳಿ ನೋಡೋಣಾ. ಸೆಲಡಬ್ರೆಟಿಗಳು ಎಂದಾಕ್ಷಣಾ ಅವರಿಗೂ ಮನಸ್ಸಿರಲ್ವಾ,, ನೋವಾಗಲ್ವಾ..? ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಸುದೀಪ್ ಮಗಳು ಸಾನ್ವಿ.
ಇತ್ತೀಚೆಗಷ್ಟೇ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ರಿಲೀಸ್ ಆಗಿ ಎಲ್ಲೆಡೆ ಒಳ್ಳೆಯ ಪ್ರಶಂಸೆಯನ್ನ ಪಡೆದುಕೊಂಡಿದೆ. ಈ ಸಿನಿಮಾ ಮೂಲಕ ಸಾನ್ವಿ ಕೂಡ ಅಧಿಕೃತ ಸಿಂಗರ್ ಆಗಿದ್ದಾರೆ. ಅವರ ಧ್ವನಿಯಲ್ಲಿ ಮೂಡಿ ಬಂದ ಮಸ್ತ್ ಮಲೈಕಾ ಹಾಡಿಗೆ ಎಲ್ಲರೂ ತಲೆದೂಗಿದ್ದಾರೆ. ಈ ಹಾಡಿಗೂ ಹಾಗೂ ಸಾನ್ವಿ ದೇಹದಾಕಾರಕ್ಕೂ ಸೇರಿ ಟ್ರೋಲ್ ಮಾಡಲು ಕಿಡಿಗೇಡಿಗಳು ಶುರು ಮಾಡಿದ್ದಾರೆ. ನೆಗೆಟಿವ್ ಕಮೆಂಟ್ ಗಳು ಸೆಲೆಬ್ರಿಟಿಗಳ ಲೈಫ್ ಗೆ ಸರ್ವೇ ಸಾಮಾನ್ಯ. ಆದರೆ ಅದನ್ನ ಎಲ್ಲಾ ಸಮಯಕ್ಕೂ ರಿಸೀವ್ ಮಾಡಿಕೊಳ್ಳಬೇಕಾದ ಮನಸ್ಥಿತಿ ಎಲ್ಲರಿಗೂ ಇರುವುದು ಕಷ್ಟ. ಸುದೀಪ್ ಅವರಿಗೆ ತಮ್ಮ ಮಗಳು ಎಷ್ಟು ಧೈರ್ಯವಂತೆ, ಬುದ್ಧಿವಂತೆ ಅನ್ನೋದು ಗೊತ್ತು.

ಹೀಗಾಗಿಯೇ ನಿನ್ನೆಯ ಮಾರ್ಕ್ ಸಕ್ಸಸ್ ಮೀಟ್ ನಲ್ಲಿ ನೆಗೆಟಿವ್ ಕಮೆಂಟ್ ಗಳ ಬಗ್ಗೆಯೇ ಮಾತನಾಡಿದ್ದರು. ನನ್ನ ಮಗಳು ನನಗಿಂತ ಜಾಣೆ. ಆಕೆ ನನಗಿಂತ ಎತ್ತರಕ್ಕೆ ಬೆಳೆಯುತ್ತಾಳೆ ಎಂದು ಹೇಳಿದ್ದರು. ಈಗ ಸಾನ್ವಿ ಕೂಡ ಅಂತವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನನ್ನ ದೇಗಹ ನಿಮಗೆ ಚರ್ಚೆಯ ವಿಷಯವೇ ಅಲ್ಲ. ನಿಮ್ಮ ಅಭಿಪ್ರಾಯಗಳು ನನಗೆ ಬೇಕೆನಿಸಿದರೆ ಕೇಳುತ್ತೇನೆ ಎಂದು ಬಾಡಿ ಶೇಮಿಂಗ್ ಮಾಡಿದವರಿಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದಾರೆ.










