ದಾವಣಗೆರೆಯಲ್ಲಿ ಅಳಿಯನ ಜೊತೆಗೆ ಅತ್ತೆ ಎಸ್ಕೇಪ್ : ಮಗಳ ಬದುಕೇನು..?

1 Min Read

ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಏನಾಗ್ತಾ ಇದಾವೆ ಅನ್ನೋದೇ ಅರ್ಥವಾಗ್ತಿಲ್ಲ. ಕೆಲವೊಂದು ಘಟನೆಗಳನ್ನ ನೋಡಿದ್ರೆ ಸಂಬಂಧಗಳ ಮೇಲೆ ನಂಬಿಕೆಯೇ ಕಳೆದುಗೊ ಬಿಡುತ್ತದೆ. ಅಂಥದ್ದೊಂದು ಘಟನೆ ದಾವಣಗೆರೆಯಲ್ಲಿ ನಡೆದಿದೆ. ಜಿಲ್ಲೆಯಲ್ಲಿ ಒಂದು ವಿಚಿತ್ರ ಪ್ರಕರಣವೊಂದು ನಡೆದಿದೆ. ಅಳಿಯನ ಜೊತೆಗೆ ಅತ್ತೆಯೇ ಎಸ್ಕೇಪ್ ಆಗಿರುವಂತೆ ಘಟನೆ ನಡೆದಿದೆ. 25 ವರ್ಷದ ಗಣೇಶ್ ಎಂಬಾತನೊಂದಿಗೆ 55 ವರ್ಷದ ಅತ್ತೆ ಪರಾರಿಯಾಗಿದ್ದಾಳೆ. ಈ ವಿಚಾರ ಕೇಳಿ ಎಂಥಾ ಕಾಲ ಬಂತಪ್ಪ ಅಂತಿದ್ದಾರೆ ಜನ.

ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಣೇಶ್, ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದವನು. ಈ ಗಣೇಶ್ ಗೆ ನಾಗರಾಜ್ ಎನ್ನುವವರು ತನ್ನ ಮಗಳನ್ನು ಕೊಟ್ಟಿದ್ದರು. ನಾಗರಾಜ್ ಇಬ್ಬರು ಹೆಂಡತಿಯರು. ಗಣೇಶ್ ಗೆ ಮದುವೆ ಮಾಡಿಕೊಟ್ಟಿದ್ದ ಮಗಳು ಮೊದಲ ಹೆಂಡತಿಯ ಮಗಳು. ಮಗಳನ್ನು ಬಿಟ್ಟು ನಾಗರಾಜ್ ಎರಡನೇ ಹೆಂಡತಿಯನ್ನೆ ಓಡಿಸಿಕೊಂಡು ಹೋಗಿದ್ದಾನೆ.

ಈ ಬಗ್ಗೆ ನಾಗರಾಜ್ ಮಾತನಾಡಿದ್ದು, ಕಳೆದ ಹದಿಮೂರು ವರ್ಷದ ಹಿಂದೆ ಶಾಂತಮ್ಮಳನ್ನು ಮದುವೆಯಾಗಿದ್ದೆ. ಗಣೇಶನನ್ನ ಮನೆ ಅಳಿಯನಾಗಿ ಇರ್ತಾನೆ. ಮಗಳನ್ನ ಚೆನ್ನಾಗಿ ನೋಡಿಕೊಳ್ತಾನೆ ಅಂತ ನಂಬಿಸಿ, ಮದುವೆ ಮಾಡಿಸಿದ್ದಳು. ಅವರಿಬ್ಬರ ನಡುವೆ ಅಕ್ರಮ ಸಂಬಂಧ ಇದ್ದದ್ದನ್ನು ಕಂಡ ನನ್ನ ಮಗಳು ನನಗೆ ರೆಕಾರ್ಡ್ ಹಾಗೂ ಸ್ಕ್ರೀನ್ ಶಾಟ್ಸ್ ಕಳುಹಿಸಿದ್ದಳು. ಅದನ್ನು ನೋಡಿ ಅವಳಿಗೆ ಎರಡೇಟು ಹೊಡೆದೆ. ನನ್ನ ಮಗಳನ್ನು ಚನ್ನಗಿರಿ ಬಸ್ ನಿಲ್ದಾಣದಲ್ಲಿ ಬಿಟ್ಟು ಅಳಿಯ ಪರಾರಿಯಾಗಿದ್ದಾನೆ. ಅದಾದ ದಿನವೇ ಶಾಂತಮ್ಮ ಕೂಡ ಹಣ, ಒಡವೆ ಜೊತೆಗೆ ಪರಾರಿಯಾಗಿದ್ದಾಳೆ. ಶಾಂತಮ್ಮ ಈ ಮೊದಲೇ ಎರಡು ಮದುವೆಯಾಗಿದ್ದಳಂತೆ ಎಂದು ಆಕೆಯ ಪತಿ ನಾಗರಾಜ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *