Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಸಂಗೀತ ಸಾಧಕ ತೋಟಪ್ಪ ಉತ್ತಂಗಿ ಅವರಿಗೆ “ಚಿನ್ಮೂಲಾದ್ರಿ ಗಾನ ಸಿರಿ” ಗೌರವ ಪುರಸ್ಕಾರ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಜೂನ್ 23 : ಯೋಗ ಮತ್ತು ಸಂಗೀತ ಇವು ಮನುಷ್ಯರ ಅನೇಕ ಸಮಸ್ಯೆಗಳಿಗೆ ಉತ್ತರ, ಪರಿಹಾರ ನೀಡಬಲ್ಲ ಮಾಧ್ಯಮಗಳಾಗಿವೆ ಎಂದು ಚಿತ್ರದುರ್ಗ ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷರು ಯೋಗಾಚಾರ್ಯರೂ ಆದ ಎಲ್.ಎಸ್. ಚಿನ್ಮಯಾನಂದ ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘದ ವತಿಯಿಂದ ಮತಿತ್ತರ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಗರದ ಸಹ್ಯಾದ್ರಿ ಬಡಾವಣೆಯ ಯೋಗ ಬಂಧು ನಿಲಯದ ಮೇಲ್ಚಾವಣಿಯಲ್ಲಿ ಶನಿವಾರ ತೋಟಪ್ಪ ಉತ್ತಂಗಿಯವರಿಗೆ ಹಮ್ಮಿಕೊಂಡಿದ್ದ ಚಿನ್ಮುಲಾದ್ರಿ ಗಾನಸಿರಿ” ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸಾಂಸ್ಕøತಿಕ ಕ್ಷೇತ್ರವನ್ನು ಆಧರಿಸಿ, ಅನುಸರಿಸಿ ಅನುಷ್ಠಾನಕ್ಕೆ ತರಬೇಕಿದೆ. ಈ ಹಿನ್ನೆಲೆಯಲ್ಲಿ ಎರಡರ ಮಹತ್ವ ಒಂದೇ ದಿನ ಬಂದಿರುವುದು ವಿಶೇಷವೇ ಆಗಿದೆ. ತೋಟಪ್ಪ ಉತ್ತಂಗಿ ಅವರು ಸಂಗೀತ ಕ್ಷೇತ್ರದಲ್ಲಿ ಅಗಾದ ಸಾಧನೆ ಮತ್ತು ಸೇವೆ ಸಲ್ಲಿಸಿದ ಕಾರಣ ಅವರನ್ನ ಅಭಿನಂದಿಸುವ ಹಾಗೂ ಗೌರವಿಸುವ ಕೆಲಸ ಮಾಡಲಾಗಿದೆ. ಹಿಂದೆ ಗುರುವಿದ್ದಲ್ಲಿಗೆ ಶಿಷ್ಯರು ಬಂದು ವಿದ್ಯೆಕಲಿತುಕೊಳ್ಳುವ ವಾಡಿಕೆ ಇತ್ತು. ಕ್ರಮೇಣ ಇಂದು ಬದಲಾದ ಸನ್ನಿವೇಶದಲ್ಲಿ ಜನರ ಬಳಿಗೆ ಕೊಂಡೊಯ್ಯುವ ಪರಿಸ್ಥಿತಿ ಬಂದಿದೆ. ಒಟ್ಟಿನಲ್ಲಿ ನಾವು-ನೀವು ಸೇರಿ ಸುಸಂಸ್ಕøತ, ಸನ್ನಡತೆಯ ಆರೋಗ್ಯ ಪೂರ್ಣ ಸಮೃದ್ಧ ಸಮಾಜಕ್ಕೆ ನಮ್ಮ ಕೈಲಾದ ಸೇವೆ ಮಾಡುವ ಅಗತ್ಯವಿದೆ ಎಂದರು.

