Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮುನಿರತ್ನ ಕಚೇರಿಗೆ ಬೀಗ : ಕುಸುಮಾ ಮೇಲೆ ಹರಿಹಾಯ್ದ ಶಾಸಕ

---Advertisement---

ಬೆಂಗಳೂರು: ಇಂದು ಶಾಸಕ ಮುನಿರತ್ನ ಅವರ ಎಂಎಲ್ಎ ಕಚೇರಿಗೆ ಬೀಗ ಜಡಿದಿದ್ದಾರೆ. ಈ ಬಗ್ಗೆ ಮುನಿರತ್ನ ಆಕ್ರೋಶ ಹೊರ ಹಾಕಿದ್ದು, ಇದು ಎಂಎಲ್ಎ ಆಫೀಸ್. ಅದರೊಳಗೆ ಪಟಾಕಿ ಇದೆ, ನೋಡಬೇಕು ಅಂತ ಹೇಳಿ ಬೀಗ ಹೊಡಿತೀನಿ ಅಂತಿದ್ದಾರೆ. ಸಾರ್ವಜನಿಕರ ಕುಂದು ಕೊರತೆಗಳನ್ನ ಹೊತ್ತು ಬರುವವರಿಗೆ ಅನುಕೂಲವಾಗಲಿ ಅಂತ ಮಾಡಿರುವ ಆಫೀಸ್. ದೌರ್ಜನ್ಯ ಬಹಳ ಮಿತಿಮೀರಿ ಹೋಗಿದೆ. ಎಲ್ಲದಕ್ಕಿಂತ ತೊಂದರೆ ಅನುಭವಿಸುವವರು ಯಾರಿದ್ದಾರೆ ಅಂದ್ರೆ ಅದು ಲಕ್ಷ್ಮೀದೇವಿ ನಗರದ ಜನತೆ ಎಂದಿದ್ದಾರೆ.

ಪಟಾಕಿ ಹಂಚಬಾರದು ಎಂದು ಹೀಗೆ ಮಾಡಿದ್ದಾರೆ. ಈಗ ಬಿಲ್ ತಗೊಂಡು ಕಾನೂನು ಬದ್ಧವಾಗಿ, ಪೊಲೀಸರಿಗೆ ಒಂದು ಲೀಸ್ಟ್ ಕೊಟ್ಟು, ಇಂಥ ಮನೆಗೆ ಇಂಥವರು ಕೊಡ್ತಾರೆ. ನೀವ್ ಬೇಕಾದ್ರೆ ಪರಿಶೀಲನೆ ನಡೆಸಿ ಅಂತ ಹೇಳೋಣಾ ಅಂತ ಇದ್ದೀನಿ. ಪಟಾಕಿ ಬೇಕಾದವರಯ ಬಂದು ತೆಗೆದುಕೊಂಡು ಹೋಗ್ತಾರೆ ಎಂದಿದ್ದಾರೆ.

ಇದೇ ವೇಳೆ ಕುಸುಮಾ ಮೇಲೆ ಹೌಹಾರಿದ ಮುನಿರತ್ನ, ಡಿಕೆ ರವಿ ಸತ್ತಾಗ ವಿಧಾನಸೌಧದ ಬಳಿ ಕೂತ್ಕೊಂಡು, ಅಪ್ಪ – ಮಗಳು ತಲೆ ಹೊಡ್ಕೊಂಡು, ಬಾಯಿ ಬಡ್ಕಂಡು ನನ್ನ ಗಂಡನ್ನ ಕೊಂದು ಬಿಟ್ರು ಅಂತ ಹೇಳಿ, ಗಲಾಟೆ ಮಾಡಿ, ಜಾರ್ಜ್ ರಾಜೀನಾಮೆ ಕೊಡ್ಸಿ, ತನಿಖೆಗೆ ಕೊಡ್ಸಿ, ಸಿದ್ದರಾಮಯ್ಯ ಅವರ ಜೊತೆಗೆ ನಾನೇ ಇದ್ದೀನಿ ಅವತ್ತು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾನೇ ನೋಡ್ಕೊಂಡ್ ಬಂದಿದ್ದೀನಿ. ರಿಪೋರ್ಟ್ ತಿರುಚುಬಿಟ್ಟರು ಅಂತ ಹೇಳಿದ್ರು. ಕಾಂಗ್ರೆಸ್ ಪಾರ್ಟಿ ಮೇಲೆ ಅಷ್ಟೆಲ್ಲ ಗಲಾಟೆ ಮಾಡಿದ್ರು. ಆಮೇಲೆ ಏನಾಯ್ತು ಅಪ್ಪ ಕಾಂಗ್ರೆಸ್ ಪಾರ್ಟಿಯಲ್ಲಿ ಚೇರ್ಮನ್, ಈಗ ಮಗಳು ಎಂಎಲ್ಎ ಮಾಡೋಕೆ ಹೊರಟವರೆ ಅಂತ ಕಿಡಿಕಾರಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...