ಒಗ್ಗರಣೆಗೆ ಮಾತ್ರ ಅಲ್ಲ ಸಾಸಿವೆಯಿಂದ ಅನೇಕ ಕಾಯಿಲೆಗಳು ದೂರಾಗ್ತವೆ..!

1 Min Read

ಸಾಸಿವೆ ಕಾಳು ಯಾರ ಮನೆಯಲ್ಲಿಲ್ಲ ಹೇಳಿ. ಸಾಸಿವೆ ಇಲ್ಲದ ಅಡುಗೆ ಮನೆ ಇರಲು ಸಾಧ್ಯವೆ ಇಲ್ಲ. ಹಾಗೇ ಸಾಸಿವೆಯಿಲ್ಲದೆ ಒಗ್ಗರಣೆಯೇ ಮುಗಿಯಲ್ಲ. ಹಾಗಂತ ಸಾಸಿವೆ ಕೇವಲ ಒಗ್ಗರಣೆಗೆ ಅಂದ್ಕೊಳ್ಳಬೇಡಿ. ಅದು ನಾನಾ ಕಾಯಿಲೆಗಳನ್ನು ಗಿಣ ಮಾಡೋ ಶಕ್ತಿ ಹೊಂದಿದೆ.

ಸಾಸಿವೆ ಹೆಚ್ಚಿನ ಪ್ರಮಾಣದಲ್ಲಿ ಖನಿಜ ಪದಾರ್ಥ ಗಳನ್ನು ಹೊಂದಿದ್ದು ಅದರಲ್ಲಿ ಕ್ಯಾಲ್ಸಿಯಂ ಪಾಸ್ಫರಸ್ ಪೊಟಾಸಿಯಂ ಮುಖ್ಯವಾದದ್ದು. ವಿಟಮಿನ್ ಎ ಅಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ. ಮೆಗ್ನೀಷಿಯಂ ಜೊತೆಗೆ ನೀರಿನಲ್ಲಿ ಕರಗುವ ನಾರಿನಂಶ ಇದರಲ್ಲಿದೆ.

ಸಾಸಿವೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಇರುತ್ತೆ.

ಸೋರಿಯಾಸಿಸ್ ಇರುವವರು ಸಾಸಿವೆಯ ಬಳಕೆಯನ್ನು ಹೆಚ್ಚಿಸುವುದು ಒಳ್ಳೆಯದು. ಪೇಸ್ಟ್ ಮಾಡಿ ಅರಿಶಿನದೊಂದಿಗೆ ಬೆರೆಸಿ ಚರ್ಮದ ಮೇಲೆ ನಿಯತವಾಗಿ ಲೇಪಿಸಿಕೊಳ್ಳುವುದರಿಂದ ಕಲೆಗಳನ್ನು ಸ್ವಲ್ಪ ಮಟ್ಟಿಗೆ ಹತೋಟಿ ಮಾಡಲು ಸಾಧ್ಯ.

ಶ್ವಾಸಕೋಶ ಸಂಬಂಧಿತ ತೊಂದರೆಗಳಿಗೆ ಹತೋಟಿಗೆ ಸಾಸಿವೆಯು ಸಹಾಯ ಮಾಡುತ್ತದೆ. ಶೀತ, ಕೆಮ್ಮು, ನೆಗಡಿ ಸೈನಸ್ ತೊಂದರೆಗಳಿಗೆ ಚಿಕಿತ್ಸಕವಾಗಿ ಕೆಲಸ ಮಾಡಬಲ್ಲದು.

ಅಸ್ತಮಾ ಬ್ರಾಂಕ್ರೈಟಿಸ್ ಸಮಸ್ಯೆ ಇರುವಾಗ ಸಾಸಿವೆಯ ಎಣ್ಣೆಗೆ ಕರ್ಪೂರವನ್ನು ಸೇರಿಸಿ ಎದೆಯ ಮೇಲೆ ನಿಧಾನವಾಗಿ ಮಸಾಜ್ ಮಾಡಿದಾಗ ಸುಲಭವಾಗಿ ಉಸಿರಾಟ ಮಾಡಲು ಸಾಧ್ಯವಾಗುತ್ತದೆ.

ಸಾಸಿವೆಯನ್ನು ಉಪಯೋಗಿಸಿ ಡಿಕಾಕ್ಷನ್ ತಯಾರಿಸಿ ಕೊಂಡು ಕುಡಿಯುವುದರಿಂದ ದೇಹದಲ್ಲಿನ ವಿಷ ವಸ್ತುಗಳನ್ನು ಹೊರ ಹಾಕಲು ಸಹಾಯವಾಗುತ್ತದೆ.

ಸಾಸಿವೆಯೂ ಆಂಟಿ ಬ್ಯಾಕ್ಟೀರಿಯಲ್ ಗುಣವನ್ನು ಹೊಂದಿದೆ.

ಸಾಸಿವೆಯ ಎಣ್ಣೆಯನ್ನು ಕೂದಲಿನ ಆರೋಗ್ಯಕ್ಕೆ ಸಹ ಬಳಕೆ ಮಾಡಬಹುದು.

ನರವ್ಯೂಹದ ಆರೋಗ್ಯಕ್ಕೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮಹಿಳೆಯರಲ್ಲಿ ಮೆನೋಪಸ್ ಸಮಯದಲ್ಲಿ ಮಾಡಬಹುದಾದ ಕಿರಿಕಿರಿಗಳ ನಿಯಂತ್ರಣಕ್ಕೆ ಸಾಸಿವೆಯು ಸಹಕಾರಿ.

Share This Article
Leave a Comment

Leave a Reply

Your email address will not be published. Required fields are marked *