ಕನ್ನಡ ಸಂಸ್ಕøತಿ ಇಲಾಖೆ ಪ್ರಭಾರೆ ಸಹಾಯ ನಿರ್ದೇಶಕರಾದ ಬಿ.ಎಂ. ಗುರುನಾಥ ಅವರು ಮಾತನಾಡಿ ಯೋಗ ಒಂದು ವಿಜ್ಞಾನ. ಅದನ್ನ ಅನೇಕರು ಉಳಿಸಿ ಬೆಳಸಿದ್ದಾರೆ. 5 ಸಾವಿರ ವರ್ಷಗಳ ಹಿಂದೆ ಬುದ್ದ ವಿಪಷನ ಧ್ಯಾನವನ್ನು ಪರಿಚಯಿಸುವ ಮೂಲಕ  ಹೊಸ ಆಯಾಮ ನೀಡಿದ. ಸಂಗೀತವು ನಮ್ಮ ಭಾರತದಲ್ಲಿ ಅಗಾಧವಾಗಿ ಬೆಳೆದಿದೆ. ದಾಸ, ವಚನ, ಜಾನಪದ ಇತರೆ ಸಾಹಿತ್ಯ ಪ್ರಕಾರಗಳ ಮೂಲಕ ಜನರನ್ನ ಸಂಗೀತ ಮುಟ್ಟಿದೆ. ಕೇವಲ ಕೇಳಿ ಭಾವುಕರಾಗದೆ ಅದನ್ನ ಅನುಭವಿಸಬೇಕೆಂದು, ಅದು ಮುಂದಿನ ಪೀಳಿಗೆ ಅನುಸರಿಸಲು ಸರಿಯಾದ ಕ್ರಮವನ್ನು ಹಾಕಿಕೊಡಬೇಕೆಂದರು.

ನಿವೃತ್ತ ಮುಖ್ಯ ಶಿಕ್ಷಕ ಹುರುಳಿ ಎಂ. ಬಸವರಾಜು  ವಿಷಯ ಪ್ರಸ್ತಾಪ ಮಾಡುತ್ತಾ ಪುರಾತನ ಕಲೆಗಳನ್ನು ಇಂದಿನವರು ಅನುಸರಿಸಿಕೊಂಡು ಹೋಗುವ ಹೊಣೆಗಾರಿಕೆ ಹೊರಬೇಕಿದೆ. ಅದಕ್ಕೆ ಸರಿಯಾದ ಮಾರ್ಗದರ್ಶಕರ ಅಗತ್ಯವೂ ಇದೆ ಹಿಂದೆ ಶ್ರಮಾಧಾರಿತ ದುಡಿಮೆ ದೈಹಿಕಶ್ರಮ ಇತ್ತು. ಕಾಲ ಕ್ರಮೇಣ ನಾವು ಸುಲಭದ ಹಾದಿ ಕಂಡುಕೊಂಡು ಕಸರತ್ತು ಕಡಿಮೆಯಾದ ಪ್ರತಿ ಫಲವೋ ಎಂಬಂತೆ ಮನುಷ್ಯರಿಗೆ ಅನೇಕ ರೋಗಗಳು ಬಂದು ಈಗೀಗ ಯೋಗದ ಕಡೆ ಮುಖಮಾಡಿದ್ದಾರೆ. ಹಾಗೆಯೇ ಸಂಗೀವೂ ಪುರಾತನ ಕಲೆ. ವಿಶ್ವದಲ್ಲಿ ಹೆಸರುಮಾಡಿರುವ ಸಂಗೀತದ ಮೋಡಿಗೆ ಮನಸೋಲದವರೆ ಕಡಿಮೆ. ಆ ಕ್ಷೇತ್ರದಲ್ಲಿ  ಅತಿರಥ ಮಹಾರಥರು ಆಗಿ ಹೋಗಿದ್ದಾರೆ. ಹಾಗೆಯೇ ಆ ಕ್ಷೇತ್ರಕ್ಕೆ ಅನುಪಮ ಸೇವೆಯನ್ನು ಸಲ್ಲಿಸಿದ್ದಾರೆ ಎಂದರು.

