Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗೊಂದಲದ ಮನಸ್ಸುಗಳಿಗೆ ಸಂಗೀತವೇ ಮದ್ದು: ಚಿತ್ರದುರ್ಗ ಜೈಲಿನಲ್ಲಿ ಸಾಂಸ್ಕೃತಿಕ ಕಲರವ

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮೇ. 26 : ಜೈಲುಗಳು ಮಾನಸಿಕವಾಗಿ ಮನುಷ್ಯನನ್ನು ಬದಲಾವಣೆ ಮಾಡುವ ಸ್ಥಳಗಳಾಗಿವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.

ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ, ಪ್ರಜಾ ಸೇವಾ ಸಾಂಸ್ಕøತಿಕ ಮತ್ತು ಕ್ರೀಡಾ ಸಂಘ(ರಿ) ಮಳಲಿ, ಚಿತ್ರದುರ್ಗ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರಾಗೃಹದಲ್ಲಿ ಸೋಮವಾರ ನಡೆದ ಸಾಂಸ್ಕøತಿಕ ಸೊಬಗು-2026 ಉದ್ಘಾಟಿಸಿ ಮಾತನಾಡಿದರು.

ಸಂಗೀತಕ್ಕೆ ಮನಸ್ಸಿಗೆ ಮುದ ನೀಡುವ ಶಕ್ತಿಯಿದೆ. ವಿಚಾರಣಾಧೀನ ಖೈದಿಗಳು ನಾನಾ ಕಾರಣಗಳಿಂದ ಜೈಲು ಸೇರಿರಬಹುದು. ನೀವುಗಳು ಇಲ್ಲಿ ಏಕಾಂತದಲ್ಲಿರುವುದರಿಂದ ಮನಸ್ಸು ಬದಲಾವಣೆಗೆ ಅವಕಾಶವಿದೆ. ಸಿಟ್ಟಿನ ಕೈಗೆ ಬುದ್ದಿಯನ್ನು ಕೊಡಬೇಡಿ. ಸ್ವಾತಂತ್ರ ಸಮರದಲ್ಲಿ ಪಾಲ್ಗೊಂಡು ಜೈಲು ವಾಸ ಅನುಭವಿಸಿರುವವರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಪುಸ್ತಕ ರೂಪದಲ್ಲಿ ಬರೆದಿದ್ದಾರೆ. ಜೈಲಿನಲ್ಲಿರುವ ಗೊಂದಲದ ಮನಸ್ಸುಗಳಿಗೆ ಸಂಗೀತ ಸಂತೋಷ, ಉಲ್ಲಾಸವನ್ನುಂಟು ಮಾಡುತ್ತದೆ ಎಂದರು.

 

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಮಾತನಾಡಿ ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ರೀತಿಯ ಕಲೆಯಿರುತ್ತದೆ. ಹೊರ ಹಾಕಲು ಅವಕಾಶ ಸಿಗುವುದಿಲ್ಲ. ಗೀತಗಾಯನ, ತತ್ವಪದ, ಜಾನಪದ ಹಾಡುಗಳು ಮನಸ್ಸನ್ನು ಅರಳಿಸುತ್ತವೆ. ಬದುಕನ್ನು ಹಸನು ಮಾಡಿಕೊಳ್ಳುವ ಸಂದರ್ಭದಲ್ಲಿ ತತ್ವವಿರಬೇಕು. ಆಗ ಮಾತ್ರ ಆಚಾರವಂತ, ವಿಚಾರವಂತನಾಗಲು ಸಾಧ್ಯ ಎಂದು ತಿಳಿಸಿದರು.
ತಪ್ಪು ಮಾಡಿಯೋ ಇಲ್ಲ ಯಾವ ತಪ್ಪನ್ನು ಮಾಡದಿದ್ದರೂ ಕೆಲವೊಮ್ಮೆ ಜೈಲು ಸೇರುವ ಸಂದರ್ಭ ಎದುರಾಗುತ್ತದೆ. ನೀತಿ, ನೀಯತ್ತು, ಧರ್ಮ, ಮಾತಿನಲ್ಲಿ ಹಿಡಿತವಿದ್ದವರು ಆರೋಗ್ಯ ಪೂರ್ಣ ಬದುಕು ಕಟ್ಟಿಕೊಳ್ಳಬಹುದು. ದಾಸರ ಗೀತೆ, ರಂಗಗೀತೆ, ಜಾನಪದ ಗೀತೆ ಇವುಗಳು ವಿವೇಚನೆ ಮಾಡಲು ಅವಕಾಶ ನೀಡುತ್ತವೆ ಎಂದು ನುಡಿದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಂಧೀಖಾನೆ ಅಧೀಕ್ಷಕ ಸಿದ್ದರಾಮ ಬಿ.ಪಾಟೀಲ್ ಮಾತನಾಡುತ್ತ ಬಂಧಿಖಾನೆಯಲ್ಲಿರುವವರು ತಮ್ಮೊಳಗಿನ ಕಾವ್ಯ, ಸಂಗೀತವನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಇಂತಹ ಕಾರ್ಯಕ್ರಮಗಳ ಮೂಲಕ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರ ಸೂಸಬೇಕೆಂದು ವಿಚಾರಣಾಧೀನ ಖೈದಿಗಳಿಗೆ ತಿಳಿಸಿದರು.

 

ಜೈಲರ್ ರಾಜೇಂದ್ರ ಕೊಪರ್ಡೆ, ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಶ್ರೀನಿವಾಸ ಮಳಲಿ, ಭಾಗ್ಯಮ್ಮ ಇವರುಗಳು ವೇದಿಕೆಯಲ್ಲಿದ್ದರು.
ಎಂ.ಕೆ.ಹರೀಶ್ ಮತ್ತು ತಂಡ, ಕೆ.ಗಂಗಾಧರ್ ಮತ್ತು ಸಂಗಡಿಗರು, ಚನ್ನಬಸಪ್ಪ ಮತ್ತು ಸಂಗಡಿಗರು, ಮಹಿಳಾ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಯಶೋಧಮ್ಮ ಇವರುಗಳು ಜಾನಪದ ಹಾಡು, ರೈತ ಗೀತೆ, ಹಳೆ ಚಿತ್ರಗೀತೆಗಳನ್ನು ಹಾಡಿ ಬಂಧಿಖಾನೆಯಲ್ಲಿರುವ ಖೈದಿಗಳನ್ನು ರಂಜಿಸಿದರುಸೌಹಾರ್ದ

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now