 

ಹಿನ್ನಲೆ ಗಾಯಕ, ಸಂಗೀತ ನಿರ್ದೇಶಕರು ಆದ ಗವಾಯಿ ಪಂಡಿತ್ ತೋಟಪ್ಪ ಉತ್ತಂಗಿ ಅವರು. ವಚನ ಭಾವಗೀತೆ, ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಈ ನಾಡಿಗೆ ಕಾಣ್ಕೆ ನೀಡಿದ ಪಂಡಿತ್ ಪಂಚಾಕ್ಷರ ಗವಾಯಿಗಳವರ ಮೇಲಿನ ಗೀತೆಗಳನ್ನು ಹಾಡುವುದರ ಮೂಲಕ ವಿಶ್ವ ಸಂಗೀತ ದಿನಕ್ಕೆ ಮೆರಗು ತಂದುಕೊಟ್ಟರು. ಅವರ ಜತೆಗೆ ಹಾಡುಗಾರ್ತಿ ಕೋಕಿಲಾ ಎಂ.ಜೆ. ಪಕ್ಕವಾದ್ಯಗಳ ಸಾಥ್ ನೀಡಿದ ಅಭಿಷೇಕ್ ಹಾಗೂ ಶರಣ್ ಅವರುಗಳ ತಂಡ ಸುಶ್ರಾವ್ಯ ಗೀತೆಗಳನ್ನು ಹಾಡಿ ಶೋತೃಗಳ ಮನಗೆದ್ದರು.

ಈ ಸಂದರ್ಭದಲ್ಲಿ ವಿವಿಧ ಸಂಘ, ಸಂಸ್ಥೆ, ಸಂಘಟನಗಳ ಪದಾಧಿಕಾರಿಗಳಾದ ರಾಜಶೇಖರ್, ಬಸವರಾಜಕಟ್ಟಿ, ಬಿ.ಟಿ.ನಂದೀಶ್, ಪರಶುರಾಮ್, ಕಾಂತರಾಜ್, ವೆಂಕಟೇಶ್, ಗಣೇಶಯ್ಯ, ವೀರೇಶ್, ರಂಗಸ್ವಾಮಿ, ಹೇಮಲತ, ವಿನಾಯಕ, ಅನುಸೂಯ, ರುಕ್ಮಿಣಿ, ಸುರಯ್ಯ ಸೇರಿದಂತೆ ವ್ಯಪಾರಸ್ಥರು, ಯೋಗಾಸಕ್ತರು, ಸಂಗೀತ ಪ್ರೇಮಿಗಳು ಭಾಗವಹಿಸಿದ್ದರು.

ಕೋಕಿಲಾ ಎಂ.ಜೆ. ಪ್ರಾರ್ಥನೆ ಹಾಡಿದರು. ಟಿ.ವೀರಭದ್ರಸ್ವಾಮಿ ಸ್ವಾಗತಿಸಿದರು. ಶಿಕ್ಷಕಿ ವಿಮಲಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ಯೋಗ ತರಬೇತುದಾರ ಶಿಕ್ಷಕ ಎಂ.ಟಿ. ಮುರುಳಿ ಶರಣು ಸಮರ್ಪಣೆ ಮಾಡಿದರು.  ಯೋಗ ಮತ್ತು ಸಂಗೀತದ ಮಹತ್ವ ಕುರಿತಾಗಿ ಚಿಂತನೆ ಹಾಗೂ ಅವುಗಳಿಂದಾಗುವ ಪ್ರಭಾವ, ಪರಿಣಾಮಗಳನ್ನು ಚಿಂತನೆಗೆ ಹಚ್ಚುವ ಕಾರ್ಯಕ್ರಮ ನಡೆಯಿತು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment